INDvsNZ 2ನೇ ಟೆಸ್ಟ್: ಟೀಂ ಇಂಡಿಯಾದಲ್ಲಿ ಬದಲಾವಣೆ, ಯಾರು ಇನ್? ಯಾರು ಔಟ್?

By Suvarna News  |  First Published Feb 28, 2020, 5:14 PM IST

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋತ ಟೀಂ ಇಂಡಿಯಾಗೆ ಇದೀಗ ಟೆಸ್ಟ್ ಸರಣಿ ಸೋಲಿನ ಭೀತಿ ಆವರಿಸಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿರುವ ಭಾರತ, 2ನೇ ಪಂದ್ಯಕ್ಕೆ ಕಠಿಣ ಅಭ್ಯಾಸ ಮಾಡಿದೆ. ಇದೀಗ ತಂಡದಲ್ಲೂ ಬದಲಾವಣೆ ಮಾಡಲು ನಿರ್ಧರಿಸಿದೆ. ಯಾರಿಗೆ ಸ್ಥಾನ? ಯಾರಿಗೆ ಕೊಕ್? ಅನ್ನೋ ವಿವರ ಇಲ್ಲಿದೆ.


ಕ್ರೈಸ್ಟ್‌ಚರ್ಚ್(ಫೆ.28): ಭಾರತ ಹಾಗೂ ನ್ಯೂಜೆಲೆಂಡ್ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಸೈನ್ಯಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. ಮೊದಲ ಪಂದ್ಯದಲ್ಲಿ ಸೋತಿರುವ ಭಾರತ, ಇದೀಗ ಸರಣಿ ಉಳಿಸಿಕೊಳ್ಳಲು 2ನೇ ಪಂದ್ಯ ಗೆಲ್ಲಲೇಬೇಕಿದೆ. ಇತ್ತ ತಂಡದಲ್ಲಿನ ಇಂಜುರಿ ಸಮಸ್ಯೆ ಕೂಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಕಿವೀಸ್ ಎದುರಿನ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಶಾಂತ್ ಶರ್ಮಾ..!

Tap to resize

Latest Videos

undefined

ಮೊದಲ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ವೇಗಿ ಇಶಾಂತ್ ಶರ್ಮಾ, ಇದೀಗ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇಂಜುರಿಗೆ ತುತ್ತಾಗಿರುವ ಇಶಾಂತ್ ಶರ್ಮಾ ಅಲಭ್ಯತೆ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇಶಾಂತ್ ಅಲಭ್ಯತೆಯಿಂದ ತಂಡದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಇದನ್ನೂ ಓದಿ: ವೈಟ್‌ವಾಷ್‌ ತಪ್ಪಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ

ಸಂಭವನೀಯ ಭಾರತ ತಂಡ:
ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಬ್ ಪಂತ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.
 

click me!