* ಭಾರತ-ಶ್ರೀಲಂಕಾ ಏಕದನಿ ಸರಣಿ ವೇಳಾಪಟ್ಟಿ ಬದಲಾವಣೆ
* ಕೊರೋನಾ ಕಾರಣಕ್ಕೆ ನಾಲ್ಕು ದಿನ ಮುಂದಕ್ಕೆ
* ಶಿಖರ್ ಧವನ್ ನೇತೃತ್ವದ ತಂಡ ತೆರಳಿದೆ
* ಶ್ರೀಲಂಕಾ ಜತೆ ಏಕದಿನ ಮತ್ತು ಟಿ ಟ್ವೆಂಟಿ ಸರಣಿ
ಕೊಲಂಬೊ(ಜು. 09) ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ಕೊರೋನಾ ಕಾಟ ಶುರುವಾಗಿದೆ. ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಡ್ ಫ್ಲವರ್ ಗೆ ಕೋವಿಡ್ ಸೋಂಕು ತಗುಲಿದ ಬೆನ್ನಲ್ಲೇ ತಂಡದ ಡಾಟಾ ವಿಶ್ಲೇಷಕರಿಗೂ ಕೋವಿಡ್-19 ಸೋಂಕು ತಗುಲಿದ್ದು ಸುದ್ದಿಯಾಗಿತ್ತು.
ಶ್ರೀಲಂಕಾ ತಂಡದ ಸಪೋರ್ಟ್ ಸ್ಟಾಫ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣ ಪಂದ್ಯಾವಳಿ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಲಂಕಾ-ಭಾರತದ ನಡುವೆ ಜು.13 ರಿಂದ ಏಕದಿನ ಸರಣಿ ಪ್ರಾರಂಭವಾಗಬೇಕಿತ್ತು. ಆದರೆ ದಿನಾಂಕ ಬದಲಾವಣೆ ಮಾಡಲಾಗಿದ್ದು ಜು. 17, 19 ಮತ್ತು 21ಕ್ಕೆ ಏಕದಿನ ಪಂದ್ಯ ನಡೆಯಲಿದೆ. T20I ಪಂದ್ಯಗಳು ಜು. 24, 25 ಮತ್ತು 27 ರಂದು ನಡೆಯಲಿವೆ.
ಶ್ರೀಲಂಕಾ ತಂಡದಲ್ಲಿ ಮಹತ್ವದ ಬದಲಾವಣೆ
ಇಂಗ್ಲೆಂಡ್ ಪ್ರವಾಸ ಮುಕ್ತಾಯಗೊಳಿಸಿದ್ದ ಲಂಕಾ ತಂಡ ತವರಿಗೆ ಆಗಮಿಸಿದ 48 ಗಂಟೆಗಳಲ್ಲಿಯೇ ಬ್ಯಾಟಿಂಗ್ ಕೋಚ್ ಗೆ ಸೋಂಕು ದೃಢಪಟ್ಟಿತ್ತು. ಕೊರೋನಾ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಾವಳಿಯನ್ನು ಸ್ಥಗಿತ ಮಾಡಿತ್ತು.
ಶಿಖರ್ ಧವನ್ ನೇತೃತ್ವದಲ್ಲಿ ಲಂಕಾಕ್ಕೆ ಭಾರತದ ಏಕದಿನ ತಂಡ ತೆರಳಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳಿರುವುದು ವಿಶೇಷ. ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೆಸ್ಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಾವಳಿ ಸಿದ್ಧತೆಯಲ್ಲಿದೆ.