IND vs NZ: 2ನೇ ಟಿ20 ಪಂದ್ಯ ಯಾವಾಗ, ಎಷ್ಟು ಗಂಟೆಗೆ? ನೇರ ಪ್ರಸಾರ ಎಲ್ಲಿ? ಭಾರತ ಬರೆಯಲಿದೆಯೇ ಹೊಸ ಇತಿಹಾಸ?

Kannadaprabha News   | Kannada Prabha
Published : Oct 24, 2026, 08:26 AM IST
IND vs NZ 2nd T20I

ಸಾರಾಂಶ

ನ್ಯೂಜಿಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಐತಿಹಾಸಿಕ 200ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಗಾಯಗೊಂಡಿರುವ ಇಶಾನ್‌ ಕಿಶನ್ ಬದಲಿಗೆ ವೈಭವ್‌ ಸೂರ್ಯವಂಶಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಮೊದಲ ಪಂದ್ಯದ ಸೋಲಿನ ನಂತರ ಆತಿಥೇಯ ಕಿವೀಸ್ ಪಡೆ ಸುಧಾರಿತ ಪ್ರದರ್ಶನ ನೀಡಲು ಸಜ್ಜಾಗಿದೆ.

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ವಿರುದ್ಧ ಮೊದಲ ಟಿ20ಪಂದ್ಯದಲ್ಲಿ ದಾಖಲೆ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಭಾರತ, ಶನಿವಾರ 2ನೇ ಪಂದ್ಯದಲ್ಲೂ ಆತಿಥೇಯ ತಂಡದ ಸವಾಲು ಎದುರಿಸಲು ಸಜ್ಜಾಗಿದೆ.

ಶನಿವಾರ 300 ಅಂ.ರಾ. ಟಿ20 ಪಂದ್ಯವನ್ನಾಡಲಿರುವ ಭಾರತ, 200ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಸದ್ಯ 299 ಪಂದ್ಯಗಳಲ್ಲಿ 199 ಗೆಲುವು ಸಾಧಿಸಿದೆ. 300ನೇ ಪಂದ್ಯವಾಡಲಿರುವ 2ನೇ ತಂಡ ಎನಿಸಲಿರುವ ಭಾರತ, ಈ ಪಂದ್ಯ ಗೆದ್ದರೆ 200 ಗೆಲುವುಗಳ ಮೈಲುಗಲ್ಲು ತಲುಪಲಿರುವ ಮೊದಲ ತಂಡ ಎನ್ನುವ ದಾಖಲೆ ಬರೆಯಲಿದೆ.

ಕಿಶನ್‌ಗೆ ಗಾಯ, ವೈಭವ್ ಸೂರ್ಯವಂಶಿಗೆ ಚಾನ್ಸ್?

ಇಶಾನ್‌ ಕಿಶನ್ ಗಾಯಗೊಂಡಿದ್ದು, 2ನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಬೆಂಚ್‌ ಕಾಯುತ್ತಿರುವ ವೈಭವ್‌ ಸೂರ್ಯವಂಶಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ವೈಭವ್ ಕಣಕ್ಕಿಳಿದರೆ, ಆಗ ಸಂಜು ಸ್ಯಾಮ್ಸನ್‌ 3ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು. ಉಳಿದಂತೆ ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ.

ಇನ್ನು, ನ್ಯೂಜಿಲೆಂಡ್‌ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ತೋರಲು ಎದುರು ನೋಡುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌/ಸೋನಿ ಲಿವ್‌

ಇಂದಿನಿಂದ ಭಾರತ ‘ಎ’, ನ್ಯೂಜಿಲೆಂಡ್‌ ‘ಎ’ ಟೆಸ್ಟ್‌

ಲಿಂಕನ್‌: ಕೆ.ಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್‌, ಧೃವ್‌ ಜುರೆಲ್‌ ಸೇರಿ ಹಲವು ತಾರಾ ಆಟಗಾರರನ್ನು ಒಳಗೊಂಡ ಭಾರತ ‘ಎ’ ತಂಡ, ಶನಿವಾರದಿಂದ ನ್ಯೂಜಿಲೆಂಡ್‌ ‘ಎ’ ವಿರುದ್ಧ 4 ದಿನಗಳ ಅನಧಿಕೃತ ಟೆಸ್ಟ್‌ ಪಂದ್ಯವನ್ನಾಡಲಿದೆ. ಮುಂದಿನ ತಿಂಗಳು ನ್ಯೂಜಿಲೆಂಡ್‌ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಸೇರುವ 2 ಪಂದ್ಯಗಳ ಸರಣಿಗೂ ಮುನ್ನ, ‘ಎ’ ತಂಡದೊಂದಿಗೆ ಅಭ್ಯಾಸ ನಡೆಸಲು ಹಲವು ಆಟಗಾರರಿಗೆ ಅವಕಾಶ ಸಿಗಲಿದೆ. ಟೆಸ್ಟ್‌ ತಂಡದಲ್ಲಿರುವ ದೇವದತ್‌ ಪಡಿಕ್ಕಲ್‌, ಸಾಯಿ ಸುದರ್ಶನ್‌, ವಾಷಿಂಗ್ಟನ್‌ ಸುಂದರ್‌, ಆಕಾಶ್‌ ದೀಪ್‌, ಅನ್ಶುಲ್‌ ಕಾಂಬೋಜ್‌, ಮುಕೇಶ್‌ ಕುಮಾರ್‌ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ. ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ‘ಎ’ ಒಟ್ಟು 3 ಅನಧಿಕೃತ ಟೆಸ್ಟ್‌ಗಳನ್ನು ಆಡಲಿವೆ.

ಬಿಸಿಸಿಐ ಕಿರಿಯರ ಆಯ್ಕೆ ಸಮಿತಿಗೆ ಅವಾನಾ ಮುಖ್ಯಸ್ಥ

ನವದೆಹಲಿ: ಭಾರತ ಕಿರಿಯರ ತಂಡಗಳ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಪರ್ವಿಂದರ್‌ ಅವಾನಾರನ್ನು ಬಿಸಿಸಿಐ ಆಯ್ಕೆ ಮಾಡಿದೆ. ದೆಹಲಿಯ ಅವಾನಾ ಭಾರತ ಪರ 2 ಟಿ20 ಪಂದ್ಯಗಳನ್ನಾಡಿದ್ದರು. ಜೊತೆಗೆ 62 ಪ್ರ.ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆಗೆ ಕರ್ನಾಟಕದ ದೊಡ್ಡ ಗಣೇಶ್‌ ಹೆಸರು ಕೇಳಿಬಂದಿತ್ತು. ಆದರೆ ಅವರನ್ನು ಬಿಸಿಸಿಐ ಆಯ್ಕೆ ಮಾಡಿಲ್ಲ. ಅವಾನಾ ಜೊತೆ ಆಯ್ಕೆ ಸಮಿತಿಯಲ್ಲಿ ಕೃಷ್ಣ ದಾಸ್‌, ರಾಕೇಶ್‌ ಪಟೇಲ್‌ ಹಾಗೂ ಅರ್ಜುನ್‌ ಯಾದವ್‌ ಇರಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

KL ರಾಹುಲ್‌, ಮನೀಶ್‌, ನಾಯರ್, ಟ್ಯಾಲೆಂಟ್ ಮೂವರಲ್ಲೂ ಇತ್ತು; ಇಬ್ಬರ ಕೆರಿಯರ್ ಮುಗಿಸಿ, ಒಬ್ಬರನ್ನು ಬಾನೆತ್ತರಕ್ಕೆ ಏರಿಸಿದ್ದು ಯಾರು?
BCCI ಒಟ್ಟು ಸಂಪತ್ತಿನ ಮುಂದೆ ಮಂಡಿಯೂರಿದ ಇಂಗ್ಲೆಂಡ್, ಆಸೀಸ್, ಪಾಕ್ ಕ್ರಿಕೆಟ್ ಮಂಡಳಿಗಳು..! ಟಾಪ್ 10 ಪಟ್ಟಿಯಲ್ಲಿ ಕಿವೀಸ್‌ಗೆ ಕೊನೆ ಸ್ಥಾನ