ಆ್ಯರೋನ್‌ ಫಿಂಚ್ ಔಟ್‌, ಅಲೆಕ್ಸ್‌ ಕ್ಯಾರಿಗೆ ಆಸೀಸ್‌ ನಾಯಕ ಪಟ್ಟ

By Suvarna NewsFirst Published Jul 20, 2021, 4:35 PM IST
Highlights

* ವಿಂಡೀಸ್ ಎದುರಿನ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಶಾಕ್

* ಆಸ್ಟ್ರೇಲಿಯಾ ನಾಯಕ ಫಿಂಚ್‌ ಮೊದಲ ಪಂದ್ಯದಿಂದ ಔಟ್

* ಫಿಂಚ್ ಅನುಪಸ್ಥಿತಿಯಲ್ಲಿ ಅಲೆಕ್ಸ್‌ ಕ್ಯಾರಿಗೆ ನಾಯಕ ಪಟ್ಟ

ಸೇಂಟ್‌ ಲೂಸಿಯಾ(ಜು.20): ವಿಂಡೀಸ್ ಎದುರಿನ ಟಿ20 ಸರಣಿಯ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ವೆಸ್ಟ್ ಇಂಡೀಸ್‌ ಎದುರಿನ ಏಕದಿನ ಸರಣಿ ಆರಂಭಕ್ಕೂ ಮುನ್ನ ಮೊದಲ ಪಂದ್ಯದಿಂದ ನಾಯಕ ಆ್ಯರೋನ್‌ ಫಿಂಚ್ ಹೊರಬಿದ್ದಿದ್ದಾರೆ. ಇದೀಗ ಕೆನ್ಸಿಂಗ್‌ಟನ್‌ ಓವಲ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಕ್ಯಾರಿ ಮುನ್ನಡೆಸಲಿದ್ದಾರೆ.

ಕಳೆದ ಶುಕ್ರವಾರ ಸೇಂಟ್‌ ಲೂಸಿಯಾದಲ್ಲಿ ವೆಸ್ಟ್‌ ಇಂಡೀಸ್ ಕ್ರಿಕೆಟ್ ತಂಡದ ವಿರುದ್ದದ 5ನೇ ಟಿ20 ಪಂದ್ಯದಲ್ಲಿ ಪಾಲ್ಗೊಂಡಿದ್ದಾಗ ಆ್ಯರೋನ್‌ ಫಿಂಚ್ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು. ಅವರ ಫಿಟ್ನೆಸ್‌ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಗಮನಿಸುತ್ತಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

A big congrats to Alex Carey who will become the 26th man to captain Australia in ODI cricket tomorrow!

Aaron Finch has been ruled out of the series opener with a knee injury. pic.twitter.com/7q2AVGeazk

— Cricket Australia (@CricketAus)

ಲಂಕಾ ಎದುರು ಸರಣಿ ಗೆಲ್ಲುವ ತವಕದಲ್ಲಿ ಯಂಗ್‌ ಇಂಡಿಯಾ

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಕ್ಯಾರಿ ಈ ಮೊದಲು ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್‌, ಆಸ್ಟ್ರೇಲಿಯಾ 'ಎ' ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ವೆಸ್ಟ್‌ ಇಂಡೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಬಾರ್ಬಡೋಸ್‌ನ ಕೆನ್ಸಿಂಗ್‌ಟನ್‌ ಓವಲ್‌ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಮೊದಲು ಆಸ್ಟ್ರೇಲಿಯಾ ವಿರುದ್ದ 5 ಪಂದ್ಯಗಳ ಟಿ20 ಸರಣಿಯನ್ನು ವೆಸ್ಟ್ ಇಂಡೀಸ್‌ 4-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು.

click me!