ಬೆಂಗಳೂರಿಗೆ ಮರಳಿದ ಅಂತಾರಾಷ್ಟ್ರೀಯ ಕ್ರಿಕೆಟ್; ಈ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡು ಮ್ಯಾಚ್!

Kannadaprabha News   | Kannada Prabha
Published : Mar 27, 2026, 11:19 AM IST
M Chinnaswamy Stadium

ಸಾರಾಂಶ

ಬಿಸಿಸಿಐ 2026-27ರ ತವರಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ಮರಳಿವೆ. ಈ ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಮತ್ತು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲಿದೆ.

ಬೆಂಗಳೂರು: ಐಪಿಎಲ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೂಡಾ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಲು ಸಜ್ಜಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಭೀಕರ ಕಾಲ್ತುಳಿತ ಬಳಿಕ ಬೆಂಗಳೂರಿನಿಂದ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳೇ ಸ್ಥಳಾಂತರಗೊಂಡಿದ್ದವು. ಈ ಬಾರಿ ಐಪಿಎಲ್‌ ಆತಿಥ್ಯಕ್ಕೆ ಸಜ್ಜಾಗುತ್ತಿರುವಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೂಡಾ ಬೆಂಗಳೂರಿನಲ್ಲಿ ನಡೆಯುವ ಬಗ್ಗೆ ಸಿಹಿ ಸುದ್ದಿ ಹೊರಬಿದ್ದಿದೆ.

2026-27ನೇ ಋತುವಿನ ತವರಿನ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿತು. ವೇಳಾಪಟ್ಟಿ ಪ್ರಕಾರ, ಭಾರತ ತಂಡ ಬೆಂಗಳೂರಿನಲ್ಲಿ ಅಕ್ಟೋಬರ್‌ 17ರಂದು ವೆಸ್ಟ್‌ಇಂಡೀಸ್‌ ವಿರುದ್ಧ 1 ಟಿ20, ಡಿಸೆಂಬರ್‌ 16ರಂದು ಶ್ರೀಲಂಕಾ ವಿರುದ್ಧ 1 ಏಕದಿನ ಪಂದ್ಯ ಆಡಲಿದೆ. ಒಟ್ಟಾರೆ ಈ ಋತುವಿನಲ್ಲಿ ಭಾರತ ಪುರುಷರ ಟೀಮ್‌ ತವರಿನಲ್ಲಿ 5 ಟೆಸ್ಟ್‌, 9 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನಾಡಲಿದೆ.

22 ಪಂದ್ಯ, 17 ನಗರ:

ಋತುವಿನಲ್ಲಿ ಭಾರತ ತಂಡ ತವರಿನಲ್ಲಿ ಒಟ್ಟು 22 ಪಂದ್ಯಗಳನ್ನಾಡಲಿವೆ. ಇದಕ್ಕೆ ಬೆಂಗಳೂರು ಸೇರಿದಂತೆ 17 ನಗರಗಳು ಆತಿಥ್ಯ ವಹಿಸಲಿವೆ. ವೆಸ್ಟ್‌ಇಂಡೀಸ್‌ ವಿರುದ್ಧ 2026ರ ಸೆ.27ರಿಂದ ಅ.3ರ ವರೆಗೆ 3 ಏಕದಿನ, ಅ.6ರಿಂದ 17ರ ವರೆಗೆ 5 ಏಕದಿನ ಪಂದ್ಯಗಳನ್ನಾಡಲಿದೆ. ಬಳಿಕ ಡಿ.13ರಿಂದ 19ರ ವರೆಗೆ ಶ್ರೀಲಂಕಾ ವಿರುದ್ಧ 3 ಏಕದಿನ, ಡಿ.22ರಿಂದ 27ರ ವರೆಗೆ 3 ಟಿ20, ಜಿಂಬಾಬ್ವೆ ವಿರುದ್ಧ 2027ರ ಜನವರಿ 3ರಿಂದ 9ರ ವರೆಗೆ 3 ಏಕದಿನ ಪಂದ್ಯ ನಡೆಯಲಿವೆ. ಬಳಿಕ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಜ.21ರಿಂದ ಫೆ.27ರ ವರೆಗೆ 5 ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿವೆ.

2 ವರ್ಷದ ಬಳಿಕ ಚಿನ್ನಸ್ವಾಮಿಯಲ್ಲಿ ಅಂ.ರಾ. ಮ್ಯಾಚ್‌!

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಬ್ಬರಿ 2 ವರ್ಷ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೊಂದು ನಡೆಯಲಿದೆ. ಕೊನೆ ಬಾರಿ 2024ರ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ ಟೆಸ್ಟ್‌ ಪಂದ್ಯ ಆಡಿತ್ತು. ಆ ಬಳಿಕ ಇಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ದೀರ್ಘ ಸಮಯ ಬಳಿಕ ಈ ವರ್ಷ ಅಕ್ಟೋಬರ್‌ನಲ್ಲಿ ಮತ್ತೆ ಅಂ.ರಾ. ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಮತ್ತೆ ಬೆಂಗಳೂರಲ್ಲಿ ಭಾರತ ಪರ ರೋಹಿತ್‌-ಕೊಹ್ಲಿ ಕಣಕ್ಕೆ?

ಭಾರತದ ವೇಳಾಪಟ್ಟಿ ಪ್ರಕಾರ, ದಿಗ್ಗಜ ಕ್ರಿಕೆಟಿಗರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಒಟ್ಟಾಗಿ ಭಾರತದ ಪರ ಬೆಂಗಳೂರಿನಲ್ಲಿ ಆಡುವ ಸಾಧ್ಯತೆಯಿದೆ. ಇವರಿಬ್ಬರು ಈಗ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಭಾರತ ತಂಡ ಡಿ.16ಕ್ಕೆ ಚಿನ್ನಸ್ವಾಮಿಯಲ್ಲಿ ಲಂಕಾ ವಿರುದ್ಧ ಏಕದಿನ ಪಂದ್ಯವಾಡಲಿದ್ದು, ನಿವೃತ್ತಿಯಾಗದಿದ್ದರೆ ಇವರಿಬ್ಬರೂ ಒಟ್ಟಾಗಿ ಕಣಕ್ಕಿಳಿಯಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 ಸಂಪೂರ್ಣ ವೇಳಾಪಟ್ಟಿ ಪ್ರಕಟ; ಇಲ್ಲಿದೆ ನೋಡಿ ಆರ್‌ಸಿಬಿ ತಂಡದ ಮ್ಯಾಚ್ ಟೈಮ್ ಟೇಬಲ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗುತ್ತಾ? 16,700 ಕೋಟಿ ಡೀಲ್ ನಂತರ ಮಹತ್ವದ ಅಪ್‌ಡೇಟ್ಸ್ ಕೊಟ್ಟ ಅನನ್ಯಾ ಬಿರ್ಲಾ!