Pink Ball Test: ಬೆಂಗಳೂರಿನ ಚಿನ್ನಸ್ವಾಮಿ ಪಿಚ್‌ಗೆ ಐಸಿಸಿ ಸಾಧಾರಣ ರೇಟಿಂಗ್..!

Suvarna News   | Asianet News
Published : Mar 21, 2022, 08:13 AM IST
Pink Ball Test: ಬೆಂಗಳೂರಿನ ಚಿನ್ನಸ್ವಾಮಿ ಪಿಚ್‌ಗೆ ಐಸಿಸಿ ಸಾಧಾರಣ ರೇಟಿಂಗ್..!

ಸಾರಾಂಶ

* ಭಾರತ-ಶ್ರೀಲಂಕಾ ನಡುವಿನ ಪಿಂಕ್ ಬಾಲ್‌ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಸ್ಟೇಡಿಯಂ * ಬೆಂಗಳೂರಿನಲ್ಲಿ ಸಾಧಾರಣ ಪಿಚ್ ನಿರ್ಮಿಸಿದ್ದಕ್ಕೆ ಐಸಿಸಿ ಚಾಟಿ ಬೀಸಿದೆ * ಕೇವಲ ಮೂರನೇ ದಿನಕ್ಕೆ ಮುಕ್ತಾಯವಾಗಿದ್ದ ಪಿಂಕ್ ಬಾಲ್ ಟೆಸ್ಟ್

ಬೆಂಗಳೂರು(ಮಾ.21): ಇತ್ತೀಚೆಗೆ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ 2ನೇ ಟೆಸ್ಟ್‌ ಪಂದ್ಯಕ್ಕೆ ಬಳಸಲಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ (M. Chinnaswamy Stadium) ಪಿಚ್‌ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಅಸಮಾಧಾನ ವ್ಯಕ್ತಪಡಿಸಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯವು ಕೇವಲ ಮೂರೇ ದಿನಕ್ಕೆ ಮುಕ್ತಾಯವಾಗಿತ್ತು. ಈ ಬಗ್ಗೆ ಐಸಿಸಿ ಮ್ಯಾಚ್‌ ರೆಫ್ರಿ ಜಾವಗಲ್‌ ಶ್ರೀನಾಥ್‌ (Javagal Srinath) ಐಸಿಸಿಗೆ ವರದಿ ಸಲ್ಲಿಸಿದ್ದರು. ‘ಪಿಚ್‌ ಮೊದಲ ದಿನವೇ ಸ್ಪಿನ್ನರ್‌ಗಳಿಗೆ ನಿರೀಕ್ಷೆಗಿಂತ ಹೆಚ್ಚು ನೆರವು ನೀಡಿತ್ತು. ಪ್ರತಿ ಅವಧಿಯ ಬಳಿಕ ಸುಧಾರಿಸಿದರೂ ಪಿಚ್‌ ಸ್ಪರ್ಧಾತ್ಮಕವಾಗಿರಲಿಲ್ಲ’ ಎಂದು ಶ್ರೀನಾಥ್‌ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಪಿಚ್‌ ಸಾಧಾರಣವಾಗಿತ್ತು ಎಂದು ರೇಟಿಂಗ್‌ ನೀಡಿರುವ ಐಸಿಸಿ, ಬೆಂಗಳೂರು ಪಿಚ್‌ಗೆ 1 ಋುಣಾತ್ಮಕ ಅಂಕವನ್ನೂ ನೀಡಿದೆ.

ಪರಿಣಾಮವೇನು?:

ಐಸಿಸಿಯು (ICC) ಯಾವುದೇ ಪಿಚ್‌ ಕಳಪೆ ಮಟ್ಟದ್ದಾಗಿದ್ದರೆ 3 ಹಾಗೂ ಆಟಕ್ಕೆ ಯೋಗ್ಯವಲ್ಲದ ಪಿಚ್‌ಗೆ 5 ಋುಣಾತ್ಮಕ ಅಂಕ ನೀಡುತ್ತದೆ. 5 ವರ್ಷಗಳೊಳಗೆ 5 ಋುಣಾತ್ಮಕ ಅಂಕ ಪಡೆಯುವ ಪಿಚ್‌ಗಳಲ್ಲಿ 1 ವರ್ಷಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವುದಿಲ್ಲ. ಇದೀಗ 1 ಋುಣಾತ್ಮಕ ಅಂಕ ಗಳಿಸಿರುವ ಕೆಎಸ್‌ಸಿಎ (KSCA) ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಿಚ್‌ ಸಿದ್ಧಪಡಿಸುವಾಗ ಬಹಳ ಎಚ್ಚರಿಕೆ ವಹಿಸಬೇಕಿದೆ.

ಹೀಗಿತ್ತು ಪಿಂಕ್ ಬಾಲ್ ಟೆಸ್ಟ್‌: ಬೆಂಗಳೂರು ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ (Team India), ಶ್ರೇಯಸ್ ಅಯ್ಯರ್ ಬಾರಿಸಿದ ಸಮಯೋಚಿತ ಅರ್ಧಶತಕ(92)ದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 252 ರನ್ ಬಾರಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಜಸ್ಪ್ರೀತ್ ಬುಮ್ರಾ (Jasprit Bumrah) ಮಾರಕ ದಾಳಿಗೆ ತತ್ತರಿಸಿ ಕೇವಲ 109 ರನ್‌ಗಳಿಗೆ ಆಲೌಟ್ ಆಯಿತು. ಅಮೂಲ್ಯ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ರಿಷಭ್ ಪಂತ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 303 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದರ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಗೆಲ್ಲಲು ಪ್ರವಾಸಿ ಶ್ರೀಲಂಕಾ ತಂಡಕ್ಕೆ 477 ರನ್‌ಗಳ ಗುರಿ ನೀಡಿತ್ತು. ಭಾರತ ನೀಡಿದ್ದ 447 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು (Sri Lanka Cricket Team) 208 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು.

Ind vs SL ಮೂರೇ ದಿನಕ್ಕೆ ಮುಗಿದ Pink Ball Test, ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ

ಮೂರೇ ದಿನಕ್ಕೆ ಮುಗಿದಿದ್ದ ಪಂದ್ಯ

ಭಾರತ-ಶ್ರೀಲಂಕಾ 2ನೇ ಪಂದ್ಯ ಕೇವಲ ಮೂರೇ ದಿನದಲ್ಲಿ ಕೊನೆಗೊಂಡಿತ್ತು. ಮೊದಲ ದಿನ 16 ವಿಕೆಟ್‌ಗಳ ಪತನಕ್ಕೆ ಸಾಕ್ಷಿಯಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌, 2ನೇ ದಿನ 13 ಬ್ಯಾಟರ್‌ಗಳನ್ನು ಬಲಿ ಪಡೆದಿತ್ತು. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಿದ್ದ ಪಿಚ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ 5 ವಿಕೆಟ್‌ ಕಬಳಿಸಿ ಮಿಂಚಿದ್ದರು. 238 ರನ್‌ಗಳ ಗೆಲುವು ಸಾಧಿಸಿದ್ದ ಭಾರತ ಸರಣಿಯನ್ನು 2-0 ಅಂತರದಲ್ಲಿ ಗೆದ್ದಿತ್ತು. ಭದ್ರತಾ ಲೋಪದಿಂದ ಮೈದಾನಕ್ಕೆ ಅಭಿಮಾನಿಗಳು ನುಗ್ಗಿ ವಿರಾಟ್‌ ಕೊಹ್ಲಿ (Virat Kohli) ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು. ಇದೀಗ ಪಿಚ್‌ಗೆ ಋುಣಾತ್ಮಕ ಅಂಕ ಸಿಕ್ಕಿರುವುದು ಮತ್ತಷ್ಟು ಹಿನ್ನಡೆ ಉಂಟು ಮಾಡಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?