ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 65 ಎಸೆತದಲ್ಲಿ ರೋಹಿತ್ ಶತಕ ದಾಖಲಿಸಿ ಕೆಲ ದಾಖಲೆ ಬರೆದಿದ್ದಾರೆ. ಇದರ ಫಲವಾಗಿ ಭಾರತ 212 ರನ್ ಸಿಡಿಸಿದೆ.
ಬೆಂಗಳೂರು(ಜ.17) ಆಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೇವಲ 65 ಎಸೆತದಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 5ನೇ ಸೆಂಚರು ದಾಖಲಿಸಿದ್ದಾರೆ. ಈ ಮೂಲಕ ಟಿ20 ಮಾದರಿಯಲ್ಲಿ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ ಸಾಧಕರು
ರೋಹಿತ್ ಶರ್ಮಾ: 5 ಶತಕ
ಸೂರ್ಯಕುಮಾರ್ ಯಾದವ್: 4 ಶತಕ
ಗ್ಲೆನ್ ಮ್ಯಾಕ್ಸ್‌ವೆಲ್ : 4 ಶತಕ
ಐಫೋನ್ ಗಿಫ್ಟ್ ಬಚ್ಚಿಟ್ಟ ಆರೋಪ, ಕ್ರಿಕೆಟಿಗನಿಗೆ 2 ವರ್ಷ ನಿಷೇಧ ಹೇರಿದ ಐಸಿಸಿ!
ಶತಕದ ಬಳಿಕ ರೋಹಿತ್ ಅಬ್ಬರ ಮತ್ತಷ್ಟು ಹೆಚ್ಚಾಯಿತು. ಅಂತಿಮ ಓವರ್‌ನಲ್ಲಿ ರೋಹಿತ್ ಬೌಂಡರಿ ಸಿಕ್ಸರ್ ಮೂಲಕವೇ ಅಭಿಮಾನಿಗಳ ರಂಜಿಸಿದರು. ರೋಹಿತ್ ಶರ್ಮಾ 69 ಎಸೆತದಲ್ಲಿ ಅಜೇಯ 121 ರನ್ ಸಿಡಿಸಿದರು. ಈ ಮೂಲಕ ರೋಹಿತ್ ಶರ್ಮಾ ಟಿ20ಯಲ್ಲಿ ಗರಿಷ್ಠ ವೈಯುಕ್ತಿಕ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ರೋಹಿತ್ ಶರ್ಮಾ ಶತಕ, ರಿಂಕು ಸಿಂಗ್ ಹೋರಾಟದಿಂದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿತು.
ಅಂತಿಮ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ರಿಂಕ್ ಸಿಂಗ್ 36 ರನ್ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಸೇರಿಕೊಂಡರು.
ಟಿ20 ಕ್ರಿಕೆಟ್‌ನ ಒಂದೇ ಓವರ್‌ನಲ್ಲಿ ಗರಿಷ್ಠ ರನ್
36 ರನ್, ಯುವರಾಜ್ ಸಿಂಗ್, ಬೌಲರ್: ಸ್ಟುವರ್ಟ್ ಬ್ರಾಡ್, 2007
36 ರನ್ ಕೀರನ್ ಪೋಲಾರ್ಡ್, ಬೌಲರ್: ಅಖಿಲಾ ಧನಂಜಯ್, 2021
36 ರನ್ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್, ಬೌಲರ್: ಕರೀಮ್ ಜನತ್,2024
ಮದ್ವೆನೂ ಕಷ್ಟ ಡಿವೋರ್ಸ್ ಆದ್ರೂ ಕಷ್ಟ ಎಂದ ಸಾನಿಯಾ ಮಿರ್ಜಾ: ಟೆನ್ನಿಸ್ ತಾರೆಗೇನಾಯ್ತು?
ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸಿಡಿಸಿದ ಟೀಂ ಇಂಡಿಯಾ ಸಾಧಕರು
126* ರನ್, ಶುಭಮನ್ ಗಿಲ್ vs ನ್ಯೂಜಿಲೆಂಡ್, 2023
123* ರನ್, ರುತುರಾಜ್ ಗಾಯಕ್ವಾಡ್ vs ಆಸ್ಟ್ರೇಲಿಯಾ, 2023
122* ರನ್, ವಿರಾಟ್ ಕೊಹ್ಲಿvs ಆಫ್ಘಾನಿಸ್ತಾನ, 2022
121* ರನ್ ರೋಹಿತ್ ಶರ್ಮಾvs ಆಫ್ಘಾನಿಸ್ತಾನ, 2024