ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯದ ಹಿನ್ನಲೆಯಲ್ಲಿ ಕ್ರೀಡಾಂಗಣದ ಸುತ್ತ ಮುತ್ತ ಪಾರ್ಕಿಂಗ್ ನಿಷೇಧಿಸಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ ಹಾಗೂ ಎಲ್ಲಿ ಪಾರ್ಕಿಂಗ್ ಅವಕಾಶ ಮಾಡಿಕೊಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.
ಬೆಂಗಳೂರು(ಜ.18): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಸರಣಿ 1-1 ಅಂತರದಿಂದ ಸಮಬಲಗೊಂಡಿುವ ಕಾರಣ ಉದ್ಯಾನ ನಗರಿಯಲ್ಲಿ ಗೆದ್ದ ತಂಡ ಸರಣಿ ವಶಪಡಿಸಿಕೊಳ್ಳಲಿದೆ. ಮಹತ್ವದ ಪಂದ್ಯಕ್ಕೆ ಗರಿಷ್ಠ ಭದ್ರತೆ ಒದಗಿಸಲಾಗಿದೆ. ಇನ್ನು ಟ್ರಾಫಿಕ್ ಸಮಸ್ಯೆ ತಿಳಿಗೊಳಿಸಲು ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತು ಮುತ್ತ ಹಲವೆಡೆ ಪಾರ್ಕಿಂಗ್ ನಿಷೇಧಿಸಲಾಗಿದೆ.
ಇದನ್ನೂ ಓದಿ: ಬ್ಯಾನರ್ to ಹೆಡ್‌ಫೋನ್: INDvAUS ಬೆಂಗಳೂರು ಪಂದ್ಯಕ್ಕೆ ಈ ವಸ್ತುಗಳು ಬ್ಯಾನ್!.
undefined
ಜನವರಿ 19 ಭಾನುವಾರ 3ನೇ ಏಕದಿನ ಪಂದ್ಯ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಹೀಗಾಗಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30ರ ವರೆಗೆ ಕ್ರೀಡಾಂಗಣ ಸುತ್ತ ಮುತ್ತ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ಪಂದ್ಯ ವೀಕ್ಷಿಸಲು ಆಗಮಿಸುವವರು ತಮ್ಮ ವಾಹನಗಳ ನಿಷೇಧಿತ ಸ್ಥಳದಲ್ಲಿ ಪಾರ್ಕ್ ಮಾಡಿ ಸಮಸ್ಯೆಗೆ ಸಿಲುಕ ಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಮಣಿಸಿ ತಿರುಗೇಟು ನೀಡಿದ ಭಾರತ; ಸರಣಿ ಸಮಬಲ!
ನಿಷೇಧಿತ ಪಾರ್ಕಿಂಗ್ ಸ್ಥಳ
ಕ್ವೀನ್ಸ್ ರಸ್ತೆ, ಎಮ್ ಜಿ ರೋಡ್, ಅನಿಲ್ ಕುಂಬ್ಳೆ ವೃತ್ತ, ಲಿಂಕ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ, ಸೆಂಟ್ರಲ್ ಸ್ಟ್ರೀಟ್ ಸೇರಿದಂತೆ ಹಲವಡೆ ಪಾರ್ಕಿಂಗ್ ನಿಷೇಧ.
ಎಲ್ಲೆಲ್ಲಿ ವಾಹನ ಪಾರ್ಕ್ ಮಾಡಬಹುದು:
ಶಿವಾಜಿನಗರ ಬಸ್ ನಿಲ್ದಾಣ. ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ. ಮಲ್ಯ ಆಸ್ಪತ್ರೆ ರಸ್ತೆ, ಸೆಂಟ್ ಜೋಸೆಫ್ ಬಾಲಕ ಶಾಲೆ ಮ್ಯೂಸಿಯಂ ರಸ್ತೆಯಲ್ಲಿ ಪಾರ್ಕಿಂಗ್ ಅವಕಾಶ ಮಾಡಿಕೊಡಲಾಗಿದೆ.
ಮಧ್ಯಾಹ್ನ ಹನ್ನೊಂದು ಗಂಟೆ ಯಿಂದ ರಾತ್ರಿ ತನಕ ನಿರ್ದಿಷ್ಟ ರಸ್ತಗಳಲ್ಲಿ ಆಟೋ ಸಂಚಾರ ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ, ಬಿಆರ್ ವಿ ಜಂಕ್ಷನ್ , ಎಮ್ ಜಿ ರೋಡ್ ನಲ್ಲಿ ಆಟೋ ಸಂಚಾರ ನಿಷೇಧಿಸಲಾಗಿದೆ.
ಹೆಚ್ಚುವರಿ BMTC ಬಸ್ ಸೇವೆ
ಪಂದ್ಯ ವೀಕ್ಷಿಸಲು ಆಗಮಿಸುವ ಹಾಗೂ ಪಂದ್ಯದ ಬಳಿಕ ಅಭಿಮಾನಿಗಳಿಗಾಗಿ ಹೆಚ್ಚುವರಿ ಬಸ್ ಸೇವೆಯನ್ನು ಬಿಎಂಟಿಸಿ ನಿಯೋಜಿಸಿದೆ. ಬೆಳಗ್ಗೆ 11 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುವವರಿಗಾಗಿ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗಿದೆ. ಇನ್ನು ರಾತ್ರಿ 11.30ರ ವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬಸ್ ಸೇವೆ ಲಭ್ಯವಿದೆ.
ಭಿಗಿ ಭದ್ರತೆ
ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಭಾರತ ಆಸ್ಟ್ರೇಲಿಯಾ ಏಕದಿನ ಪಂದ್ಯ ಹಿನ್ನಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಮುತ್ತಾ ಭದ್ರತೆ ಪರೀಶಿಲನೆ ನಡೆಸಲಾಗಿದೆ. ಸ್ಟೇಡಿಯಂ ಸುತ್ತಾಮುತ್ತಾ ಬಾಂಬ್ ಸ್ಕ್ಯಾಡ್ ಹಾಗೂ ಶಾನ್ವದಳದಿಂದ ಪರಿಶೀಲನೆ ನಡೆಸಲಾಗಿದೆ.. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.