ಆಸೀಸ್‌ ಗೆಳತಿಗೆ ಸಿಡ್ನಿಲೀ ಪ್ರಪೋಸ್ ಮಾಡಿದವ ಬೆಂಗ್ಳೂರಿಗ

By Kannadaprabha News  |  First Published Dec 2, 2020, 5:33 PM IST

ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಳತಿಗೆ ಲವ್ ಪ್ರಪೋಸ್ ಮಾಡಿದಾತನಿಗೆ ಬೆಂಗಳೂರಿನ ನಂಟಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ


ಸಿಡ್ನಿ(ಡಿ.02): ಇಲ್ಲಿನ ಸಿಡ್ನಿ ಕ್ರಿಕೆಟ್‌  ಮೈದಾನದಲ್ಲಿ ಭಾನುವಾರ ನಡೆದಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2ನೇ ಏಕದಿನ ಪಂದ್ಯದ ವೇಳೆ ಆಸೀಸ್‌ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದ ಭಾರತೀಯ ಪ್ರೇಮಿ ಬೆಂಗಳೂರಿಗನಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿರುವ ದಿಪೇನ್ ಮಂಡಲಿಯಾ, ಕಳೆದ ಒಂದೂವರೆ ವರ್ಷದಿಂದ ಪರಿಚಯವಿದ್ದ ಗೆಳತಿ ಆಸೀಸ್ ಪ್ರಜೆಯಾಗಿರುವ ರೋಸ್‌ಗೆ ಕ್ರೀಡಾಂಗಣದಲ್ಲೇ ಲವ್ ಪ್ರಪೋಸ್ ಮಾಡಿದ್ದರು. 

Tap to resize

Latest Videos

ಭಾರತ ಪಂದ್ಯ ಸೋತ್ರೂ ಪ್ರೀತಿಯಲ್ಲಿ ಗೆದ್ದ ಅಭಿಮಾನಿ... ಲೈವ್ ಪ್ರಪೋಸ್!

ಲವ್‌ ಪ್ರಪೋಸ್‌ ಬಗ್ಗೆ ಸೋನಿ ವಾಹಿನಿಯ ವರದಿಗಾರ್ತಿ, ಈ ರೀತಿಯ ಪ್ರೇಮ ನಿವೇದನೆ ಮೊದಲೇ ನಿರ್ಧಾರ ಮಾಡಿಕೊಂಡಿದ್ರಾ ಎನ್ನುವ ಪ್ರಶ್ನೆಗೆ, ದಿಪೇನ್, ಹೌದು, ಆದರೆ ಅದು 'ಪ್ಲಾನ್ ಬಿ' ಆಗಿತ್ತು. 'ಪ್ಲಾನ್ ಎ' ಏನೆಂದರೆ ನಮ್ಮ ಕುಟುಂಬದ 10-12 ಮಂದಿಯ ಎದುರು ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿತ್ತು ಎಂದು ಉತ್ತರಿಸಿದ್ದಾರೆ. ಈ ರೀತಿ ಎಂಗೇಜ್‌ಮೆಂಟ್ ಆಗುವುದು ಯಾರೊಬ್ಬರಿಗೂ ಗೊತ್ತಿರಲಿಲ್ಲ. ಯಾರಿಗೂ ಒಂದು ಸಣ್ಣ ಸುಳಿವನ್ನು ನೀಡಿರಲಿಲ್ಲ ಎಂದು ದಿಪೇನ್ ಪ್ರತಿಕ್ರಿಯಿಸಿದ್ದಾರೆ.

ದಿಪೇನ್ ಮಂಡಲಿಯಾ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ. ದಿಪೇನ್, ಸದ್ಯ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿನ ಜೆಟ್‌ಸ್ಟಾರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

click me!