ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪಾರ್ಟಿ ಕೇಳಿದರು: ಗೌತಮ್‌

Suvarna News   | Asianet News
Published : Feb 19, 2021, 09:35 AM IST
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪಾರ್ಟಿ ಕೇಳಿದರು: ಗೌತಮ್‌

ಸಾರಾಂಶ

ಕರ್ನಾಟಕದ ಅನುಭವಿ ಆಲ್ರೌಂಡರ್ ಕೃಷ್ಣಪ್ಪ ಗೌತಮ್‌  ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ ದುಬಾರಿ ಮೊತ್ತಕ್ಕೆ ಖರೀದಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಪಾರ್ಟಿ ಕೇಳಿದ್ದಾಗಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್(ಫೆ.19)‌: ಬರೋಬ್ಬರಿ 9.25 ಕೋಟಿ ರು.ಗೆ ಚೆನ್ನೈ ತಂಡಕ್ಕೆ ಖರೀದಿಯಾದ ಕರ್ನಾಟಕದ ಕೆ.ಗೌತಮ್‌ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ತಂಡದೊಂದಿಗೆ ನೆಟ್‌ ಬೌಲರ್‌ ಆಗಿ ಅಹಮದಾಬಾದ್‌ಗೆ ತೆರಳಿರುವ ಗೌತಮ್‌ ಹರಾಜು ಪ್ರಕ್ರಿಯೆಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. 

‘ಇಷ್ಟೊಂದು ದೊಡ್ಡ ಮೊತ್ತ ನಿರೀಕ್ಷಿಸಿರಲಿಲ್ಲ. ನಾನು ಚೆನ್ನೈ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ ನನ್ನ ಕೊಠಡಿಗೆ ಬಂದು ತಬ್ಬಿಕೊಂಡು, ಪಾರ್ಟಿ ಕೊಡಿಸುವಂತೆ ಕೇಳಿದರು. ವಿಡಿಯೋ ಕಾಲ್‌ನಲ್ಲಿ ನನ್ನ ತಂದೆ, ತಾಯಿ, ಪತ್ನಿ ಸಹ ಅಭಿನಂದಿಸಿ, ನನ್ನೊಂದಿಗೆ ಸಂಭ್ರಮಿಸಿದರು. ಧೋನಿ ನಾಯಕತ್ವದಲ್ಲಿ ಆಡುವುದು ನನಗೆ ಸಿಕ್ಕಿರುವ ಅದೃಷ್ಟ’ ಎಂದು ಗೌತಮ್‌ ಹೇಳಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೆ. ಗೌತಮ್‌ ಮಾತ್ರವಲ್ಲದೇ ಇಂಗ್ಲೆಂಡ್ ಆಲ್ರೌಂಡರ್‌ ಮೋಯಿನ್ ಅಲಿ(7 ಕೋಟಿ), ಚೇತೇಶ್ವರ್ ಪೂಜಾರ(50 ಲಕ್ಷ), ಹರಿಶಂಕರ್(20 ಲಕ್ಷ), ಭಗತ್ ವರ್ಮಾ(20 ಲಕ್ಷ) ಹಾಗೂ ಹರಿ ನಿಶಾಂತ್ ಹೀಗೆ ಒಟ್ಟು 6 ಆಟಗಾರರನ್ನು ಈ ಬಾರಿಯ ಹರಾಜಿನಲ್ಲಿ ಖರೀದಿಸಿದೆ.

IPL Auction 2021: ದಾಖಲೆ ಮೊತ್ತಕ್ಕೆ ಕನ್ನಡಿಗ ಕೆ ಗೌತಮ್‌ ಸೇಲ್!

ಗೌತಮ್‌ ದಾಖಲೆ: ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್‌ ಆದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ಆಟಗಾರ ಎನ್ನುವ ದಾಖಲೆಯನ್ನು ಗೌತಮ್‌ ಬರೆದಿದ್ದಾರೆ. 2018ರಲ್ಲಿ 8.8 ಕೋಟಿಗೆ ಸೇಲ್‌ ಆಗಿದ್ದ ಕೃನಾಲ್‌ ಪಾಂಡ್ಯ ದಾಖಲೆಯನ್ನು ಕನ್ನಡಿಗ ಮುರಿದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ