1974ರ ಬಳಿಕ ಅತ್ಯಲ್ಪ ಮೊತ್ತಕ್ಕೆ ಟೀಂ ಇಂಡಿಯಾ ಆಲೌಟ್; ಕೊಹ್ಲಿ ಸೈನ್ಯಕ್ಕೆ ಭಾರಿ ಮುಖಭಂಗ!

By Suvarna NewsFirst Published Aug 25, 2021, 7:53 PM IST
Highlights
  • ಇಂಗ್ಲೆಂಡ್ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ
  • 7 ವಿಕೆಟ್ ಕಳೆದುಕೊಂಡ ಕೊಹ್ಲಿ ಸೈನ್ಯ, ಅಲ್ಪ ಮೊತ್ತದ ಭೀತಿ
  • ಘಟಾನುಘಟಿ ಬ್ಯಾಟ್ಸ್‌ಮನ್ 20 ರನ್ ದಾಟಿಲ್ಲ

ಲೀಡ್ಸ್(ಆ.25):ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯಲ್ಪಮೊತ್ತಕ್ಕೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲೇ ಕೇವಲ 78 ರನ್‌ಗೆ ಕೊಹ್ಲಿ ಸೈನ್ಯದ 10 ವಿಕೆಟ್‌ಗಳು ಉರುಳಿಬಿದ್ದಿದೆ. ಇದರೊಂದಿಗೆ 1974ರ ಬಳಿಕ ಇಂಗ್ಲೆಂಡ್ ವಿರುದ್ಧ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಅಪಖ್ಯಾತಿಗೆ ಟೀಂ ಇಂಡಿಯಾ ಗುರಿಯಾಗಿದೆ.

1974ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಕೇವಲ 42 ರನ್‌ಗೆ ಆಲೌಟ್ ಆಗಿತ್ತು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತ್ತು. ಇದೀಗ ಕೊಹ್ಲಿ ಸೈನ್ಯ 78 ರನ್‌ಗೆ ಆಲೌಟ್ ಆಗೋ ಮೂಲಕ ಆಂಗ್ಲರ ವಿರುದ್ಧ 2ನೇ ಅತೀ ಕಡಿಮೆ ಮೊತ್ತ ದಾಖಲಿಸಿದೆ.

ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಭಾರತ ದಾಖಲಿಸಿದ 3ನೇ ಅತೀ ಕಡಿಮೆ ಮೊತ್ತ ಅನ್ನೋ ಅಪಖ್ಯಾತಿಗೂ ಗುರಿಯಾಗಿದೆ.  
75 v ವೆಸ್ಟ್ ಇಂಡೀಸ್(ದೆಹಲಿ, 1987/88)
76 v ಸೌತ್ ಆಫ್ರಿಕಾ(ಅಹಮ್ಮದಾಬಾದ್, 2007/08)
78 v ಇಂಗ್ಲೆಂಜ್ (ಲೀಡ್ಸ್, 2021 *)
83 v ನ್ಯೂಜಿಲೆಂಡ್(ಮೊಹಾಲಿ, 1999/00)

Ind vs Eng ಲೀಡ್ಸ್‌ ಟೆಸ್ಟ್: ಸಂಕಷ್ಟದ ಸುಳಿಯಲ್ಲಿ ಟೀಂ ಇಂಡಿಯಾ..!

3ನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಟಾಸ್ ಗೆದ್ದಿದ್ದೆ ಸಾಧನೆ. ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್ ಮಾಡಿದ್ದಾರೆ. ಯಾರೂ ಕೂಡ 20 ರನ್ ದಾಟಿಲ್ಲ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅತ್ಯಲ್ಪ ಮೊತ್ತಕ್ಕೆ ಕುಸಿದು ತೀವ್ರ ಹಿನ್ನಡೆ ಅನುಭವಿಸಿದೆ. 

ಇಂಗ್ಲೆಂಡ್ ದಾಳಿಗೆ ಟೀಂ ಇಂಡಿಯಾ ತತ್ತರಿಸಿತು. ರೋಹಿತ್ ಶರ್ಮಾ 19, ಕೆಎಲ್ ರಾಹುಲ್ ಡಕೌಟ್, ಚೇತೇಶ್ವರ್ ಪೂಜಾರ 1, ನಾಯಕ ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಬ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಶೂನ್ಯ ಸುತ್ತಿದರು. ಮೊಹಮ್ಮದ್ ಸಿರಾಜ್ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾ ಕೇವಲ 78 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 3, ರಾಬಿನ್ಸನ್ 2, ಸ್ಯಾಮ್ ಕುರನ್ 2 ಹಾಗೂ ಕ್ರೈಗ್ ಓವರ್ಟನ್ 3 ವಿಕೆಟ್ ಕಬಳಿಸಿದರು. 

Ind vs Eng ಸಂಕಷ್ಟದಲ್ಲಿ ಟೀಂ ಇಂಡಿಯಾ; 3ನೇ ವಿಕೆಟ್ ಪತನ..!

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತ್ತು. ಆದರೆ ಲೀಡ್ಸ್ ಪಂದ್ಯದ ಮೊದಲ ದಿನವೇ ಭಾರತ ಬ್ಯಾಟಿಂಗ್‌ನಲ್ಲಿ ತೀವ್ರ ವೈಫಲ್ಯ ಅನುಭವಿಸಿದೆ.

 

click me!