ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಪೂಜಾರ ಕ್ಲಾಸ್ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 17ನೇ ದ್ವಿಶತಕ ದಾಖಲಿಸಿದ್ದಾರೆ. ನಾಲ್ಕನೇ ಇನ್ನಿಂಗ್ಸ್‌ಗಳಲ್ಲಿ ಕ್ರೀಸ್ಗಿಳಿದ ಪೂಜಿ, 356 ಎಸೆತಗಳಲ್ಲಿ 30 ಬೌಂಡರಿ ಸಹಿತ ಅಜೇಯ 243 ರನ್ಗಳಿಸಿದ್ದಾರೆ. ಪೂಜಾರ ಅವರ ಅದ್ಭುತ ಆಟದಿಂದಾಗಿ, ಸೌರಾಷ್ಟ್ರ 578 ರನ್‌ಗಳ ಬಿಗ್ ಟೋಟಲ್ ಕಲೆಹಾಕಲು ಸಾಧ್ಯವಾಯ್ತು.
ಬೆಂಗಳೂರು(ಜ.08): ಈತ ಟೆಸ್ಟ್ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ಆದ್ರೆ, ಇಂತಹ ಆಟಗಾರನನ್ನೇ ಟೀಂ ಇಂಡಿಯಾದಿಂದ ಡ್ರಾಪ್ ಮಾಡಲಾಗಿದೆ. ಹಾಗಂತ, ಈ ಆಟಗಾರ ಸುಮ್ಮನೆ ಕುಳಿತಿಲ್ಲ. ದೇಶಿಯ ಕ್ರಿಕೆಟ್‌ನಲ್ಲಿ ಅಬ್ಬರಿಸ್ತಿದ್ದಾನೆ. ಆ ಮೂಲಕ ಸೆಲೆಕ್ಟರ್ಸ್ ಮತ್ತು BCCIಗೆ ತನ್ನ ಆಟದ ಮೂಲಕವೇ ಉತ್ತರ ನೀಡಿದ್ದಾನೆ. ಯಾರು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ...
ರಣಜಿಯಲ್ಲಿ ಚೇತೇಶ್ವರ್ ಪೂಜಾರ ಅಬ್ಬರ..!
undefined
ಯೆಸ್, ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟರ್ಸ್ ಮಕಾಡೆ ಮಲಗಿದ್ರು. ಒಂದಿಬ್ಬರನ್ನ ಬಿಟ್ರೆ ಉಳಿದ ಬ್ಯಾಟರ್ಗಳ್ಯಾರು ಮಿಂಚಲಿಲ್ಲ. ಆಗ ಮೊದಲು ನೆನಪಾಗಿದ್ದೇ, ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ..! ಪೂಜಾರ ಇದ್ದಿದ್ರೆ, ಮೊದಲ ಟೆಸ್ಟ್ನಲ್ಲಿ ರೋಹಿತ್ ಪಡೆ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ, ಅನ್ನೋ ಮಾತುಗಳು ಕೇಳಿಬಂದ್ವು. ಮಾಜಿ ಆಟಗಾರರು ಪೂಜಾರ ಪರ ಬ್ಯಾಟ್ ಬೀಸಿದ್ರು.
The moment when Cheteshwar Pujara completed his 200...!!!
- What a way to kick off 2024 Ranji Trophy season.pic.twitter.com/cS8z9l983C
ಮತ್ತೊಂದೆಡೆ ತಮ್ಮನ್ನ ತಂಡದಿಂದ ಕೈಬಿಟ್ಟಿದ್ದಕ್ಕೆ ಪೂಜಾರ ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ. ರಣಜಿ ಟೂರ್ನಿಯಲ್ಲಿ ಅಬ್ಬರಿಸಲು ರೆಡಿಯಾಗ್ತಿದ್ರು. ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ರು. ಅದರಂತೆ ಪೂಜಾರ ಪ್ರಸಕ್ತ ರಣಜಿಯಲ್ಲಿ ರನ್‌ಬೇಟೆ ಶುರು ಮಾಡಿದ್ದಾರೆ. ಸೌರಾಷ್ಟ್ರ ತಂಡದ ಪರ ಮೊದಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಸೈನ್ಯದಲ್ಲಿ ಎಲ್ಲವೂ ಸರಿ ಇಲ್ವಾ..? ರೋಹಿತ್ ಪರ ಬ್ಯಾಟ್ ಬೀಸಿದ್ರಾ ಪೊಲಾರ್ಡ್..?
ಯೆಸ್, ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಪೂಜಾರ ಕ್ಲಾಸ್ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 17ನೇ ದ್ವಿಶತಕ ದಾಖಲಿಸಿದ್ದಾರೆ. ನಾಲ್ಕನೇ ಇನ್ನಿಂಗ್ಸ್‌ಗಳಲ್ಲಿ ಕ್ರೀಸ್ಗಿಳಿದ ಪೂಜಿ, 356 ಎಸೆತಗಳಲ್ಲಿ 30 ಬೌಂಡರಿ ಸಹಿತ ಅಜೇಯ 243 ರನ್ಗಳಿಸಿದ್ದಾರೆ. ಪೂಜಾರ ಅವರ ಅದ್ಭುತ ಆಟದಿಂದಾಗಿ, ಸೌರಾಷ್ಟ್ರ 578 ರನ್‌ಗಳ ಬಿಗ್ ಟೋಟಲ್ ಕಲೆಹಾಕಲು ಸಾಧ್ಯವಾಯ್ತು.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿಗುತ್ತಾ ಚಾನ್ಸ್..?
ತವರಿನಲ್ಲಿ ನಡೆದ ಅಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮತ್ತು WTC ಫೈನಲ್‌ನಲ್ಲಿ ಪೂಜಾರ ವೈಫಲ್ಯ ಅನುಭಸಿದ್ರು. ಇದರಿಂದಾಗಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪೂಜರಾರನ್ನ ಡ್ರಾಪ್ ಮಾಡಲಾಯ್ತು. ಆದ್ರೀಗ, ರಣಜಿಯಲ್ಲಿ ಅಬ್ಬರಿಸೋ ಮೂಲಕ ಪೂಜಾರ, ಸೆಲೆಕ್ಟರ್ಸ್ ಮತ್ತು BCCIಗೆ ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ.
Ranji Trophy: ಪಂಜಾಬ್ ಎದುರು ಕರ್ನಾಟಕದ ಗೆಲುವಿಗೆ ಬೇಕು 7 ವಿಕೆಟ್!
ಸದ್ಯ ಪೂಜಾರ ಕಣಕ್ಕಿಳಿಯುತ್ತಿದ್ದ 3ನೇ ಕ್ರಮಾಂಕದಲ್ಲಿ ಶುಭ್‌ಮನ್ ಗಿಲ್ ಆಡ್ತಿದ್ದಾರೆ. ಆದ್ರೆ, ಗಿಲ್ ಫ್ಲಾಪ್ ಶೋ ನೀಡ್ತಿದ್ದೂ. ಪೂಜಾರ ಸ್ಥಾನ ತುಂಬುವಲ್ಲಿ ಫೇಲ್ ಆಗಿದ್ದಾರೆ. ಇದ್ರಿಂದಾಗಿ ಜನವರಿ 25ರಿಂದ ಆರಂಭವಾಗಲಿರೋ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೂಜಾರಾಗೆ ಚಾನ್ಸ್ ನೀಡುವ ಸಾಧ್ಯತೆಯಿದೆ.
ಕೌಂಟಿ ಮೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಪೂಜಾರ..!
2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೂಜಾರ ಕಳಪೆ ಪ್ರದರ್ಶನ ನೀಡಿದ್ರು. ಆ ಮೂಲಕ ಟೀಂ ಇಂಡಿಯಾದಿಂದ ಔಟ್ ಆಗಿದ್ರು. ಆದ್ರೆ, ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಲೇಬೇಕು ಅಂತ ಪಣ ತೊಟ್ಟಿದ್ದ ಅವ್ರು, ಕೌಂಟಿ ಆಡೋಕೆ ನಿರ್ಧರಿಸಿದ್ರು. ಮೊದಲ ಸೀಸನ್ನಲ್ಲೇ ಸಸೆಕ್ಸ್ ತಂಡದ ಧೂಳೆಬ್ಬಿಸಿದ್ರು. 13 ಇನ್ನಿಂಗ್ಸ್ಗಳಿಂದ 109.40ರ ಸರಾಸರಿಯಲ್ಲಿ 1094 ರನ್ ಸಿಡಿಸಿದ್ರು. ಕೌಂಟಿಯಲ್ಲಿ ನೀಡಿದ ಶಹನ್ದಾರ್ ಫರ್ಫಾಮೆನ್ಸ್ನಿಂದಾಗಿ, ಪೂಜಾರಗೆ ಮತ್ತೆ ತಂಡದಲ್ಲಿ ಸ್ಥಾನ ಸಿಕ್ತು. ಅದರಂತೆ ಈ ಬಾರಿ ರಣಜಿ ಕ್ರಿಕೆಟ್ ಈ ಟೆಸ್ಟ್ ಸ್ಪೆಷಲಿಸ್ಟ್‌ಗೆ ಅದೃಷ್ಟ ತರುತ್ತಾ.? ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್