ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಇದೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಆಸ್ಟ್ರೇಲಿಯಾ ಅಬ್ಬರಿಸಿದ ಜೋಶ್ ಇಂಗ್ಲಿಸ್ ಭರ್ಜರಿ ಸೆಂಚುರಿಯಿಂದ 208 ರನ್ ಸಿಡಿಸಿದೆ. ಇದೀಗ ಭಾರತ ಗೆಲುವಿಗೆ ಬೃಹತ್ ಮೊತ್ತ ಚೇಸ್ ಮಾಡಬೇಕಿದೆ.
ವಿಶಾಖಪಟ್ಟಣಂ(ನ.23) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಆರಂಭಗೊಂಡಿದೆ. ಆದರೆ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟಿಂಗ್ ಮೂಲಕ 208 ರನ್ ಸಿಡಿಸಿದೆ. ಸ್ಟೀವನ್ ಸ್ಮಿತ್ ಹಾಫ್ ಸೆಂಚುರಿ ಹಾಗೂ ಜೋಶ್ ಇಂಗ್ಲಿಸ್ ಸೆಂಟುರಿ ನೆರವಿನಿಂದ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿದೆ. ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡಲು ಭಾರತ ವಿಫಲವಾಗಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ರವಿ ಬಿಶ್ನೋಯ್ ವಿಕೆಟ್ ಕಬಳಿಸಿದರೆ, ಇನ್ನುಳಿದ ಬೌಲರ್‌ಗಳಿಂದ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ.
ಟಾಸ್ ಗೆದ್ದ ಭಾರತ ಕಂಡೀಷನ್, ಸ್ಟ್ರೆಂಥ್, ಇಬ್ಬನಿ ಸೇರಿದಂತೆ ಹಲವು ಲೆಕ್ಕಾಚಾರದೊಂದಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮ್ಯಾಥ್ಯೂ ಶಾರ್ಟ್ ಹಾಗೂ ಸ್ಟೀವನ್ ಸ್ಮಿತ್ ಜೊತೆಯಾಟದಲ್ಲಿ 30 ರನ್ ಮೂಡಿಬಂತು. ರವಿ ಬಿಶ್ನೋಯ್ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಮ್ಯಾಥ್ಯೂ ಶಾರ್ಟ್ 13 ರನ್ ಸಿಡಿಸಿ ಔಟಾದರು. ಸ್ಮಿತ್ ಹಾಗೂ ಜೋಶ್ ಇಂಗ್ಲಿಸ್ ಜೊತೆಯಾಟ ಟೀಂ ಇಂಡಿಯಾದ ಎಲ್ಲಾ ಲೆಕ್ಕಾಚಾರ ಬದಲಿಸಿತು.
undefined
ರಾಹುಲ್ ಗಾಂಧಿಯ 'ಪನೌತಿ ಮೋದಿ' ಟೀಕೆಗೆ ತಿರುಗೇಟು ನೀಡಿದ ಮೊಹಮದ್ ಶಮಿ!
ಸ್ಟೀವನ್ ಸ್ಮಿತ್ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಸ್ಮಿತ್ 52 ರನ್ ಸಿಡಿಸಿ ಔಟಾದರು. ಇಂಗ್ಲಿಸ್ ಅಬ್ಬರ ಮುಂದುವರಿಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲಿಸ್ ಆಕರ್ಷಕ ಸೆಂಚುರಿ ಸಿಡಿಸಿದರು. 50 ಎಸೆತದಲ್ಲಿ 11 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಿಡಿಸಿದ ಇಂಗ್ಲಿಸ್ 110 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೊಯ್ನಿಸ್ ಅಜೇಯ 7 ಹಾಗೂ ಟಿಮ್ ಡೇವಿಡ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿತು.
ಭಾರತದ ಗೆಲುವಿಗೆ 209 ರನ್ ಅವಶ್ಯಕತೆ ಇದೆ. ಯುವ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಒಳಗೊಂಡ ಟೀಂ ಇಂಡಿಯಾ ರನ್ ಚೇಸ್ ಆತ್ಮವಿಶ್ವಾಸದಲ್ಲಿದೆ. ಬೌಲಿಂಗ್‌ನಲ್ಲಿ ಭಾರತ ಒಂದಷ್ಟು ಪ್ರಯೋಗ ಮಾಡಿತು. ಆದರೆ ಯಾವುದು ಫಲಕೊಡಲಿಲ್ಲ. ಐವರು ಬೌಲರ್ ಬೌಲಿಂಗ್ ಮಾಡಿದರೂ ಒಂದು ರನೌಟ್ ಹಾಗೂ 2 ವಿಕೆಟ್ ಮಾತ್ರ ಉರುಳಿ ಬಿತ್ತು. ವಿಶಾಖಪಟ್ಟಣಂ ಪಿಚ್‌ನಲ್ಲಿ ಭಾರತ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸುಲಭ ಟಾರ್ಗೆಟ್ ನೀಡಿದ್ದ ಭಾರತ, ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.