
ಮುಂಬೈ(ಏ.19): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲು ವಿಫಲರಾಗಿದ್ದಾರೆ. ಆದರೆ ಟೇಲ್ ಎಂಡರ್ಸ್ ಅಬ್ಬರಿಂದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 9 ವಿಕೆಟ್ ನಷ್ಟಕ್ಕೆ 188ರನ್ ಸಿಡಿಸಿದೆ. ಈ ಮೂಲಕ ಚೆನ್ನೈ ರಾಜಸ್ಥಾನಕ್ಕೆ ಸಾಧಾರಣ ಗುರಿ ನೀಡಿದೆ
ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ರುತುರಾಜ್ ಗಾಯಕ್ವಾಡ್ 10 ರನ್ ಸಿಡಿಸಿ ಔಟಾದರು. ಆದರೆ ಫಾಫ್ ಡುಪ್ಲೆಸಿಸ್ ಹೋರಾಟ ಚೆನ್ನೈ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಡುಪ್ಲಸಿಸ್ 33 ರನ್ ಸಿಡಿಸಿ ಔಟಾದರು. ಚೆನ್ನೈ ಸೂಪರ್ ಕಿಂಗ್ಸ್ 45 ರನ್‌ಗೆ 2 ವಿಕೆಟ್ ಕಳೆದುಕೊಂಡಿತು.
ಮೊಯಿನ್ ಆಲಿ ಹಾಗೂ ಸುರೇಶ್ ರೈನಾ ಜೊತೆಯಾಟ ಕೂಡ ಹೆಚ್ಚು ಹೊತ್ತು ಇರಲಿಲ್ಲ. ಮೊಯಿನ್ ಆಲಿ 26 ರನ್ ಸಿಡಿಸಿ ಔಟಾದರು. ಇನ್ನು ಸುರೇಶ್ ರೈನಾ 18 ರನ್ ಗಳಿಸಿ ಔಟಾದರು. ಅಂಬಾಟಿ ರಾಯುಡು 27 ರನ್ ಸಿಡಿಸಿ ಔಟಾದರು.
ರವೀಂದ್ರ ಜಡೇಜಾ ಹಾಗೂ ಎಂ.ಎಸ್.ಧೋನಿ ಅಂತಮ ಹಂತದಲ್ಲಿ ಹೋರಾಟ ನಡೆಸಿದರು. ಧೋನಿ 18 ರನ್ ಸಿಡಿಸಿ ಔಟಾದರು. ಸ್ಯಾಮ್ ಕುರನ್ ಬಿರುಸಿನ ಬ್ಯಾಟಿಂಗ್ ಮೂಲಕ 12 ರನ್ ಸಿಡಿಸಿ ರನೌಟ್ ಆದರು. ಡ್ವೇನ್ ಬ್ರಾವೋ ಅಜೇಯ 20 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.