INDvSL; ಟೀಂ ಇಂಡಿಯಾದ 5 ವಿಕೆಟ್ ಪತನ, ಸಂಕಷ್ಟದಲ್ಲಿ ಧವನ್ ಸೈನ್ಯ!

By Suvarna NewsFirst Published Jul 20, 2021, 8:39 PM IST
Highlights
  • ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ
  • ಭಾರತದ ಗೆಲುವಿಗೆ 276 ರನ್ ಟಾರ್ಗೆಟ್ ನೀಡಿದ್ದ ಲಂಕಾ
  • 5 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ
     

ಕೊಲೊಂಬೊ(ಜು.20): ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಭಾರತದ ಗೆಲುವಿಗೆ 276 ರನ್ ಟಾರ್ಗೆಟ್ ನೀಡಲಾಗಿದೆ. ಈ ಗುರಿ ಬೆನ್ನಟ್ಟುತ್ತಿರುವ ಭಾರತ ಆರಂಭದಲ್ಲಿ 5 ವಿಕೆಟ್ ಕಳೆದುಕೊಂಡು  ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಗಿದೆ.

INDvSL 2ನೇ ಏಕದಿನ; ಟೀಂ ಇಂಡಿಯಾಗೆ 276 ರನ್ ಟಾರ್ಗೆಟ್ ನೀಡಿದ ಲಂಕಾ!

ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ, 2ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದರೆ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಪತನಗೊಂಡಿತು. ಪೃಥ್ವಿ ಶಾ 13 ರನ್ ಸಿಡಿಸಿ  ಔಟಾದರು. 

ಮೊದಲ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್, ದ್ವಿತೀಯ ಪಂದ್ಯದಲ್ಲೇ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 29 ರನ್ ಸಿಡಿಸಿ ಆಸೆರೆಯಾಗಿದ್ದ ನಾಯಕ ಶಿಖರ್ ಧವನ್ ವಿಕೆಟ್ ಪತನಗೊಂಡಿತು.   ಆದರೆ ಪಾಂಡೆ ಹಾಗೂ ಸೂರ್ಯಕುಮಾರ್ ಯಾದವ್ ದಿಟ್ಟ ಹೋರಾಟ ನೀಡಿದ್ದರು. ಆದರೆ ಪಾಂಡೆ 37 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಇನ್ನು ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿದರು. ಈ ಮೂಲಕ ಭಾರತ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ವಾಲಿದೆ.

click me!