Shreyas Gopal Marries Nikitha: ಗೆಳತಿ ನಿಕಿತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್

Suvarna News   | Asianet News
Published : Nov 25, 2021, 03:58 PM IST
Shreyas Gopal Marries Nikitha: ಗೆಳತಿ ನಿಕಿತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್

ಸಾರಾಂಶ

* ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್ * ಬಹುಕಾಲದ ಗೆಳತಿ ನಿಕಿತಾ ಜತೆ ಶ್ರೇಯಸ್ ಗೋಪಾಲ್ ವಿವಾಹ * ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಶ್ರೇಯಸ್

ಬೆಂಗಳೂರು(ನ.25): ಭಾರತದ ಆಲ್ರೌಂಡರ್‌, ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಗೋಪಾಲ್‌ (Shreyas Gopal) ಇಂದು ತಮ್ಮ ಬಹುಕಾಲದ ಗೆಳತಿ ನಿಕಿತಾ (Nikitha) ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋಗಳು ವೈರಲ್‌ಗಳಾಗಿವೆ. ಈ ವರ್ಷಾರಂಭದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಶ್ರೇಯಸ್‌ ಗೋಪಾಲ್ ಮೈದಾನದಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ನಡೆದ 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ರಾಜಸ್ಥಾನ ರಾಯಲ್ಸ್‌ ಪರ ಕಣಕ್ಕಿಳಿದಿದ್ದರು. ಈ ಟೂರ್ನಿಗೆ ಕೋವಿಡ್ ವಕ್ರದೃಷ್ಟಿ ಬೀರಿದ್ದರಿಂದ ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇದಾದ ಬಳಿಕ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಯುಎಇನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಕೋಲ್ಕತ ನೈಟ್ ರೈಡರ್ಸ್ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡವು ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
 
14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಶ್ರೇಯಸ್‌ ಗೋಪಾಲ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಬ್ಯಾಟಿಂಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ದ 7 ರನ್‌ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 35 ರನ್‌ ನೀಡಿದ್ದರು. ಇನ್ನು ಪಂಜಾಬ್ ಕಿಂಗ್ಸ್‌ (Punjab Kings) ಎದುರು ಶ್ರೇಯಸ್ ಗೋಪಾಲ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ಬೌಲಿಂಗ್‌ನಲ್ಲಿ 40 ರನ್‌ ನೀಡಿ ದುಬಾರಿಯಾಗಿದ್ದರು. ಎರಡು ಪಂದ್ಯಗಳಲ್ಲೂ ಲೆಗ್‌ ಸ್ಪಿನ್ನರ್ ಗೋಪಾಲ್ ವಿಕೆಟ್‌ ಕಬಳಿಸಲು ವಿಫಲರಾಗಿದ್ದರು. ಇನ್ನು ಯುಎಇ ಚರಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದ ಗೋಪಾಲ್‌ ಬ್ಯಾಟಿಂಗ್‌ನಲ್ಲಿ ಶೂನ್ಯ ಸುತ್ತಿದ್ದರು, ಇನ್ನು ಬೌಲಿಂಗ್‌ನಲ್ಲಿ 9 ರನ್‌ ನೀಡಿದ್ದರು, ಆದರೆ ವಿಕೆಟ್ ಗಳಿಸಲು ಮತ್ತೊಮ್ಮೆ ವಿಫಲರಾಗಿದ್ದರು. 

ಬೆನ್ ಸ್ಟೋಕ್ಸ್‌ (Ben Stokes), ಜೋಫ್ರಾ ಆರ್ಚರ್ (Jofra Archer) ಅವರಂತಹ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡವು ನೀರಸ ಪ್ರದರ್ಶನ ತೋರುವ ಮೂಲಕ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಆಡಿದ 14 ಪಂದ್ಯಗಳ ಪೈಕಿ 9 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆದಿತ್ತು. ಇನ್ನು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಲಖನೌ ಹಾಗೂ ಅಹಮದಾಬಾದ್ ತಂಡಗಳು ಸೇರ್ಪಡೆಯಾಗಿದ್ದು, 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಹೀಗಾಗಿ 2022ನೇ ಸಾಲಿನ ಐಪಿಎಲ್‌ಗೂ ಮುನ್ನ ಡಿಸೆಂಬರ್ ತಿಂಗಳಿನಲ್ಲಿ ಮೆಗಾ ಹರಾಜು ನಡೆಯಲಿದೆ.

IPL 2022: ಈ ಐವರು ಬ್ಯಾಟರ್‌ಗಳು RCB ಪರ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲರು..!

ಈಗಿರುವ ಎಂಟು ಫ್ರಾಂಚೈಸಿಗಳಿಗೆ ಮೆಗಾ ಹರಾಜಿಗೂ (IPL Mega Auction) ಮುನ್ನ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಿದೆ. ಇನ್ನು ಹೊಸ ಎರಡು ತಂಡಗಳಿಗೆ ಗರಿಷ್ಠ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ (BCCI) ಅವಕಾಶ ಕಲ್ಪಿಸಿದೆ. ಹಾಲಿ 8 ಫ್ರಾಂಚೈಸಿಗಳು ತಮ್ಮ ತಂಡದಿಂದ ಕೈಬಿಟ್ಟ ಆಟಗಾರರಲ್ಲೇ ಮೂವರು ಆಟಗಾರರನ್ನು ಹರಾಜಿಗೂ ಮುನ್ನ ಒಪ್ಪಂದದ ಮೂಲಕ ತಮ್ಮತ್ತ ಸೆಳೆದುಕೊಳ್ಳಲು ಹೊಸ 2 ಫ್ರಾಂಚೈಸಿಗಳಿಗೆ ಅವಕಾಶ ಕಲ್ಪಿಸಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಈಗಿದ್ದ ಮಿತಿಗಿಂತ 5 ಕೋಟಿ ರುಪಾಯಿ ಹೆಚ್ಚಿಗೆ ವ್ಯಯಿಸಲು ಫ್ರಾಂಚೈಸಿಗಳಿಗೆ ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ 90 ಕೋಟಿ ರುಪಾಯಿ ಬಜೆಟ್‌ನಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಒಂದು ವೇಳೆ ಹಾಲಿ ಫ್ರಾಂಚೈಸಿಯೊಂದು ಮೆಗಾ ಹರಾಜಿಗೂ ಮುನ್ನ 4 ಆಟಗಾರರನ್ನು ರೀಟೈನ್ ಮಾಡಿಕೊಂಡರೆ 42 ಕೋಟಿ ರುಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ ಮೊದಲ ರೀಟೈನ್ ಆಟಗಾರನಿಗೆ 16 ಕೋಟಿ ರೂ, ಎರಡನೇ ಆಟಗಾರನಿಗೆ 12 ಕೋಟಿ, ಮೂರನೇ ಆಟಗಾರನಿಗೆ 8 ಕೋಟಿ ಹಾಗೂ ನಾಲ್ಕನೇ ಆಟಗಾರನಿಗೆ 6 ಕೋಟಿ ರುಪಾಯಿ ವ್ಯಯಿಸಬೇಕಾಗುತ್ತದೆ.

ಒಂದು ವೇಳೆ ಮೂವರು ಆಟಗಾರರನ್ನು ಫ್ರಾಂಚೈಸಿ ರೀಟೈನ್‌ ಮಾಡಿಕೊಂಡರೇ 33 ಕೋಟಿ(15,11 & 7), ಎರಡು ಆಟಗಾರರನ್ನು ರೀಟೈನ್‌ ಮಾಡಿಕೊಂಡರೆ 22 ಕೋಟಿ ರುಪಾಯಿ ಹಾಗೂ ಒಂದು ಆಟಗಾರನನ್ನು ರೀಟೈನ್ ಮಾಡಿಕೊಂಡರೇ 14 ಕೋಟಿ ರುಪಾಯಿ ವ್ಯಯಿಸಬೇಕಾಗುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?