IPL 2021:ರುತುರಾಜ್ ಹೋರಾಟ, ಮುಂಬೈಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ CSK!

By Suvarna NewsFirst Published Sep 19, 2021, 9:18 PM IST
Highlights
  • ಚೆನ್ನೈ vs ಮುಂಬೈ ನಡುವಿನ ಲೀಗ್ ಪಂದ್ಯ
  • ಮುಂಬೈ ದಾಳಿಗೆ ತತ್ತರಿಸಿದ ಚೆನ್ನೈಗೆ ರುತುರಾಜ್ ಆಸರೆ
  • ದುಬೈನಲ್ಲಿ ನಡೆಯುತ್ತಿರುವ ಪಂದ್ಯ
     

ದುಬೈ(ಸೆ.19):  ಐಪಿಎಲ್ 2021ರ 2ನೇ ಭಾಗ ದುಬೈನಲ್ಲಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಲೀಗ್ ಪಂದ್ಯ ಇದೀಗ ಹಲವು ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ದಾಳಿ ನಡುವೆ ರುತುರಾಜ್ ಗಾಯಕ್ವಾಡ್ ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿದೆ.

ಮುಂಬೈ ಇಂಡಿಯನ್ಸ್ ದಾಳಿಗೆ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡ ಸಿಎಸ್‌ಕೆ ಸಂಕಷ್ಟಕ್ಕೆ ಸಿಲುಕಿತು. ಫಾಫ್ ಡುಪ್ಲೆಸಿಸ್, ಮೊಯಿನ್ ಆಲಿ ಡಕೌಟ್ ಆದರೆ, ಅಂಬಾಟಿ ರಾಯುಡು ಗಾಯಗೊಂಡು ಹೊರನಡೆದರು. ಇತ್ತ ಸುರೇಶ್ ರೈನಾ, ನಾಯಕ ಎಂ.ಎಸ್.ಧೋನಿ ಕೂಡ ಆಸರೆಯಾಗಲಿಲ್ಲ.

ರವೀಂದ್ರ ಜಡೇಜಾ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಆರಂಭಿಕ ರುತುರಾಜ್ ಗಾಯಕ್ವಾಡ್ ಚೆನ್ನೈ ತಂಡಕ್ಕೆ ಆಸರೆಯಾದರು. ರುತುರಾಜ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಜಡೇಜಾ ಕೂಡ ಉತ್ತಮ ಸಾಥ್ ನೀಡಿದರು. ಜಡೇಜಾ 26 ರನ್ ಸಿಡಿಸಿ ಔಟಾದರು.

ರುತುರಾಜ್ ಹೋರಾಟ ಮುಂದುವರಿಸಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಚೆನ್ನೈ ತಂಡಕ್ಕೆ ರುತುರಾಜ್ ಬ್ಯಾಟಿಂಗ್ ಆಕ್ಸಿಜನ್ ನೀಡಿತು. ಅಂತಿಮ ಹಂತದಲ್ಲಿ ಡ್ವೇನ್ ಬ್ರಾವೋ ಸ್ಫೋಟಕ ಬ್ಯಾಟಿಂಗ್ ಚೆನ್ನೈ ತಂಡದ ರನ್ ವೇಗ ಹೆಚ್ಚಿಸಿತು.

ಬ್ರಾವೋ 23 ರನ್ ಸಿಡಿಸಿ ಔಟಾದರೆ, ರುತರಾಜ್ ಅಜೇಯ 88 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 6 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿತು. ಟ್ರೆಂಟ್ ಬೋಲ್ಟ್, ಆ್ಯಡಮ್ ಮಿಲ್ನೆ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಉರುಳಿಸಿದರು
 

click me!