ರಣಜಿ ಆಡುವಂತೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನೀಡಿದ್ದ ಸಲಹೆಗೂ ಯುವ ಕ್ರಿಕೆಟಿಗ ಇಶಾನ್ ಕಿಶನ್ ಬೆಲೆ ಕಲ್ಪಿಸಿಲ್ಲ ಎಂದು ಹೇಳಲಾಗುತ್ತಿದ್ದು, ರಣಜಿ ಬದಲು ಬರೋಡಾದಲ್ಲಿ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನವದೆಹಲಿ (ಫೆ.9): ಇಶಾನ್ ಕಿಶನ್.! ಟೀಂ ಇಂಡಿಯಾದ ಯಂಗ್ ವಿಕೆಟ್ ಕೀಪರ್, ಬ್ಯಾಟರ್ ಕೂಡ. ಆದ್ರೆ, ಸದ್ಯ ತಂಡದಿಂದ ಈ ರಾಂಚಿ ಬಾಯ್ ಹೊರಗುಳಿದಿದ್ದಾರೆ. 2023ರಲ್ಲಿ ಏಷ್ಯಾಕಪ್, ವಿಶ್ವಕಪ್ ಸೇರಿದಂತೆ ಟೀಂ ಇಂಡಿಯಾ ಆಡಿದ ಬಹುತೇಕ ಸರಣಿಗಳಲ್ಲಿ ಇಶಾನ್ ತಂಡದ ಭಾಗವಾಗಿದ್ರು. ಆದ್ರೆ ಇನ್ನು ಟೀಂ ಇಂಡಿಯಾಗೆ ಮರಳೋದು ಇನ್ನು ಕಷ್ಟದ ಮಾತು. ರಣಜಿ ಆಡುವಂತೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನೀಡಿದ್ದ ಸಲಹೆಗೂ ಯುವ ಕ್ರಿಕೆಟಿಗ ಇಶಾನ್ ಕಿಶನ್ ಬೆಲೆ ಕಲ್ಪಿಸಿಲ್ಲ ಎಂದು ಹೇಳಲಾಗುತ್ತಿದ್ದು, ರಣಜಿ ಬದಲು ಬರೋಡಾದಲ್ಲಿ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಶಾನ್ ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದಾರೆ. ಅವರು ಮಾನಸಿಕ ಆರೋಗ್ಯ ಕಾರಣಕ್ಕೆ ತಂಡದಿಂದ ದೂರ ಉಳಿದಿದ್ದು, ದುಬೈನಲ್ಲಿ ಪಾರ್ಟಿಯಲ್ಲಿ ಕಾಣಿಸಿಕೊಂಡ ಬಳಿಕ ವಿವಾದವಾಗಿತ್ತು. ಈ ನಡುವೆ ಇಶಾನ್ ರಾಷ್ಟ್ರೀಯ ತಂಡಕ್ಕೆ ಮರಳಬೇಕಿದ್ದರೆ ದೇಸಿ ಕ್ರಿಕೆಟ್ ಆಡಲಿ ಎಂದಿದ್ದರು. ಆದರೆ ಇಶನ್ ಈ ಬಾರಿ ರಣಜಿಯಲ್ಲಿ ಆಡುತ್ತಿಲ್ಲ. ಬದಲಾಗಿ ಪಾಂಡ್ಯ ಸಹೋದರರ ಜೊತೆ ಐಪಿಎಲ್‌ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 9 ರಂದು ಜಮ್ಶೆಡ್‌ಪುರದಲ್ಲಿ ಹರಿಯಾಣ ವಿರುದ್ಧದ ಜಾರ್ಖಂಡ್‌ನ ಮುಂಬರುವ ರಣಜಿ ಟ್ರೋಫಿ ಪಂದ್ಯದಲ್ಲಿ ಇಶಾನ್ ಭಾಗವಹಿಸುವುದಿಲ್ಲ. ಇಶಾನ್ ಅವರ ನಿರಂತರ ಅನುಪಸ್ಥಿತಿಯು ಅವರ BCCI ಕೇಂದ್ರ ಒಪ್ಪಂದದ ಮೇಲೆ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ಗ್ರೇಡ್ C ಯಲ್ಲಿ ಸ್ಥಾನ ಪಡೆದಿರುವ ಇಶಾನ್ ವಾರ್ಷಿಕ 1 ಕೋಟಿ ರೂ. ಪಡೆಯುತ್ತಾರೆ.
ಸ್ವಿಜರ್‌ಲೆಂಡ್‌ನ ಜನಪ್ರಿಯ ಪ್ರವಾಸಿ ತಾಣದಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಫೋಟೋ
ಇನ್ನು ಇಶಾನ್ ಕಿಶನ್ರನ್ನ ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೀಗ, ಇಶಾನ್ ಪಾಲಿಗೆ ಟೀಮ್ ಇಂಡಿಯಾದ ಬಾಗಿಲು ಬಂದ್ ಆದಂತೆಯೇ ಆಗಿದೆ. ಇದಕ್ಕೆ ಕಾರಣ ಕೂಡ ಅವರೇ, ದೊಡ್ಡವರ ಮಾತು ಕೇಳದೇ, ತಮ್ಮ ಕರಿಯರ್‌ನ ತಮ್ಮ ಕೈಯಾರೆ ಹಾಳು ಮಾಡಿಕೊಳ್ತಿದ್ದಾರೆ. ಮೆಂಟಲ್ ಸ್ಟ್ರೆಸ್ ಕಾರಣ ನೀಡಿ ರೆಸ್ಟ್ ಬೇಕೆಂದು 2023ರಲ್ಲಿ ತಂಡ ತೊರೆಯುವ ನಿರ್ಧಾರ ಮಾಡಿದ್ರು, ಆದರೆ ಪಾರ್ಟಿ, ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡು ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ್ರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬೇಕಾದ್ರೆ, ರಣಜಿಯಲ್ಲಿ ಆಡ್ಬೇಕು ಅಂತ ದ್ರಾವಿಡ್ ಇಶಾನ್‌ಗೆ ಸೂಚಿಸಿದ್ರು. ಆದ್ರೆ, ದ್ರಾವಿಡ್ ಸೂಚನೆಗೆ ಇಶಾನ್ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಈಗ ತನ್ನಷ್ಟಕ್ಕೆ ತಾನು ಐಪಿಎಲ್ ಗೆ ರೆಡಿಯಾಗುತ್ತಿದ್ದಾರೆ.
ಕ್ರಿಕೆಟಿಗನ ಜೊತೆ ಪ್ರೀತಿಯಲ್ಲಿದ್ದ ಲತಾ ಮಂಗೇಶ್ಕರ್ ಕೊನೆವರೆಗೂ ಮದುವೆಯಾಗಲಿಲ್ಲ ಏಕೆ?
ಇನ್ನು ಹಿರಿಯ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಇಶಾನ್ ಬಗೆಗಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ದೃಷ್ಟಿಕೋನವನ್ನು ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲ ಇಶಾನ್ ಕಿಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಫೋನ್ ಕೂಡ ಪಿಕ್ ಮಾಡುತ್ತಿಲ್ಲ ಎಂದಿದ್ದಾರೆ. ಕಿಶನ್ ಕಳೆದ ಎರಡು ವಾರಗಳಿಂದ ಬರೋಡಾದಲ್ಲಿದ್ದು, ಕಿರಣ್ ಮೋರ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು ಎಂಬ ವಿಚಾರವನ್ನು ಕೂಡ ಬಹಿರಂಗ ಪಡಿಸಿದ್ದಾರೆ. ಅಲ್ಲಿ ಅವರು ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಕೂಡ ತರಭೇತಿಯಲ್ಲಿದ್ದಾರೆ.