
ಕೋಲ್ಕತಾ(ಫೆ.11): 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಪ್ರಶಸ್ತಿ ಮೇಲೆ 8 ತಂಡಗಳು ಕಣ್ಣಿಟ್ಟಿವೆ. ಇದಕ್ಕಾಗಿ ತಯಾರಿ ಕೂಡ ನಡೆಸುತ್ತಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ನೇಮಕ ಮಾಡಿದೆ.
ಇದನ್ನೂ ಓದಿ: IPL 2020: RCBಗೆ ಹೊಸ ಟೈಟಲ್ ಪ್ರಾಯೋಜಕತ್ವ
2020ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಇಂಗ್ಲೆಂಡ್ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮ್ಸ್ ಫಾಸ್ಟರ್ ನೇಮಕಗೊಂಡಿದ್ದಾರೆ. ಕಳೆದ ಆವೃತ್ತಿಗಳಲ್ಲಿ ಕೆಕೆಆರ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಅಸ್ಸಾಂ ಮಾಜಿ ಕ್ರಿಕೆಟಿಗ ಶುಭದೀಪ್ ಘೋಷ್ ಕಾರ್ಯನಿರ್ವಹಿಸಿದ್ದರು. ಇದೀಗ ಈ ಸ್ಥಾನಕ್ಕೆ ಜೇಮ್ಸ್ ಫಾಸ್ಟರ್ ನೇಮಕವಾಗಿದ್ದಾರೆ.
ಜೇಮ್ಸ್ ಫಾಸ್ಟರ್ 2001 ರಿಂದ 2009ರ ವರೆಗೆ ಇಂಗ್ಲೆಂಡ್ ತಂಡದ ಪರ 7 ಟೆಸ್ಟ್, 11 ಏಕದಿನ ಹಾಗೂ 5 ಟಿ20 ಪಂದ್ಯ ಆಡಿದ್ದಾರೆ. 2001ರಲ್ಲಿ ಭಾರತ ವಿರುದ್ಧ ಮೊಹಾಲಿ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2020ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ಬ್ರೆಂಡನ್ ಮೆಕ್ಕಲಂ ಹೆಗಲೇರಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಜಾಕ್ ಕಾಲಿಸ್ ನಿರ್ವಹಿಸಿದ್ದರು.
ಇದನ್ನೂ ಓದಿ: IPL 2020: ಟೂರ್ನಿ ಆರಂಭಕ್ಕೂ ಮೊದಲೇ ದಾಖಲೆ ಬರೆದ ಮುಂಬೈ ಇಂಡಿಯನ್ಸ್!
ಈ ಬಾರಿಯೂ ತಂಡದ ನಾಯಕತ್ವವನ್ನು ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ ಎಂದು ಈಗಾಗಲೇ ಕೆಕೆಆರ್ ಸ್ಪಷ್ಟಪಡಿಸಿದೆ. ಕೆಕೆಆರ್ 2012 ಹಾಗೂ 2014ರಲ್ಲಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಈ ಸಾಧನೆ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.