ಹರಿಣಗಳ ಪಡೆಯಂತೆ ಭಾರತೀಯ ಮಹಿಳೆಯರು ಈಗ ಚೋಕರ್ಸ್..?

By Suvarna NewsFirst Published Aug 11, 2022, 2:57 PM IST
Highlights

ಮಹತ್ವದ ಘಟ್ಟದಲ್ಲಿ ವಿಫಲವಾಗುತ್ತಿದೆ ಭಾರತ ಮಹಿಳಾ ಕ್ರಿಕೆಟ್ ತಂಡ
ಪದೇ ಪದೇ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತಿರುವ ಭಾರತೀಯ ಮಹಿಳಾ ಕ್ರಿಕೆಟ್
ಹರಿಣಗಳಂತೆ ಚೋಕರ್ಸ್ ಆಗುತ್ತಿದೆ ಮಹಿಳಾ ಕ್ರಿಕೆಟ್ ತಂಡ

ಬೆಂಗಳೂರು(ಆ.11): ದಕ್ಷಿಣ ಆಫ್ರಿಕಾ, ವಿಶ್ವ ಕ್ರಿಕೆಟ್​ನಲ್ಲಿ ಜೋಕರ್ಸ್ ಎಂದೇ ಫೇಮಸ್. ಒಂದೂ ಐಸಿಸಿ ಟ್ರೋಫಿ ಗೆಲ್ಲದ ಸೌತ್ ಆಫ್ರಿಕಾ ಟೀಂ​ ಚೋಕರ್ಸ್ ಪಟ್ಟ ಅಲಂಕರಿಸಿದೆ. ಎಲ್ಲಾ ಐಸಿಸಿ ಟೂರ್ನಿ ಲೀಗ್ ಮ್ಯಾಚ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಆಫ್ರಿಕನ್ನರು, ನಾಕೌಟ್ ಪಂದ್ಯಗಳಲ್ಲಿ ಸೋತು ಐಸಿಸಿ ಟ್ರೋಫಿ ಗೆಲ್ಲದೆ ನಿರಾಸೆ ಅನುಭವಿಸಿದ್ದಾರೆ. ಹಾಗಾಗಿ ಪುರುಷರ ಕ್ರಿಕೆಟ್​ನಲ್ಲಿ ಆಫ್ರಿಕಾಗೆ ಚೋಕರ್ಸ್ ಪಟ್ಟ ನೀಡಿರೋದು.

ಈಗ ಮಹಿಳಾ ಕ್ರಿಕೆಟ್​ನಲ್ಲಿ ಭಾರತ ವನಿತೆಯರು ಚೋಕರ್ಸ್ ಆಗಿದ್ದಾರೆ.  ಭಾರತ ಮಹಿಳಾ ಕ್ರಿಕೆಟ್ ತಂಡವು 4 ಮೆಗಾ ಟೂರ್ನಿ ಫೈನಲ್​ನಲ್ಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ 4 ಕಪ್ ಗೆಲ್ಲೋದ್ರಿಂದ ವಂಚಿತರಾಗಿ ಚೋಕರ್ಸ್ ಎನಿಸಿಕೊಂಡಿದ್ದಾರೆ.

2005-17ರ ಒನ್​ಡೇ ವರ್ಲ್ಡ್​ಕಪ್ ಫೈನಲ್​ನಲ್ಲಿ ಭಾರತ ಪರಾಭವ:

1973ರಿಂದ ಮಹಿಳೆಯರ ಒನ್​ಡೇ ವರ್ಲ್ಡ್​ಕಪ್ ಟೂರ್ನಿ ನಡೆಯುತ್ತಿದ್ದರೂ ಭಾರತ ಫಸ್ಟ್ ಟೈಮ್ ಫೈನಲ್ ಪ್ರವೇಶಿಸಿದ್ದು, 2005ರಲ್ಲಿ. ಸೌತ್ ಆಫ್ರಿಕಾದಲ್ಲಿ ನಡೆದ ಫೈನಲ್ ಫೈಟ್​ನಲ್ಲಿ ಆಸ್ಟ್ರೇಲಿಯಾ 215 ರನ್ ಬಾರಿಸಿದ್ರೆ, ಭಾರತೀಯರು 117 ರನ್​​​ಗೆ ಆಲೌಟ್ ಆಗಿ ಸೋಲು ಅನುಭವಿಸಿ ರನ್ನರ್​ ಅಪ್ ಆದ್ರು.

Asia Cup 2022: ಅಕ್ಷರ್ ಪಟೇಲ್‌ಗೆ ಸ್ಥಾನ ನೀಡದಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪಾರ್ಥಿವ್ ಪಟೇಲ್..!

2017ರಲ್ಲೂ ಏಕದಿನ ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದ್ದ ಇಂಡಿಯಾ ವುಮೆನ್ಸ್ ಟೀಂ, ಅಲ್ಲೂ ಸೋತಿತು. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ 228 ರನ್ ಹೊಡೆದ್ರೆ, ಭಾರತ ಮಹಿಳಾ ತಂಡ 219 ರನ್​​​ಗೆ ಆಲೌಟ್ ಆಗಿ 9 ರನ್​ನಿಂದ ವಿರೋಚಿತ ಸೋಲು ಅನುಭವಿಸ್ತು.

2020ರ ಟಿ20 ವಿಶ್ವಕಪ್ ಫೈನಲ್​​ನಲ್ಲೂ ಭಾರತೀಯರಿಗೆ ಸೋಲು: 

2009ರಿಂದ ಮಹಿಳೆಯರ ಟಿ20 ವಿಶ್ವಕಪ್ ನಡೆಯುತ್ತಿದ್ದರೂ ಭಾರತೀಯರು ಫೈನಲ್ ಪ್ರವೇಶಿಸಿದ್ದು ಮಾತ್ರ 2020ರ ಟೂರ್ನಿಯಲ್ಲಿ. ಮೆಲ್ಬೋರ್ನ್​ನಲ್ಲಿ ನಡೆದ ಫೈನಲ್​ನಲ್ಲಿ ಆತಿಥೇಯ ಆಸ್ಟ್ರೇಲಿಯಾ 184 ರನ್ ಬಾರಿಸಿದ್ರೆ, ಭಾರತೀಯರು 99 ರನ್​ಗೆ ಆಲೌಟ್ ಆಗಿ ಸೋತು ಹೋದ್ರು. ಈ ಮೂಲಕ ಮೂರು ವಿಶ್ವಕಪ್ ಫೈನಲ್​ನಲ್ಲಿ ಸೋತ ತಂಡ ಅನ್ನೋ ಅಪಕೀರ್ತಿಗೆ ಒಳಗಾದ್ರು.

ಕಾಮನ್ವೆಲ್ತ್ ಗೇಮ್ಸ್ ಫೈನಲ್​ನಲ್ಲೂ ಸೋಲು: 

ಕೆಲದಿನಗಳ ಹಿಂದಷ್ಟೇ ಕಾಮನ್ವೆಲ್ತ್ ಗೇಮ್ಸ್ ಫೈನಲ್​ನಲ್ಲೂ ಇಂಡಿಯಾ ವುಮೆನ್ಸ್​, ಆಸ್ಟ್ರೇಲಿಯಾ ವಿರುದ್ಧ 9 ರನ್​ನಿಂದ ಸೋಲು ಅನುಭವಿಸಿದ್ರು. ಟಿ20 ಮ್ಯಾಚ್​​ನಲ್ಲಿ ಆಸೀಸ್​ 161 ರನ್ ಹೊಡೆದಿದ್ದರೆ ಭಾರತೀಯರು 152 ರನ್ ಗಳಿಸಿ ಸೋತರು. ಚಿನ್ನದ ಪದಕ ಮಿಸ್ ಆಯ್ತು. ಈ ಮೂಲ್ಕ 4 ಫೈನಲ್​ಗಳಲ್ಲಿ ಮೂರು ಬಾರಿ ಆಸ್ಟ್ರೇಲಿಯಾ ವಿರುದ್ಧವೇ ಸೋಲು ಅನುಭವಿಸಿದ್ದಾರೆ. ಮೇಗಾ ಟೂರ್ನಿಗಳಲ್ಲಿ ಕಾಂಗರೂಗಳು ಭಾರತೀಯರಿಗೆ ಕಂಟಕರಾಗಿದ್ದಾರೆ.

click me!