2011 ವಿಶ್ವಕಪ್ ಫೈನಲ್ ತಂಡದ ಸದಸ್ಯ, CSK ಮಾಜಿ ಕ್ರಿಕೆಟಿಗ ಈಗ ಬಸ್ ಡ್ರೈವರ್!

Published : Aug 25, 2021, 07:01 PM IST
2011 ವಿಶ್ವಕಪ್ ಫೈನಲ್ ತಂಡದ ಸದಸ್ಯ, CSK ಮಾಜಿ ಕ್ರಿಕೆಟಿಗ ಈಗ ಬಸ್ ಡ್ರೈವರ್!

ಸಾರಾಂಶ

ಬದುಕು ಕಟ್ಟಿಕೊಳ್ಳಲು ಬಸ್ ಡ್ರೈವರ್ ಆಗಿ ಕೆಲಸ 2011ರ ವಿಶ್ವಕಪ್ ಫೈನಲ್ ತಂಡದ ಸದಸ್ಯ,  CSK ಮಾಜಿ ಕ್ರಿಕೆಟಿಗ ಬಡತನದಲ್ಲಿ ಬೆಂದು ಹೋದ ಕ್ರಿಕೆಟಿಗ 

ಮೆಲ್ಬೋರ್ನ್(ಆ.25): ವಿಶ್ವಕಪ್ 2011ರ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿತ್ತು. ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಸದಸ್ಯ, ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಮಾಜಿ ಕ್ರಿಕೆಟಿಗ ಸೂರಜ್ ರಾಂಡಿವ್ ಇದೀಗ ಜೀವನಕ್ಕಾಗಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.

2021ರ ಐಪಿಎಲ್ ಟೂರ್ನಿಯಲ್ಲಿದ್ದಾರೆ 2011ರ ವಿಶ್ವಕಪ್ ವಿಜೇತ ತಂಡದಲ್ಲಿನ 6 ಕ್ರಿಕೆಟಿಗರು!

ಆಫ್ ಸ್ಪಿನ್ನರ್ ಸೂರಜ್ ರಾಂಡಿವ್ ಪ್ರತಿಭಾವಂತ ಕ್ರಿಕೆಟಿಗ. ಆದರೆ ಲಂಕಾ ತಂಡದಲ್ಲಿ ಮುತ್ತಯ್ಯ ಮುರಳೀಧರನ್ ಸೇರಿದಂತೆ ಹಲವು ಘಟಾನುಘಟಿ ಸ್ಪಿನ್ನರಗಳಿಂದ ರಾಂಡೀವ್‌ಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ತನ್ನ ಪ್ರತಿಭೆಯಿಂದ 2011ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಪ್ರಮುಖ ಸದಸ್ಯನಾಗಿದ್ದರು.. ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲೂ ರಾಂಡಿವ್ ಸ್ಥಾನ ಪಡೆದಿದ್ದರು.

2011ರ ವಿಶ್ವಕಪ್ ಟೂರ್ನಿ ಆಡಿದ ರಾಂಡಿವ್ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾಗವಾಗಿದ್ದರು. ಆಧರೆ 12 ಟೆಸ್ಟ್, 31 ಏಕದಿನ ಹಾಗೂ 7 ಟಿ20 ಪಂದ್ಯ ಆಡಿದ್ದ ರಾಂಡಿವ್ ಬಳಿಕ ಅವಕಾಶ ಸಿಗಲಿಲ್ಲ. ಲಂಕಾ ದೇಸಿ ಕ್ರಿಕೆಟ್‌ನಲ್ಲಿ ಸಕ್ರೀಯವಾಗಲೂ ಸಾಧ್ಯವಾಗಲಿಲ್ಲ. ಇತ್ತ ಲಂಕಾ ದೇಸಿ ಕ್ರಿಕೆಟ್ ಟೂರ್ನಿಗೆ ವೀಕ್ಷಕ ವಿವರಣೆ ಸೇರಿದಂತೆ ಇತರ ಕ್ರಿಕೆಟ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಂಡೀವ್‌ಗೆ ಕೊರೋನಾ ಇನ್ನಿಲ್ಲದ ಹೊಡೆತ ನೀಡಿತು. 

ವಿಶ್ವಕಪ್‌ನಲ್ಲಿ ಯುವಿಗಿಂತ ಮೊದಲು ಕಣಕ್ಕಳಿದಿದ್ದೇಕೆ?-ಧೋನಿ ಬಿಚ್ಚಿಟ್ರು ಸತ್ಯ!

2020-21ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ನೆಟ್ ಬೌಲರ್ ಆಗಿ ರಾಂಡೀವ್‌ಗೆ ಅವಕಾಶ ನೀಡಿತು. ಆದರೆ ಮತ್ತೆ ಕೊರೋನಾ ಅಬ್ಬರಿಂದ ಅಂತಾರಾಷ್ಟ್ರೀಯ ಟೂರ್ನಿಗಳೇ ಸ್ಥಗಿತಗೊಂಡಿತು. ಹೀಗಾಗಿ ಬದುಕು ಕಟ್ಟಿಕೊಳ್ಳಲು ರಾಂಡಿವ್ ಇದೀಗ ಮೆಲ್ಪೋರ್ನ್‌ನಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.

1983ರ ವಿಶ್ವಕಪ್‌ ಗೆಲುವಿಗಿಂತ 2011ರ ವಿಶ್ವಕಪ್ ಗೆಲುವೇ ಬೆಸ್ಟ್!

ಸೂರಜ್ ಮಾತ್ರವಲ್ಲ ಶ್ರೀಲಂಕಾದ ಮತ್ತೊರ್ವ ಮಾಜಿ ಕ್ರಿಕೆಟಿಗ ಚಿಂತಕ ನಮಸ್ತೆ, ಜಿಂಬಾಬ್ವೆ ಕ್ರಿಕೆಟಿಗ ವಾಡಿಂಗ್ಟನ್ ಎಂವಾಯೆಂಗ ಕೂಡ ಮೆಲ್ಪೋರ್ನ್‌ನಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌