ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಮಾತೊಂದು ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟಕ್ಕೂ ವಿರಾಟ್ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಕ್ರೈಸ್ಟ್‌ಚರ್ಚ್(ಮಾ.03): ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಲ್ಲಿ ಶರಣಾಗಿದೆ. ಇದು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾ ಎದುರಿಸಿದ ಮೊದಲ ಸರಣಿ ಸೋಲು ಕೂಡ ಹೌದು.
ಪತ್ರಕರ್ತನ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ನಾಲ್ಕು ಇನಿಂಗ್ಸ್‌ನಲ್ಲೂ 20ಕ್ಕೂ ಅಧಿಕ ಬಾರಿಸಲು ಸಾಧ್ಯವಾಗಲಿಲ್ಲ. ಕಿವೀಸ್ ವೇಗಿಗಳು ಆ ಮಟ್ಟಿಗೆ ಕೊಹ್ಲಿಯನ್ನು ಕಾಡಿದ್ದಾರೆ. ರನ್ ಮಷೀನ್ ಎಂದೇ ಹೆಸರಾಗಿರುವ ಕೊಹ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಆದರೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಒಂದು ಮಾತು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
ವೈಟ್‌ವಾಷ್: ಕಿವೀಸ್ ಟೆಸ್ಟ್‌ನಲ್ಲೂ ಟೀಂ ಇಂಡಿಯಾಗೆ ಮುಖಭಂಗ
ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ, 'ಇವರು ಭಾರತಕ್ಕೆ ಬರುತ್ತಾರಲ್ಲ, ಆಗ ನಾನೇನು ಅನ್ನೋದನ್ನು ತೋರಿಸ್ತೇನೆ' ಎಂದು ಹೇಳಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಟೀಂ ಇಂಡಿಯಾ ದೀರ್ಘಕಾಲಿಕ ನ್ಯೂಜಿಲೆಂಡ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭ ಮಾಡಿತ್ತು. 5 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ತಂಡ ಕ್ಲೀನ್ ಸ್ವೀಪ್ ಮಾಡಿತ್ತು. ಇನ್ನು ಕಿವೀಸ್ ಪ್ರವಾಸದ ಕೊನೆಯ ಸರಣಿಯಾದ ಟೆಸ್ಟ್ ಸರಣಿಯನ್ನೂ ಕೇನ್ ವಿಲಿಯಮ್ಸನ್ ಪಡೆ ವೈಟ್‌ವಾಷ್ ಮಾಡುವ ಮೂಲಕ ನಂ.1 ಶ್ರೇಯಾಂಕಿತ ತಂಡಕ್ಕೆ ತಿರುಗೇಟು ನೀಡಿತ್ತು.