Ind vs NZ Kanpur Test: ಪೂಜಾರ, ರಹಾನೆ ಔಟ್, ಆತಂಕದಲ್ಲಿ ಟೀಂ ಇಂಡಿಯಾ..!

By Suvarna News  |  First Published Nov 25, 2021, 2:27 PM IST

* ಮೊದಲ ಟೆಸ್ಟ್‌ನಲ್ಲಿ ದಿಢೀರ್ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ

* ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್

* 3 ವಿಕೆಟ್ ಕಬಳಿಸಿ ಮಿಂಚಿದ ಕೈಲ್ ಜೇಮಿಸನ್‌


ಕಾನ್ಪುರ(ನ.25): ನ್ಯೂಜಿಲೆಂಡ್‌ ವೇಗಿ ಕೈಲ್ ಜೇಮಿಸನ್‌ (Kyle Jamieson) ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಮೊದಲ ಟೆಸ್ಟ್‌ನ ಎರಡನೇ ಸೆಷನ್‌ನಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿದ್ದು, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ. ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ (Team India) 4 ವಿಕೆಟ್ ಕಳೆದುಕೊಂಡು 154 ರನ್‌ ಬಾರಿಸಿದ್ದು, ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಶ್ರೇಯಸ್‌ ಅಯ್ಯರ್(17) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ (06) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ (Green Park Stadium) ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಮಯಾಂಕ್ ಅಗರ್‌ವಾಲ್‌(13) ಆರಂಭದಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಮೊದಲ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಟೀಂ ಇಂಡಿಯಾ ಕೇವಲ 1 ವಿಕೆಟ್ ಕಳೆದುಕೊಂಡು 82 ರನ್‌ ಕಲೆಹಾಕಿತ್ತು. ಊಟದ ವಿರಾಮದ ಬಳಿಕ ಆಕ್ರಮಣಕಾರಿ ರಣತಂತ್ರದೊಂದಿಗೆ ಕ್ರೀಸ್‌ಗಿಳಿದ ಕಿವೀಸ್‌ ತಂಡಕ್ಕೆ ಮೊದಲ ಓವರ್‌ನಲ್ಲೇ ವೇಗಿ ಕೈಲ್ ಜೇಮಿಸನ್‌ ಯಶಸ್ಸು ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಮತ್ತೋರ್ವ ಆರಂಭಿಕ ಬ್ಯಾಟರ್‌ ಶುಭ್‌ಮನ್‌ ಗಿಲ್‌ (Shubman Gill) 52 ರನ್‌ ಬಾರಿಸಿ ಜೇಮಿಸನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್‌ ಸೇರಿದರು.

Tap to resize

Latest Videos

Ind vs NZ Kanpur Test: ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ, ಟೀಂ ಇಂಡಿಯಾ ದಿಟ್ಟ ಆರಂಭ

ದೊಡ್ಡ ಮೊತ್ತ ಪೇರಿಸಲು ಪೂಜಾರ-ರಹಾನೆ ವಿಫಲ: ಶುಭ್‌ಮನ್‌ ಗಿಲ್ ವಿಕೆಟ್ ಪತನದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಜಿಂಕ್ಯ ರಹಾನೆ ಹಾಗೂ ಉಪನಾಯಕ ಚೇತೇಶ್ವರ್ ಪೂಜಾರ (Cheteshwar Pujara) ಎಚ್ಚರಿಕೆಯ ಬ್ಯಾಟಿಂಗ್ ನಿಭಾಯಿಸಿದರು. ಆದರೆ ಈ ಇಬ್ಬರು ಆಟಗಾರರು ಸಿಕ್ಕ ಉತ್ತಮ ಆರಂಭವನ್ನು ದೊಡ್ಡಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಪೂಜಾರ 88 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ ಕೇವಲ 26 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಅಜಿಂಕ್ಯ ರಹಾನೆ ಆತ್ಮವಿಶ್ವಾಸದಿಂದ ಬ್ಯಾಟ್‌ ಬೀಸುವ ಮೂಲಕ ಗಮನ ಸೆಳೆದರು. ನಾಯಕ ರಹಾನೆ, ಅಯ್ಯರ್ ಜತೆ ಉತ್ತಮ ಜತೆಯಾಟ ನೀಡುವ ಮುನ್ಸೂಚನೆ ನೀಡಿದರು. ಅಜಿಂಕ್ಯ ರಹಾನೆ 63 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 35 ರನ್‌ ಬಾರಿಸಿ ಕೈಲ್ ಜೇಮಿಸನ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ರಹಾನೆ ವಿಕೆಟ್‌ ಪತನವಾದಗ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 145 ರನ್‌ ಕಲೆಹಾಕಿತ್ತು.

That will be Tea on Day 1 of the 1st Test. lose three wickets in the second session.

Scorecard - https://t.co/WRsJCUhS2d pic.twitter.com/SygJbWpp6n

— BCCI (@BCCI)

ಅಯ್ಯರ್-ಜಡೇಜಾ ಜತೆಯಾಟದ ಮೇಲೆ ಎಲ್ಲರ ಚಿತ್ತ: ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಶ್ರೇಯಸ್ ಅಯ್ಯರ್ (Shreyas Iyer) ಉತ್ತಮ ಇನಿಂಗ್ಸ್ ಆಡುವ ಮುನ್ಸೂಚನೆ ನೀಡಿದ್ದಾರೆ. ಟೀಂ ಇಂಡಿಯಾ ಕನಿಷ್ಠ 300+ ರನ್‌ ಕಲೆಹಾಕಬೇಕಿದ್ದರೇ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಒಂದು ಉತ್ತಮ ಜತೆಯಾಟ ನಿಭಾಯಿಸಬೇಕಿದೆ. ಶ್ರೇಯಸ್ ಅಯ್ಯರ್ 55 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 17 ರನ್‌ ಬಾರಿಸಿದ್ದರೇ, ಜಡೇಜಾ 6 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಭಾರತ: 82/1
ಶುಭ್‌ಮನ್ ಗಿಲ್: 52
ಚೇತೇಶ್ವರ್ ಪೂಜಾರ: 35
ಕೈಲ್ ಜೇಮಿಸನ್:38/3
(* ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ)
 

click me!