Happy Birthday Sachin Tendulkar: ಕ್ರಿಕೆಟ್‌ ದೇವರಿಗಿಂದು 49ನೇ ಜನ್ಮದಿನದ ಸಂಭ್ರಮ

By Naveen KodaseFirst Published Apr 24, 2022, 1:28 PM IST
Highlights

* 49ನೇ ವಸಂತಕ್ಕೆ ಕಾಲಿರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

* ಸಚಿನ್ ತೆಂಡುಲ್ಕರ್ ಏಪ್ರಿಲ್ 24, 1973ರಲ್ಲಿ ಮುಂಬೈನಲ್ಲಿ ಜನಿಸಿದ್ದರು

* ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದ ಬಂದಿದೆ ಶುಭಾಶಯಗಳ ಮಹಾಪೂರ

ಮುಂಬೈ(ಏ.24): ವಿಶ್ವಕ್ರಿಕೆಟ್‌ ಪಾಲಿಗೆ ಏಪ್ರಿಲ್ 24 ಐತಿಹಾಸಿಕ ದಿನಗಳಲ್ಲಿ ಒಂದು. ಕಾರಣ, ಏಪ್ರಿಲ್ 24 ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಜನಿಸಿದ ದಿನ (Sachin Tendulkar Birthday). ಇಂದು ಕ್ರಿಕೆಟ್ ದೇವರೆಂದೇ ಹೆಸರಾದ ಸಚಿನ್ ತೆಂಡುಲ್ಕರ್ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.  

ಮಹಾರಾಷ್ಟ್ರ ಮೂಲದ ಸಚಿನ್ ತೆಂಡುಲ್ಕರ್ ಏಪ್ರಿಲ್ 24, 1973ರಲ್ಲಿ ಮುಂಬೈನಲ್ಲಿ ಜನಿಸಿದ್ದರು. ಇನ್ನು ತಮ್ಮ 16ನೇ ವಯಸ್ಸಿನಲ್ಲಿ ಅಂದರೆ ನವೆಂಬರ್ 15, 1989ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಅದೇ ವರ್ಷ ಡಿಸೆಂಬರ್ 18ರಂದು ಭಾರತ ಏಕದಿನ ಕ್ರಿಕೆಟ್ ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಸುಮಾರು ಎರಡೂವರೆ ದಶಕಗಳ ಕಾಲ ಮಾಸ್ಟರ್‌ ಬ್ಲಾಸ್ಟರ್ ತೆಂಡುಲ್ಕರ್ ಕ್ರಿಕೆಟ್ ಜಗತ್ತನ್ನು ಆಳಿದರು. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ ಗರಿಷ್ಠ ಟೆಸ್ಟ್ ಹಾಗೂ ಏಕದಿನ ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ಕೂಡಾ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. 

Latest Videos

200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡುಲ್ಕರ್ 15, 921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳು ಸೇರಿವೆ. ಇನ್ನು 463 ಏಕದಿನ ಪಂದ್ಯಗಳನ್ನಾಡಿ 19 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತ ಪರ 6 ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೂಡಾ ತೆಂಡುಲ್ಕರ್ ಹೆಸರಿನಲ್ಲಿದೆ. 

IPL 2022: ಮುಂಬೈ ಪರ ಮಿಂಚಿದ ಹೃತಿಕ್ ಶೋಕೀನ್ ಯಾರು ಗೊತ್ತಾ..?

24 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್  ಒಟ್ಟಾರೆ 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 34,357 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 201 ಬಲಿ ಪಡೆದಿದ್ದಾರೆ. ಇದಷ್ಟೇ ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ 2,334 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ 2013ರಲ್ಲಿ ತಮ್ಮ ತವರು ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದರು. 

ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. ಗೌತಮ್ ಗಂಭೀರ್ (Gautam Gambhir), ಸುರೇಶ್ ರೈನಾ (Suresh Raina), ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಸೇರಿದಂತೆ ಹಲವು ಮಂದಿ ಮಾಸ್ಟರ್ ಬ್ಲಾಸ್ಟರ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಕೋರಿದ್ದಾರೆ. 

6⃣6⃣4⃣ international matches
3⃣4⃣,3⃣5⃣7⃣ international runs
1⃣0⃣0⃣ international tons
2⃣0⃣1⃣ international wickets

Here's wishing the ever-so-inspirational & legendary a very happy birthday. 🎂 👏 🙌 pic.twitter.com/d70JoSnJd8

— BCCI (@BCCI)

A true legend & an even better human being. Wish you a very happy birthday . God bless! pic.twitter.com/FPJQmZwm40

— Gautam Gambhir (@GautamGambhir)

To the man who united billions worldwide for the love of cricket, whose magic on the field and generosity off the field inspire many. Happy birthday ! Wishing you the best!

— Jay Shah (@JayShah)

To the man who united billions worldwide for the love of cricket, whose magic on the field and generosity off the field inspire many. Happy birthday ! Wishing you the best!

— Jay Shah (@JayShah)

Happy Birthday Paji . Wishing you the best of health & happiness always. You are & will always remain the true icon of cricket. Keep shining! Keep inspiring us all! 🙌🤗 pic.twitter.com/pmgRX274Is

— Suresh Raina🇮🇳 (@ImRaina)
click me!