ಕೊಲೊಂಬೊ(ಜು.20): ಟೀಂ ಇಂಡಿಯಾ ಬೌಲರ್‌ಗಳ ದಾಳಿ ನಡುವೆ ಶ್ರೀಲಂಕಾ ದಿಟ್ಟ ಹೋರಾಟ ನೀಡಿದೆ. ಆವಿಷ್ಕಾ ಫರ್ನಾಂಡೋ ಹಾಗೂ ಚಾರಿತ್ ಅಸಲಂಕಾ ಹಾಫ್ ಸೆಂಚುರಿ ನೆರವಿನಿಂದ 2ನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 275 ರನ್ ಸಿಡಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಶ್ರೀಲಂಕಾ, ಉತ್ತಮ ಆರಂಭ ಪಡೆಯಿತು. ಮಿನೋದ್ ಭಾನುಕಾ 36 ರನ್ ಸಿಡಿಸಿ ನಿರ್ಗಮಿಸಿದರೆ, ಆವಿಷ್ಕಾ ಫರ್ನಾಂಡೋ ಹಾಫ್ ಸೆಂಚುರಿ ಸಿಡಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 77 ರನ್ ಜೊತೆಯಾಟ ನೀಡಿತು. ಆದರೆ ಭಾನುಕಾ ರಾಜಪಕ್ಸೆ ಡಕೌಟ್ ಆದರು.
2ನೇ ಒನ್ ಡೇ: ಲಂಕಾ ವಿರುದ್ಧ ಟೀಂ ಇಂಡಿಯಾ ಪ್ಲೇಯಿಂಗ್ 11
undefined
ಧನಂಜಯ ಡಿಸಿಲ್ವ ಹಾಗೂ ಚಾರಿತ್ ಅಸಲಂಕ ಜೊತೆಯಾಟ ಲಂಕಾ ತಂಡಕ್ಕೆ ಚೇತರಿಕೆ ನೀಡಿತು. ಧನಂಜಯ್ 32 ರನ್ ಸಿಡಿಸಿ ಔಟಾದರು. ನಾಯಕ ದಸೂನ್ ಶನಕಾ 16 ರನ್ ಸಿಡಿಸಿ ಔಟಾದರು. ಚಾಮಿಕಾ ಕರುಣಾರತ್ನೆ ಜೊತೆ ಸೇರಿದ ಅಸಲಂಕಾ ಲಂಕಾ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು.
ಚಾರಿತ ಅಸಲಂಕಾ 65 ರನ್ ಕಾಣಿಕೆ ನೀಡಿದರೆ, ಚಾಮಿಕ ಅಜೇಯ 44 ರನ್ ಕಾಣಿಕೆ ನೀಡಿದರು. ಈ ಮೂಲಕ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 275 ರನ್ ಸಿಡಿಸಿತು. ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಹಾಲ್ ತಲಾ 3 ವಿಕೆಟ್ ಕಬಳಿಸಿದರೆ, ದೀಪಕ್ ಚಹಾರ್ 2 ವಿಕೆಟ್ ಉರುಳಿಸಿದರು.