IPL 2020; ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಮುಂದಾದ KXIP !

By Web Desk  |  First Published Dec 8, 2019, 9:59 PM IST

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯುಸಿಯಾಗಿರುವ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಕೆಎಲ್ ರಾಹುಲ್ 2ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ರಾಹುಲ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಪಟ್ಟ ನೀಡಲು ಮುಂದಾಗಿದೆ. 


ಪಂಜಾಬ್(ಡಿ.08): ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಕಿಂಗ್ಸ್ ಇಲೆವೆನ್ ಪಂಜಾಬ್ ಮುಂದಾಗಿದೆ. 2020ರ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್,  ತೆರವಾಗಿರುವ ನಾಯಕತ್ವಕ್ಕೆ ರಾಹುಲ್ ಆಯ್ಕೆ ಮಾಡಲು ರೆಡಿಯಾಗಿದೆ. ಈ ಮೂಲಕ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗ ತಂಡ ಮುನ್ನಡೆಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.

ಇದನ್ನೂ ಓದಿ: IPL ಹರಾಜು: ಗರಿಷ್ಠ ಮೂಲ ಬೆಲೆ ಹೊಂದಿದ ಆಟಗಾರರ ಪಟ್ಟಿ ಪ್ರಕಟ

Latest Videos

undefined

ಡಿಸೆಂಬರ್ 19ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಅಧೀಕೃತ ಘೋಷಣೆ ಮಾಡಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿದ್ದ ಆರ್ ಅಶ್ವಿನ್ ಈಗಾಗಲೇ ತಂಡ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ನಾಯಕ ಸ್ಥಾನ ತೆರವಾಗಿತ್ತು.

ಇದನ್ನೂ ಓದಿ: IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ!

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅದ್ಭುತ ಪ್ರದರ್ಶನ ನೀಡಿರುವ ರಾಹುಲ್‌ಗೆ ನಾಯಕತ್ವ ನೀಡಲು ಪಂಜಾಬ್ ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಕಳೆದೆರಡು ವರ್ಷದಿಂದ ರಾಹುಲ್ ಕಿಂಗ್ಸ್ ಇಲೆವೆನ್  ಪಂಜಾಬ್ ಪರ ಆಡುತ್ತಿದ್ದಾರೆ. 2018ರ ಆವೃತ್ತಿಯಲ್ಲಿ 659 ರನ್ ಸಿಡಿಸಿದ ರಾಹುಲ್, 2019ರ ಆವೃತ್ತಿಯಲ್ಲಿ 593 ರನ್ ಸಿಡಿಸಿದ್ದಾರೆ.

click me!