
ಶಾರ್ಜಾ(ಸೆ.24): ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಮೊದಲ ಪಂದ್ಯದಲ್ಲೇ ಭಾರೀ ಆಘಾತ ಎದುರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore), ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕೇವಲ 92 ರನ್‌ಗಳಿಗೆ ಆಲೌಟ್ ಆಗಿದ್ದ ಆರ್‌ಸಿಬಿ, 9 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ವಿರಾಟ್ ಕೊಹ್ಲಿ(Virat Kohli), ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೇಲ್‌ರಂತಹ ವಿಶ್ವಶ್ರೇಷ್ಠ ಬ್ಯಾಟರ್‌ಗಳು ವಿಫಲರಾಗಿದ್ದು, ಆರ್‌ಸಿಬಿಗೆ ದುಬಾರಿ ಆಯಿತು. ದೇವದತ್ ಪಡಿಕ್ಕಲ್, ಸಚಿನ್ ಬೇಬಿ, ವನಿಂದು ಹಸರಂಗ ಸಹ ಕೆಕೆಆರ್ ಬೌಲರ್‌ಗಳ ಮುಂದೆ ನಿರುತ್ತರಾದರು. ಪರಿಣಾಮ ಆರ್‌ಸಿಬಿ 100ರ ಗಡಿ ಸಹ ದಾಟಲು ಸಾಧ್ಯವಾಗಿರಲಿಲ್ಲ.
IPL 2021: ಮುಂಬೈ ಮಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ KKR!
ಇದೀಗ ಸಿಎಸ್‌ಕೆ(CSK) ವಿರುದ್ಧದ 2ನೇ ಪಂದ್ಯಾದಲ್ಲಾದರೂ ಆರ್‌ಸಿಬಿಯ ಬ್ಯಾಟರ್‌ಗಳು ಸಿಡಿದೇಳಬೇಕಿದೆ. ಆರಂಭಿಕರಾದ ಕೊಹ್ಲಿ, ಪಡಿಕ್ಕಲ್ ಉತ್ತಮ ಅಡಿಪಾಯ ಒದಗಿಸಬೇಕಿದೆ. ಎಬಿಡಿ, ಮ್ಯಾಕ್ಸ್‌ವೇಲ್ ನೈಜ ಪ್ರದರ್ಶನ ತೋರಿದರೆ ಜಯ ಸುಲಭವಾಗಲಿದೆ. ಇನ್ನು ಮೊದಲ ಪಂದ್ಯದಲ್ಲಿ ಸಿರಾಜ್, ಹರ್ಷಲ್ ಉತ್ತಮ ಪ್ರದರ್ಶನ ತೋರಿದರಾದರೂ, ಜೇಮಿಸನ್, ಚಹಲ್, ಹಸರಂಗ ಪ್ರತಿ ಓವರ್‌ಗೆ 10ಕ್ಕೂ ಹೆಚ್ಚು ರನ್ ಬಿಟ್ಟು ಕೊಟ್ಟು ದುಬಾರಿ ಆದರು. ವಿಕೆಟ್ ಉರುಳಿಸುವಲ್ಲೂ ವಿಫಲರಾದರು. ಬೌಲಿಂಗ್‌ನಲ್ಲೂ ಸುಧಾರಿತ ಪ್ರದರ್ಶನ ನೀಡಬೇಕಿದೆ. ಒಂದೊಮ್ಮೆ ಈ ಪಂದ್ಯದಲ್ಲೂ ಸೋತರೆ ಪ್ಲೇ ಆಫ್‌ಗೇರುವ ಆರ್‌ಸಿಬಿ ಹಾದಿ ಕಠಿಣವಾಗಲಿದೆ.
ವಿಶ್ವಾಸದಲ್ಲಿ ಸಿಎಸ್‌ಕೆ:
ಇನ್ನು ಆರಂಭಿಕ ಆಘಾತದಿಂದ ಸುಧಾರಿಸಿಕೊಂಡು ಮುಂಬೈ ವಿರುದ್ಧ 20 ರನ್‌ಗಳ ಅಧಿಕಾರಯುತ ಜಯ ಸಾಧಿಸಿದ ಧೋನಿ ನೇತೃತ್ವದ ಸಿಎಸ್‌ಕೆ ವಿಶ್ವಾಸ ಅಲೆಯಲ್ಲಿ ತೇಲುತ್ತಿದೆ. ಆರ್‌ಸಿಬಿ(RCB) ವಿರುದ್ಧವೂ ಇದೇ ಪ್ರದರ್ಶನ ತೋರಿ ಪ್ಲೇ ಆಫ್‌ಗೆ ಮತ್ತಷ್ಟು ಸನಿಹವಾಗುವ ಲೆಕ್ಕಾಚಾರದಲ್ಲಿದೆ. ಆವೃತ್ತಿಯ ಮೊದಲ ಭಾಗದಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ 69 ರನ್ ಜಯ ಸಾಧಿಸಿತ್ತು.
ಪಿಚ್ ರಿಪೋರ್ಟ್:
ಶಾರ್ಜಾ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದ್ದು, ವೇಗಿಗಳಿಗೂ ಹೆಚ್ಚಿನ ನೆರವು ನೀಡುವ ಸಂಭವವಿದೆ. ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಮೊದಲು ಬ್ಯಾಟ್ ಮಾಡುವ ತಂಡ 170+ ರನ್ ಮಾಡಿದ್ರೆ ಗೆಲ್ಲುವ ಅವಕಾಶ ಹೆಚ್ಚು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.