ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಹಲವು ಬದಲಾವಣೆ ಮಾಡಿದೆ. ತಂಡದ ಕೋಚ್, ನಿರ್ದೇಶಕ, ಆಟಗಾರರು, ಸ್ಟಾಫ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ. ಇದೀಗ RCBದ ತಂಡದ ಟೈಟಲ್ ಪ್ರಾಯೋಜಕತ್ವ ಕೂಡ ಬದಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಫೆ.11): ಕಳೆದ 12 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ ಅದೃಷ್ಠ ಕೈಕೊಟ್ಟಿತ್ತು. 2020ರ ಐಪಿಎಲ್ ಟೂರ್ನಿಗೆ ಮಹತ್ವದ ಬದಲಾವಣೆ ಮಾಡಿರುವ RCB ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 13ನೇ ಆವತ್ತಿಗೆ ಸಜ್ಜಾಗಿರುವ RCB ತಂಡದ ಟೈಟಲ್ ಸ್ಪಾನ್ಸರ್ ಬದಲಾಗಿದೆ.
ಇದನ್ನೂ ಓದಿ: RCB ಸಂಭವನೀಯ ಪ್ಲೇಯಿಂಗ್ XI: ಯಾರಿಗೆಲ್ಲಾ ಸಿಕ್ಕಿದೆ ಚಾನ್ಸ್..?
RCB ತಂಡದ ಟೈಟಲ್ ಪ್ರಾಯೋಜಕತ್ವ ಮುತ್ತೂಟ್ ಫಿನ್ ಕಾರ್ಪ್ ಪಾಲಾಗಿದೆ. ಕೇರಳದ ಮುತ್ತೂಟ್ ಪಾಪಚ್ಚನ್ ಗ್ರೂಪ್, RCB ಫ್ರಾಂಚೈಸಿ ಜೊತೆ 3 ವರ್ಷದ ಒಪ್ಪಂದ ಮಾಡಿಕೊಂಡಿದೆ. RCB ತಂಡದ ಜರ್ಸಿ ಸೇರಿದಂತೆ ಎಲ್ಲದರಲ್ಲೂ ಮುತ್ತೂಟ್ ಲೋಗೋ ರಾರಾಜಿಸಲಿದೆ.
ಇದನ್ನೂ ಓದಿ: IPL 2020: ಟೂರ್ನಿ ಆರಂಭಕ್ಕೂ ಮೊದಲೇ ದಾಖಲೆ ಬರೆದ ಮುಂಬೈ ಇಂಡಿಯನ್ಸ್!
RCB ತಂಡ ಜರ್ಸಿಯ ಮುಂಭಾಗದಲ್ಲಿ ಮುತ್ತೂಟ್ ಲೋಗೋ, ಅಭ್ಯಾಸ ಜರ್ಸಿಯಲ್ಲೂ ಮತ್ತೂಟ್ ಲೋಗೋ ಇರಲಿದೆ. ತವರಿನ ಪಂದ್ಯದ ವೇಳೆ ಡಿಜಿಟಲ್ ಬೋರ್ಡ್ ಸೇರಿದಂತೆ ಇತರ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಮುತ್ತೂಟ್ ಹೆಸರು ಹಾಗೂ ಲೋಗೋ ಇರಲಿದೆ. ಮುತ್ತೂಟ್ ಪ್ರಾಯೋಜಕತ್ವದ ಮೊತ್ತ ಎಷ್ಟು ಅನ್ನೋದನ್ನು RCB ಬಹಿರಂಗ ಪಡಿಸಿಲ್ಲ.