ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಟಿಕೆಟ್ ಇದ್ದರೂ ಕೆಲ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಬಿಸಿಸಿಐ ತೆಗೆದುಕೊಂಡ ದಿಢೀರ್ ನಿರ್ಧಾರ.
ಮುಂಬೈ(ಜ.14): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. 300 ರನ್ ಗಡಿ ದಾಟುವ ಸೂಚನೆ ನೀಡಿದ ಭಾರತ, ದಿಢೀರ್ ಕುಸಿತ ತಂಡ 250 ಗಡಿ ದಾಟಿಸಿತು. ಈ ಪಂದ್ಯಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ ಮಹತ್ವದ ನಿರ್ಧಾರ ತೆಗುದುಕೊಂಡಿದೆ. ಕಪ್ಪು ಟಿಶರ್ಟ್, ಕಪ್ಪು ಸೆಲ್ವಾರ್ ಸೇರಿದಂತೆ ಕಪ್ಪು ಬಟ್ಟೆ ಧರಿಸಿದವರಿಗೆ ಪ್ರವೇಶ ನಿಷೇಧಿಸಿದೆ.
ಇದನ್ನೂ ಓದಿ: ಆಸೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ
undefined
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಬ್ಲಾಕ್ ಡ್ರೆಸ್ ನಿಷೇಧಿಸಲಾಗಿದೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಮಹತ್ವದ ಸೂಚನೆ ನೀಡಿತ್ತು. ಹೀಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಕಪ್ಪು ಡ್ರೆಸ್ ನಿಷೇಧಿಸಿದೆ. ಈ ನಿರ್ಧಾರ ಗೊತ್ತಿಲ್ಲದೆ ಕ್ರೀಡಾಂಗಣಕ್ಕೆ ಆಗಮಿಸಿದ ಹಲವು ಅಭಿಮಾನಿಗಳು ಒಂದು ಕ್ಷಣ ಕಂಗಾಲಾಗಿದ್ದರು. ಬಳಿಕ ಟೀಂ ಇಂಡಿಯಾ ಜರ್ಸಿ ಖರೀದಿಸಿ ಕ್ರೀಡಾಂಗಣ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: 4 ದಿನಗಳ ಟೆಸ್ಟ್‌ಗೆ ವಿರೇಂದ್ರ ಸೆಹ್ವಾಗ್ ವಿರೋಧ!.
ಕೆಲವರು ಕಪ್ಪು ಟಿಶರ್ಟ್ ಮೇಲೆ ಜರ್ಸಿ ಹಾಕಿ ಪ್ರವೇಶಿಸಲು ಅನುಮತಿ ಕೇಳಿದ್ದಾರೆ. ಆದರೆ ನಿರಾಕರಿಸಲಾಗಿದೆ. ಹೀಗಾಗಿ ಧರಿಸಿದ್ದ ಕಪ್ಪು ಟಿಶರ್ಟ್ ಅಲ್ಲೆ ಬಿಟ್ಟು ಜರ್ಸಿ ಧರಿಸಿ ಕ್ರೀಡಾಂಗಣ ಪ್ರವೇಶಿಸಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುವ ಹೋರಾಟಗಾರರು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲೂ ಪ್ರತಿಭಟನೆ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿರಲಿಲ್ಲ. ಹೀಗಾಗಿ ಬಿಸಿಸಿಐ ಮುನ್ನಚ್ಚೆರಿಕೆ ಕ್ರಮವಾಗಿ ಈ ನಿರ್ಧಾರ ತೆಗುದುಕೊಂಡಿತು.