ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಟೆಸ್ಟ್ಗಳನ್ನ ಗೆದ್ದಿದೆ. ಆದ್ರೆ ಸರಣಿ ಮಾತ್ರ ಗೆಲ್ಲೋಕೆ ಆಗಿಲ್ಲ. ಈ ಸಲ ಟೀಂ ಇಂಡಿಯಾ ಬಲಿಷ್ಠವಾಗಿರೋದ್ರಿಂದ ಟೆಸ್ಟ್ ಸರಣಿ ಗೆಲ್ಲುತ್ತೆ ಅನ್ನೋ ವಿಶ್ವಾಸವಿತ್ತು. ಆದ್ರೆ ಟೆಸ್ಟ್ ಸರಣಿಗೆ ಅಂಪೈರ್ಸ್ ಪಟ್ಟಿ ನೋಡಿ ಫ್ಯಾನ್ಸ್ಗೆ ನಿರಾಸೆಯಾಗಿದೆ.
ಬೆಂಗಳೂರು(ಡಿ.06): ಮುಂಬರುವ ಡಿಸೆಂಬರ್ 10ರಿಂದ ಅಂದರೆ ಭಾನುವಾರದಿಂದ ಭಾರತ-ಆಫ್ರಿಕಾ ಸರಣಿ ಆರಂಭವಾಗ್ತಿದೆ. ಟೆಸ್ಟ್ ಸರಣಿ ಆರಂಭವಾಗೋದು ಈ ತಿಂಗಳ ಕೊನೆಯಲ್ಲಿ. ಆಗ್ಲೇ, ಟಿಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲಲ್ಲ ಅಂತ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಹೇಳೋಕೆ ಶುರು ಮಾಡಿದ್ದಾರೆ. ಯಾಕೆ ಗೊತ್ತಾ..? ಅದಕ್ಕೂ ಬಲವಾದ ಕಾರಣವಿದೆ.
ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತೀಯರಿಗೆ ಬ್ಯಾಡ್ ನ್ಯೂಸ್
undefined
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋಲೋ ಮೂಲಕ ಭಾರಿ ನಿರಾಸೆ ಅನುಭವಿಸಿದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 4-1ರಿಂದ ಟಿ20 ಸರಣಿ ಗೆದ್ದು ಸಮಾಧಾನ ಪಟ್ಟುಕೊಂಡಿದೆ. ಈಗ ಸೌತ್ ಆಫ್ರಿಕಾ ಪ್ರವಾಸಕೈಗೊಳ್ಳಲು ಭಾರತೀಯರು ರೆಡಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಗಳನ್ನಾಡಲಿದೆ. ಈಗಾಗಲೇ ಎಲ್ಲಾ ಮೂರು ಫಾರ್ಮ್ಯಾಟ್‌ಗಳಿಗೆ ಟೀಂ ಇಂಡಿಯಾವನ್ನು ಆನೌನ್ಸ್ ಮಾಡಿದೆ ಬಿಸಿಸಿಐ. ಭಾನುವಾರದಿಂದ ಆಫ್ರಿಕಾ ಸಿರೀಸ್ ಸ್ಟಾರ್ಟ್ ಆಗಲಿದೆ.
ಎಲ್ಲಿಯವರೆಗೂ ನಡಿಯೋಕೆ ಆಗುತ್ತೋ ಅಲ್ಲಿಯವರೆಗೂ ಐಪಿಎಲ್ ಆಡ್ತೇನೆ: RCB ಫ್ಯಾನ್ಸ್‌ಗೆ ಜೋಶ್ ತುಂಬಿದ ಮ್ಯಾಕ್ಸ್‌ವೆಲ್
ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಟೆಸ್ಟ್ಗಳನ್ನ ಗೆದ್ದಿದೆ. ಆದ್ರೆ ಸರಣಿ ಮಾತ್ರ ಗೆಲ್ಲೋಕೆ ಆಗಿಲ್ಲ. ಈ ಸಲ ಟೀಂ ಇಂಡಿಯಾ ಬಲಿಷ್ಠವಾಗಿರೋದ್ರಿಂದ ಟೆಸ್ಟ್ ಸರಣಿ ಗೆಲ್ಲುತ್ತೆ ಅನ್ನೋ ವಿಶ್ವಾಸವಿತ್ತು. ಆದ್ರೆ ಟೆಸ್ಟ್ ಸರಣಿಗೆ ಅಂಪೈರ್ಸ್ ಪಟ್ಟಿ ನೋಡಿ ಫ್ಯಾನ್ಸ್ಗೆ ನಿರಾಸೆಯಾಗಿದೆ. ಯಾಕಂದ್ರೆ ಎರಡು ಟೆಸ್ಟ್ನಲ್ಲಿ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಲಿದ್ದಾರೆ. ಮೊದಲ ಟೆಸ್ಟ್‌ಗೆ ಪೌಲ್ ರೀಫೆಲ್ ಮತ್ತು ರಿಚರ್ಡ್ ಅಂಪೈರಿಂಗ್ ಮಾಡಲಿದ್ದು, 2ನೇ ಟೆಸ್ಟ್ಗೆ ರಿಚರ್ಡ್ ಹಾಗೂ ಎಹ್ಸಾನ್ ರಾಜಾ ಅಂಪೈರಿಂಗ್ ಮಾಡಲಿದ್ದಾರೆ.
ರಿಚರ್ಡ್‌ಗೂ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲೋಕು ಏನ್ ಸಂಬಂಧ ಅಂತ ಕೇಳೋಕೆ ಹೋಗಬೇಡಿ. ಯಾಕಂದ್ರೆ ಕಾಕತಾಳೀಯವಾಗಿ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಿದ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಟೀಂ ಇಂಡಿಯಾ ಸೋತಿದೆ. 2014ರಿಂದ 2023ರವರೆಗೆ ಒಂದೇ ಒಂದು ಬಿಗ್ ಟೂರ್ನಿ ಗೆದ್ದಿಲ್ಲ ಭಾರತ.
2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಆಟಗಾರರಿಗೆ ಎಷ್ಟು ವಯಸ್ಸಾಗಿರಲಿದೆ?
10 ವರ್ಷದಿಂದ ಮಹತ್ವದ ಟೂರ್ನಿ ಗೆದ್ದಿಲ್ಲ ಭಾರತ
2014ರ ಟಿ20 ವಿಶ್ವಕಪ್ ಫೈನಲ್.. 2015ರ ಒನ್ಡೇ ವರ್ಲ್ಡ್‌ಕಪ್ ಸೆಮಿಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2023ರ ಟೆಸ್ಟ್ ವಿಶ್ವಕಪ್ ಫೈನಲ್, 2023ರ ಒನ್ಡೇ ವರ್ಲ್ಡ್‌ಕಪ್ ಫೈನಲ್ ಹೀಗೆ ಭಾರತ ಆಡಿದ ಮಹತ್ವದ ಟೂರ್ನಿಗಳಲ್ಲಿ ರಿಚರ್ಡ್ ಕೆಟಲ್‌ಬರೋ ಅಂಪೈರ್ ಆಗಿದ್ದರು. ಈ ಯಾವುದೇ ಟೂರ್ನಿಯನ್ನು ಭಾರತೀಯರು ಗೆದ್ದಿಲ್ಲ.
ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲನ್ನು ಮರೆಯಲು ಯತ್ನಿಸುತ್ತಿರುವ ಭಾರತೀಯ ಅಭಿಮಾನಿಗಳಿಗೆ ರಿಚರ್ಡ್ ಮತ್ತೊಮ್ಮೆ ಅಂಪೈರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಆತಂಕವನ್ನುಂಟು ಮಾಡಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ರಿಚರ್ಡ್ ಅಂಪೈರಿಂಗ್ ಬಗ್ಗೆ ಸಾಕಷ್ಟು ಮೀಮ್ಸ್‌ಗಳ ಸುರಿಮಳೆಯಾಗುತ್ತಿವೆ.
ಅಷ್ಟಕ್ಕೂ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡುತ್ತಿರುವುದರಿಂದ ಭಾರತ ಪಂದ್ಯಗಳನ್ನು ಸೋಲುತ್ತಿದೆ ಎಂದು ಹೇಳುವುದು ತಪ್ಪು. ಏಕೆಂದರೆ ಪಂದ್ಯದ ಸೋಲು ಗೆಲುವು ತಂಡದ ಪ್ರದರ್ಶನದ ಮೇಲೆ ನಿಂತಿರುತ್ತದೆಯೇ ಹೊರತು ಯಾರು ಅಂಪೈರ್ ಮಾಡುತ್ತಿದ್ದಾರೆ ಎಂಬುದರ ಮೇಲಲ್ಲ. ಆದ್ರೂ ರಿಚರ್ಡ್ ಭಾರತದ ಪಾಲಿಗೆ ನತದೃಷ್ಟ ಅಂಪೈರ್. ಅಲ್ಲಿಗೆ ಈ ಸಲವೂ ಆಫ್ರಿಕಾದಲ್ಲಿ ಭಾರತೀಯರು ಟೆಸ್ಟ್ ಸರಣಿ ಗೆಲ್ಲಲ್ಲ ಅನ್ನೋ ಹಾಗೆ ಆಯ್ತು.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್