*ಪಾಕ್ ವಿರುದ್ಧ ಸೋತಿದ್ದ ಎರಡೂ ತಂಡಗಳ ನಡುವೆ ನಿರ್ಣಾಯಕ ಹಣಾಹಣಿ
*ಸೆಮೀಸ್ ರೇಸಲ್ಲಿ ಉಳಿಯಲು ಭಾರತಕ್ಕೆ ಗೆಲುವು ಅನಿವಾರ್ಯ
*ಭಾರತಕ್ಕೆ 6ನೇ ಬೌಲರ್ ಚಿಂತೆ : ಗಪ್ಟಿಲ್ ಫಿಟ್!
ದುಬೈ (ಅ. 31) : ಟಿ20 ವಿಶ್ವಕಪ್‌ನ (T20 World Cup) ತಮ್ಮ ಆರಂಭಿಕ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ಭಾನುವಾರ (ಅ. 31) ನಿರ್ಣಾಯಕ ಪಂದ್ಯ ಆಡಲಿವೆ. ಈ ಪಂದ್ಯ ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮವಾಗುವ ನಿರೀಕ್ಷೆ ಇದ್ದು, ಸೋಲುವ ತಂಡ ಸಂಕಷ್ಟಕ್ಕೆ ಸಿಲುಕಲಿದೆ. ಭಾನುವಾರ ಸಂಜೆ 7.30ಕ್ಕೆ ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ.
ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!
undefined
‘ಬಿ’ ಗುಂಪಿನಿಂದ ಸೆಮಿಫೈನಲ್‌ಗೆ ಏರಲು 2 ತಂಡಗಳಿಗೆ ಅವಕಾಶ ಇದೆ. 6 ತಂಡಗಳ ಪೈಕಿ ಪಾಕಿಸ್ತಾನ ಈಗಾಗಲೇ ಭಾರತ, ನ್ಯೂಜಿಲೆಂಡ್, ಅಫ್ಘಾನಿಸ್ತಾನವನ್ನು ಸೋಲಿಸಿದ್ದು, ಸೆಮಿಫೈನಲ್ ಸೀಟು ಬಹುತೇಕ ಖಚಿತಪಡಿಸಿಕೊಂಡಿದೆ. ಉಳಿದೆರಡು ತಂಡಗಳಾದ ನಮೀಬಿಯಾ (Namibia) ಹಾಗೂ ಸ್ಕಾಟ್ಲೆಂಡ್ (Scotland) ಅದಕ್ಕೆ ಸುಲಭ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಭಾರತ, ನ್ಯೂಜಿಲೆಂಡ್ ಈವರೆಗೆ ಪಾಕಿಸ್ತಾನ ವಿರುದ್ಧವಷ್ಟೇ ಆಡಿದ್ದು, ಈ ತಂಡಗಳು ಇನ್ನೂ 4 ಪಂದ್ಯ ಆಡಬೇಕಿದೆ. ಈ ಪೈಕಿ, ಭಾನುವಾರದ ಪಂದ್ಯ ಹೊರತುಪಡಿಸಿದರೆ, ಉಳಿದ ಮೂರನ್ನು ಅಷ್ಟಾಗಿ ಬಲಾಢ್ಯ ಅಲ್ಲದ ಆಫ್ಘನ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಆಡಬೇಕಿದೆ. ಹಾಗಾಗಿ, ಭಾನುವಾರದ ಪಂದ್ಯ ‘ವರ್ಚುವಲ್ ಕ್ವಾರ್ಟರ್‌ಫೈನಲ್’ ಎನಿಸಿಕೊಂಡಿದೆ.
6ನೇ ಬೌಲರ್ ಚಿಂತೆ!
ಪಾಕ್ ವಿರುದ್ಧ ದಯನೀಯ ವೈಫಲ್ಯ ಕಂಡಿದ್ದ ಭಾರತಕ್ಕೆ 6ನೇ ಬೌಲರ್ ಸಮಸ್ಯೆ ಕಾಡುತ್ತಿದೆ. ಭುವನೇಶ್ವರ್ (Bhuvaneshwar), ಶಮಿ (Shami), ಬುಮ್ರಾ (Bumrah) ಜತೆಗೆ ಒಂದೆರಡು ಓವರ್ ಎಸೆಯಬಲ್ಲ ಪರಿಣಾಮಕಾರಿ ಬೌಲರನ್ನು ಭಾರತ ಅರಸುತ್ತಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಮಾಡಿದರೆ ಆ ಸಮಸ್ಯೆ ಪರಿಹಾರ ಆಗುವ ನಿರೀಕ್ಷೆ ಇದೆ. ನೆಟ್ಸ್‌ನಲ್ಲಿ ಬೌಲಿಂಗ್ ನಡೆಸಿದ್ದ ಪಾಂಡ್ಯ ಪಂದ್ಯದಲ್ಲಿ ಬೌಲ್ ಮಾಡುತ್ತಾರಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪಾಂಡ್ಯ ಬದಲಿಗೆ ಶಾರ್ದೂಲ್ ಠಾಕೂರ್ ಸೇರ್ಪಡೆ ಆದರೂ ಅಚ್ಚರಿ ಇಲ್ಲ. ಇನ್ನು ಜಡೇಜಾ ಜತೆ ಸ್ಪಿನ್ ಹೊಣೆ ಹೊತ್ತಿರುವ ವರುಣ್ ಚಕ್ರವರ್ತಿ ಆಡುತ್ತಾರಾ, ಅವರ ಜಾಗಕ್ಕೆ ಅಶ್ವಿನ್ ಬರುತ್ತಾರಾ ಕಾದು ನೋಡಬೇಕಿದೆ.
ಗಪ್ಟಿಲ್ ಫಿಟ್!
ಪಾಕ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಗಪ್ಟಿಲ್ ಈಗ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಭಾರತ ವಿರುದ್ಧ ಪಂದ್ಯಕ್ಕೆ ಲಭ್ಯವಿರಲಿದ್ದಾರೆ. ಇನ್ನು ಲಾಕಿ ಫಗ್ರ್ಯೂಸನ್ ಈಗಾಗಲೇ ಗಾಯಗೊಂಡು ತಂಡದಿಂದಲೇ ಹೊರಬಿದ್ದಿದ್ದು, ಅವರ ಬದಲಿಗೆ ಆ್ಯಡಂ ಮಿಲ್ನೆ ಆಡುವ ಸಾಧ್ಯತೆ ಇದೆ.
2003ರ ಬಳಿಕ ಗೆದ್ದಿಲ್ಲ ಭಾರತ!
ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಎದುರು ಭಾರತ ಕಳಪೆ ದಾಖಲೆ ಹೊಂದಿದೆ. 2003ರ ಬಳಿಕ ಕಿವೀಸ್ ಎದುರು ಭಾರತ ಆಡಿರುವ ಐಸಿಸಿ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಸೋತಿದೆ. 2007, 2016ರಲ್ಲಿ ಟಿ20, 2019ರಲ್ಲಿ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪನಲ್ಲಿ ಕಿವೀಸ್ ವಿರುದ್ಧ ಭಾರತ ಸೋಲನುಭವಿಸಿದೆ.
ಪಿಚ್ ರಿಪೋರ್ಟ್
ದುಬೈನಲ್ಲಿ ರನ್ ಚೇಸ್ ಮಾಡುವ ತಂಡಕ್ಕೆ ಹೆಚ್ಚು ಲಾಭವಾಗುವುದು ಈಗಾಗಲೇ ಸಾಬೀತಾಗಿದೆ. 2ನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವ ಕಾರಣ ಬೌಲ್ ಮಾಡುವ ತಂಡಕ್ಕೆ ಸಮಸ್ಯೆ ಎದುರಾಗಲಿದೆ. ಹೀಗಾಗಿ ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ಟಾಸ್ ಗೆದ್ದರೆ ಬೌಲಿಂಗ್ ಆಯ್ಕೆ ಮಾಡುವುದು ಬಹುತೇಕ ಖಚಿತ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್/ಭುವನೇಶ್ವರ್, ಮೊಹಮದ್ ಶಮಿ, ಜಸ್‌ಪ್ರೀತ್ ಬೂಮ್ರ, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ ಕಟ್ಟಿ ಹಾಕಿದ ಇಂಗ್ಲೆಂಡ್, ಸಾಧಾರಣ ಗುರಿ
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಕೇನ್ ವಿಲಿಯಮ್ಸನ್(ನಾಯಕ), ಡೇವಿಡ್ ಕಾನ್‌ವೆ, ಫಿಲಿಫ್ಸ್, ನೀಶನ್, ಸೀಫೆರ್ಟ್, ಸ್ಯಾಂಟ್ನರ್, ಟಿಮ್ ಸೌಥಿ, ಐಶ್ ಸೋಧಿ, ಟ್ರೆಂಟ್ ಬೌಲ್ಟ್