ಮಳೆಯಿಂದ ಪಂದ್ಯ ವಿಳಂಬ; ಟೀಂ ಇಂಡಿಯಾ ಗೆಲುವಿಗೆ ಬೇಕು 157 ರನ್!

By Suvarna NewsFirst Published Aug 8, 2021, 3:51 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ
  • ಬಿಟ್ಟು ಬಿಡದೆ ಕಾಡುತ್ತಿದೆ ಮಳೆ, ಅಂತಿಮ ದಿನದಾಟಕ್ಕೂ ಮಳೆ ಕಾಟ
  • ಗೆಲುವಿನ ತವಕದಲ್ಲಿದ್ದ ಭಾರತಕ್ಕೆ ನಿರಾಸೆ, ಇಂಗ್ಲೆಂಡ್‌ಗೆ ಸಮಾಧಾನ

ನಾಟಿಂಗ್‌ಹ್ಯಾಮ್(ಆ.08): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮಳೆ ಆರ್ಭಟವೇ ಹೆಚ್ಚಾಗುತ್ತಿದೆ. ಇದೀಗ ಅಂತಿಮ ದಿನದಾಟ ಆರಂಭ ವಿಳಂಬವಾಗಿದೆ. ಜಿದ್ದಾ ಜಿದ್ದಿನ ಹೋರಾಟದಲ್ಲಿ ಟೀಂ ಇಂಡಿಯಾ ಗೆಲುವಿನ ತವಕದಲ್ಲಿದ್ದರೆ, ಇತ್ತ ಇಂಗ್ಲೆಂಡ್ ಮಳೆ ಸುರಿಯಲಿ ಎಂದು ಪ್ರಾರ್ಥಿಸುತ್ತಿದೆ. ಅಂತಿಮ ದಿನದಾಟದಲ್ಲಿ ಟೀಂ ಇಂಡಿಯಾ ಗೆಲುವಿಗೆ 157 ರನ್ ಅವಶ್ಯಕತೆ ಇದೆ.

Ind vs Eng ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾಗೆ 209 ರನ್‌ಗಳ ಗುರಿ

ನಾಲ್ಕನೇ ದಿನದಾಟದ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಸಿಡಿಸಿದ ಟೀಂ ಇಂಡಿಯಾ, ಅಂತಿಮ ದಿನದಲ್ಲಿ 157 ರನ್ ಸಿಡಿಸಿ ಗೆಲುವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಆದರೆ ಮಳೆ ದಿನದಾಟದ ಆರಂಭಕ್ಕೆ ಅಡ್ಡಿ ಮಾಡಿದೆ. ಹೀಗಾಗಿ ಅಂತಿಮ ದಿನದಾಟ ಇನ್ನೂ ಆರಂಭಗೊಂಡಿಲ್ಲ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 303 ರನ್ ಸಿಡಿಸಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಟೀಂ ಇಂಡಿಯಾಗೆ 278 ರನ್ ಟಾರ್ಗೆಟ್ ಸಿಕ್ಕಿದೆ. ನಾಲ್ಕನೇ ದಿನದಾಟ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ 26 ರನ್ ಸಿಡಿಸಿ ಔಟಾದರು. 

ರೋಹಿತ್ ಶರ್ಮಾ ಅಜೇಯ 12 ರನ್ ಹಾಗೂ ಚೇತೇಶ್ವರ್ ಪೂಜಾರಾ ಅಜೇಯ 12 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದೀಗ ಅಂತಿಮ ದಿನದಾಟದಲ್ಲಿ ಮಳೆ ಅನುಮಾಡಿಕೊಟ್ಟರೆ ಟೀಂ ಇಂಡಿಯಾ ಗೆಲವಿಗೆ ಅನುಕೂಲವಾಗಲಿದೆ.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್:
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ದಾಳಿಗೆ ತತ್ತರಿಸಿತ್ತು. ಜಸ್ಪ್ರೀತ್ ಬುಮ್ರಾ 4 ವಿಕೆಟ್ ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಇಂಗ್ಲೆಂಡ್ 183 ರನ್‌ಗೆ ಆಲೌಟ್ ಆಗಿತ್ತು

ಭಾರತ ಮೊದಲ ಇನ್ನಿಂಗ್ಸ್:
ಕೆಲ್ ರಾಹುಲ್ ಸಿಡಿಸಿದ 84 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ 56 ರನ್‌ಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 278 ರನ್ ಸಿಡಿಸಿತ್ತು. ಈ ಮೂಲಕ 95 ರನ್ ಮುನ್ನಡೆ ಪಡೆದುಕೊಂಡಿತ್ತು. 

click me!