IPL 2021: ಮುಂಬೈ ಮಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ KKR!

By Suvarna NewsFirst Published Sep 23, 2021, 11:05 PM IST
Highlights
  • ಗೆಲುವಿನ ನಾಗಾಲೋಟ ಮುಂದುವರಿಸಿದ ಕೆಕೆಆರ್
  • ಮುಂಬೈ ವಿರುದ್ಧ ಕೋಲ್ಕತಾಗೆ 7 ವಿಕೆಟ್ ಗೆಲುವು
  • ಮತ್ತೆ ಸೋಲಿನ ಕಹಿ ಅನುಭವಿಸಿದ ಮುಂಬೈ ಇಂಡಿಯನ್ಸ್

ಅಬು ಧಾಬಿ(ಸೆ.23):  IPL 2021ರ ಎರಡನೇ ಭಾಗದಲ್ಲಿ ಕೋಲ್ಕತಾ ನೈಟ್ ರೈಡರ್ಸ್(kolkata knight riders) ಹೊಸ ಅವತಾರದಲ್ಲಿ ಕಣಕ್ಕಿದಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಕೆಕೆಆರ್ ಇದೀಗ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧವೂ 7 ವಿಕೆಟ್ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೆಕೆಆರ್ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ ಅಲಂಕರಿಸಿದೆ. 

 

Another all-round performance 💪

Another incredible win for as they beat by 7 wickets 👍

Scorecard 👉 https://t.co/SVn8iKC4Hl pic.twitter.com/kEgrkLi4KH

— IndianPremierLeague (@IPL)

ಐಪಿಎಲ್ ಮೊದಲ ಭಾಗದಲ್ಲಿ ಕೆಕೆಆರ್(KKR) ತಂಡ ಆಡಿದ 7 ಪಂದ್ಯದಲ್ಲಿ ಕೇವಲ 2 ಗೆಲುವು ಮಾತ್ರ ದಾಖಲಿಸಿತ್ತು. ಆದರೆ ದುಬೈನಲ್ಲಿ ಆರಂಭಗೊಂಡಿರುವ ಐಪಿಎಲ್ 2021ರ ಎರಡನೇ ಭಾಗದಲ್ಲಿ ಆಡಿದ 2 ಪಂದ್ಯದಲ್ಲೂ ಗೆಲುವು ಸಾಧಿಸಿ ಮುನ್ನುಗ್ಗುತ್ತಿದೆ. ಆದರೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್(MI) ಮಾತ್ರ ಗೆಲುವಿನ ಲಯ ಕಂಡುಕೊಳ್ಳಲುು ಪರದಾಡುತ್ತಿದೆ.

IPL 2021: ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ KBC ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ!

156 ರನ್ ಟಾರ್ಗೆಟ್ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಜಸ್ಪ್ರೀತ್ ಬುಮ್ರಾ ದಾಳಿಗೆ ಕೆಕೆಆರ್ ಮೊದಲ ವಿಕೆಟ್ ಪತನಗೊಂಡಿತು. ಶುಭಮನ್ ಗಿಲ್ ಕೇವಲ 13 ರನ್ ಸಿಡಿಸಿ ಔಟಾದರು. ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಮೊದಲ ವಿಕೆಟ್‌ಗೆ 40 ರನ್ ಜೊತೆಯಾಟ ಆಡಿದರು. 

ಕೆಕೆಆರ್ ಮೊದಲ ವಿಕೆಟ್ ಕಳೆದುಕೊಂಡರೂ ಪವರ್ ಪ್ಲೇನಲ್ಲಿ ಉತ್ತಮ ಹೋರಾಟ ನೀಡಿತು. ಆರಂಭಿಕ 6 ಓವರ್‌ಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ 63 ರನ್ ಸಿಡಿಸಿತು. ಈ ಮೂಲಕ ಪ್ರತಿ ಓವರ್‌ನಲ್ಲಿ 10.3 ರನ್ ಸಿಡಿಸಿತು. 2021ರ ಐಪಿಎಲ್ ಟೂರ್ನಿಯಲ್ಲಿ ಮೂಡಿ ಬಂದ 5ನೇ ಅತ್ಯುತ್ತಮ ಪವರ್ ಪ್ಲೇ ಬ್ಯಾಟಿಂಗ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

IPL 2021: ಸದ್ಯದಲ್ಲೇ RCB ನಾಯಕತ್ವದಿಂದ ಕೊಹ್ಲಿಗೆ ಕೊಕ್, ಮಾಜಿ ಕ್ರಿಕೆಟಿಗನಿಂದ ಹೊಸ ಬಾಂಬ್!

ವೆಂಕಟೇಶ್ ಅಯ್ಯರ್ ಹಾಗೂ ರಾಹುಲ್ ತ್ರಿಪಾಠಿ(Rahul tripathi) ಜೊತೆಯಾಟದಿಂದ ಕೆಕೆಆರ್ ಚೇತರಿಸಿಕೊಂಡಿತು. ಕೆಕೆಆರ್ ದಿಟ್ಟ ಹೋರಾಟ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆತಂಕ ಹೆಚ್ಚಿಸಿತು. ಮುಂಬೈ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದರೂ ಜೊತೆಯಾಟಕ್ಕೆ ಬ್ರೇಕ್ ಹಾಕಲು ಪರದಾಡಿತು. ಅಯ್ಯರ್ ಅರ್ಧಶತಕ ಸಿಡಿಸಿ ಮಿಂಚಿದರು.

ವೆಂಕಟೇಶ್ ಅಯ್ಯರ್ 53 ರನ್ ಸಿಡಿಸಿ ಔಟಾದರು. ಆದರೆ ರಾಹುಲ್ ತ್ರಿಪಾಠಿ ಸ್ಫೋಟಕ ಬ್ಯಾಟಿಂಗ್ ಮುಂದುವರಿಯಿತು. ತ್ರಿಪಾಠಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ನಾಯಕ ಇಯಾನ್ ಮಾರ್ಗನ್ ಕೇವಲ 7 ರನ್ ಸಿಡಿಸಿ ಔಟಾದರು. ಇಷ್ಟಾದರೂ ಕೆಕೆಆರ್ ತಂಡದಲ್ಲಿ ಯಾವುದೇ ಆತಂಕ ಮೂಡಲಿಲ್ಲ. ಕಾರಣ ಕೆಕೆಆರ್ ಗೆಲುವಿಗೆ ಅಂತಿಮ 30 ಎಸೆತದಲ್ಲಿ 1 ರನ್ ಅವಶ್ಯಕತೆ ಇತ್ತು.

IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್‌ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!

15.1 ಓವರ್‌ಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ 3 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ರಾಹುಲ್ ತ್ರಿಪಾಠಿ ಅಜೇಯ 74 ರನ್ ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಎನಿಸಿಕೊಂಡರು. ಇತ್ತ ಐಪಿಎಲ್ 2021 ಎರಡನೇ ಭಾಗದಲ್ಲಿ ಮುಂಬೈ ಸೋಲಿನ ಪಯಣ ಮತ್ತೆ ಮುಂದುವರಿಯಿತು.

ಮುಂಬೈ ಇಂಡಿಯನ್ಸ್ ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ(points Table) 6ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ 6ನೇ ಸ್ಥಾನಕ್ಕೆ ಕುಸಿದಿದೆ.

click me!