
ಪುಣೆ(ಜ.09): ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಆರಂಭಿಕ ಪಂದ್ಯ ಮಳೆಯಿಂದ ರದ್ದಾದರೆ, 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವು ಸಾಧಿಸಿತು. ಇದೀಗ ಅಂತಿಮ ಪಂದ್ಯ ಗೆದ್ದು ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳಲು ಕೊಹ್ಲಿ ಸೈನ್ಯ ಸಜ್ಜಾಗಿದೆ. ಇತ್ತ ಲಂಕಾ 3ನೇ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳೋ ತವಕದಲ್ಲಿದೆ.
ಇದನ್ನೂ ಓದಿ: ಲಂಕಾ ಮಣಿಸಿ ವರ್ಷದ ಮೊದಲ ಗೆಲುವಿನ ಸಿಹಿಯುಂಡ ಟೀಂ ಇಂಡಿಯಾ.
ದ್ವಿತೀಯ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಶ್ರೀಲಂಕಾ, ಪುಣೆಯಲ್ಲಿ ತಿರುಗೇಟು ನೀಡಲು ಭರ್ಜರಿ ತಯಾರಿ ನಡೆಸಿದೆ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಅಂತಿಮ ಪಂದ್ಯಕ್ಕೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಪ್ಲಾನ್ ರೆಡಿ ಮಾಡಿದ್ದಾರೆ. 2ನೇ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನೇ ಅಂತಿಮ ಪಂದ್ಯಕ್ಕೂ ಕಣಕ್ಕಿಳಸಲು ಕೊಹ್ಲಿ ನಿರ್ಧರಿಸಿದ್ದಾರೆ. ಹೀಗಾಗಿ ಇಂಜುರಿ ಹೊರತು ಪಡಿಸಿ ಬದಲಾವಣೆ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ಭಜ್ಜಿ ಬೌಲಿಂಗ್ ಅನುಕರಿಸಿದ ವಿರಾಟ್ ಕೊಹ್ಲಿ
ಭಾರತ ಸಂಭವನೀಯ ತಂಡ:
ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ರಿಷಬ್ ಪಂತ್. ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ಸಂಭವನೀಯ ತಂಡ:
ದನುಶ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೋ, ಕುಸಾಲ್ ಪರೇರಾ, ಒಶಾದ ಫರ್ನಾಂಡೋ, ಭಾನುಕ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ದಸೂನ್ ಶನಕಾ, ಇಸುರು ಉದಾನಾ, ವಾನಿಂಡು ಹಸರಂಗ, ಲಹೀರು ಕುಮಾರ, ಲಸಿತ್ ಮಾಲಿಂಗ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.