
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಟಿ-20 ಪಂದ್ಯ ನಡೆಯಿತು. ಪಂದ್ಯದ ಆರಂಭಕ್ಕೂ ಮುನ್ನ ಹೆಚ್ಚು ಚರ್ಚೆ ಆಗಿರುವ ವಿಚಾರ ಏನಾಗಿತ್ತು ಅಂದರೆ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್‍ಗಳ ಬಗ್ಗೆ. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ.
ಈ ಮೂವರಲ್ಲಿ ಯಾರನ್ನು ಆಡಿಸಬೇಕು? ಪ್ಲೇಯಿಂಗ್ ಇಲೆವೆನ್‌ನಿಂದ ಯಾರಿಗೆ ಕೊಕ್ ನೀಡಬೇಕು ಎಂಬ ಚರ್ಚೆ ಜೋರಾಗಿತ್ತು. ಅಂತಿಮವಾಗಿ ಯುವ ತಾರೆ ವೈಭವ್ ಸೂರ್ಯವಂಶಿಯನ್ನು ಬೆಂಚ್‌ನಲ್ಲಿ ಕೂರಿಸಿ ಸಂಜು ಸ್ಯಾಮ್ಸನ್‌ಗೆ ತಂಡದ ಮ್ಯಾನೇಜ್ಮೆಮಟ್ ಅವಕಾಶ ಕಲ್ಪಿಸಿತ್ತು. ಆದರೆ ಸಂಜು ಸ್ಯಾಮ್ಸನ್ ಆ ನಂಬಿಕೆಯನ್ನು ಹುಸಿ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡವು, ನಿಗಧಿತ 20 ಓವರ್‍ನಲ್ಲಿ 8 ವಿಕೆಟ್ ಕಳೆದುಕೊಂಡು 156 ರನ್‌ಗಳಿಸಿತು. 157 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಬಂದ ಟೀಂ ಇಂಡಿಯಾ, 2.1 ಓವರ್‍ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅದುವೇ ಸಂಜು ಸ್ಯಾಮ್ಸನ್ ವಿಕೆಟ್ ರೂಪದಲ್ಲಿ.
ಅವಕಾಶ ಸಿಕ್ಕಾಗಲೆಲ್ಲ ಸಂಜು ಸ್ಯಾಮ್ಸನ್ ಸರಿಯಾಗಿ ಬಳಸಿಕೊಳ್ಳಲ್ಲ ಎಂಬ ಮಾತಿದೆ. ಅದನ್ನು ಮತ್ತೆ ಟ್ಯಾಲೆಂಟೆಡ್ ಬ್ಯಾಟರ್ ಸಾಬೀತುಪಡಿಸಿದ್ದಾರೆ. ಇಂದು ಒಟ್ಟು 8 ಬಾಲ್ ಎದುರಿಸಿದ ಅವರು, 2 ಬೌಂಡರಿ ಚಚ್ಚಿದರು. ಕೊನೆಗೆ 10 ರನ್‌ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿ ನಿರಾಸೆ ಮೂಡಿಸಿದರು. ಕೇವಲ 10 ರನ್‌ಗಳಿಗೆ ಸುಸ್ತಾದ ಸ್ಟಾರ್ ಆಟಗಾರನ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮಗೆ ಇನ್ನೆಷ್ಟು ಅವಕಾಶಗಳನ್ನ ನೀಡಬೇಕು? ಚಿನ್ನದಂಥ ಚಾನ್ಸ್ ಸಿಕ್ಕಾಗಲೆಲ್ಲ ಕೈಚೆಲ್ಲಿ ಪೆವಿಲಿಯನ್‌ಗೆ ಹೋಗ್ತೀರಿ. ನಿಮ್ಮ ಬದಲು ಟ್ಯಾಲೆಂಟೆಡ್ ಬ್ಯಾಟರ್ ಸೂರ್ಯವಂಶಿಗೆ ಚಾನ್ಸ್ ನೀಡೋದೇ ಬೆಸ್ಟ್ ಎಂದು ಫ್ಯಾನ್ಸ್ ಹೇಳ್ತಿದ್ದಾರೆ. ಅಂದಹಾಗೆ ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ದ ಒಟ್ಟು ಮೂರು ಟಿ-20 ಪಂದ್ಯಗಳನ್ನ ಆಡಲಿದೆ. ಎರಡನೇ ಪಂದ್ಯವು ಸೆಪ್ಟೆಂಬರ್ 15 ರಂದು ನಡೆದರೆ, ಸೆಪ್ಟೆಂಬರ್ 17 ರಂದು ಫೈನಲ್ ಮ್ಯಾಚ್ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಫೇಲ್ ಆಗಿರೋ ಸಂಜು ಸ್ಯಾಮ್ಸನ್‌ಗೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಅವಕಾಶ ಸಿಗೋದು ಬಹುತೇಕ ಡೌಟ್ ಎನ್ನಲಾಗುತ್ತಿದೆ. ಸಂಜು ಬದಲಿಗೆ ಸೂರ್ಯವಂಶಿಗೆ ಚಾನ್ಸ್ ನೀಡಿ ಎಂಬ ಒತ್ತಾಯ ಇದೆ. ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭದ ವಿಚಾರವಲ್ಲ. ಒಮ್ಮೆ ಅವಕಾಶ ಕಳೆದುಕೊಂಡರೆ ಮತ್ತೆ ಸುಲಭಕ್ಕೆ ಸಿಗಲ್ಲ. ಹೀಗಾಗಿ ಉಳಿದಿರುವ ಎರಡು ಪಂದ್ಯಗಳಲ್ಲಿ ಸಂಜು ಆಡ್ತಾರಾ? ಇಲ್ಲವಾ ಎಂಬ ಪ್ರಶ್ನೆ ಕೂಡ ಶುರುವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.