ಕಿವೀಸ್ ಮಣಿಸಿದ ಭಾರತ ಟಿ20 ಚಾಂಪಿಯನ್, ದಾಖಲೆ ಜೊತೆ ಮೊದಲ ಬಾರಿಗೆ ಆತಿಥ್ಯ ದೇಶಕ್ಕೆ ಟ್ರೋಫಿ

Published : Mar 08, 2026, 10:46 PM IST
t20 Champion Team India

ಸಾರಾಂಶ

ಕಿವೀಸ್ ಮಣಿಸಿದ ಭಾರತ ಟಿ20 ಚಾಂಪಿಯನ್, ದಾಖಲೆ ಜೊತೆ ಮೊದಲ ಬಾರಿಗೆ ಆತಿಥ್ಯ ದೇಶಕ್ಕೆ ಟ್ರೋಫಿ, ಅದ್ಭುತ ಪ್ರದರ್ಶನ, ಭರ್ಜರಿ ಗೆಲುವಿನ ಮೂಲಕ ಟೀಂ ಇಂಡಿಯಾ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. 

ಅಹಮ್ಮದಾಬಾದ್ (ಮಾ.08) ಟಿ20 ವಿಶ್ವಕಪ್ ಮಾದರಿಯಲ್ಲಿ ಭಾರತ ಸತತ 2ನೇ ಬಾರಿಗೆ ಚಾಂಪಿಯನ್ ಆಗಿದೆ. ನ್ಯೂಜಿಲೆಂಡ್ ವಿರುದ್ದ ನಡೆದ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಭಾರತ 256 ರನ್ ಟಾರ್ಗೆಟ್ ನೀಡಿತ್ತು. ಬಳಿಕ ನ್ಯೂಜಿಲೆಂಡ್ ತಂಡವನ್ನು 159 ರನ್‌ಗೆ ಕಟ್ಟಿಹಾಕಿ 96 ರನ್ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟ್ರೋಫಿ ಗೆದ್ದುಕೊಂಡಿದೆ. ವಿಶೇಷ ಅಂದರೆ ಈ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಹಲವು ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆತಿಥ್ಯವಹಿಸಿದ ದೇಶವೊಂದು ಟ್ರೋಫಿ ಗೆದ್ದುಕೊಂಡ ಸಾಧನೆ ಮಾಡಿದೆ.

ಹಲವು ದಾಖಲೆ

ಭಾರತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆ ಬರೆದಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೂರು ಟ್ರೋಫಿ ಗೆದ್ದುಕೊಂಡು ಗರಿಷ್ಠ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಲಾ 2 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಇತ್ತ ಹಾಲಿ ಚಾಂಪಿಯನ್ ತಂಡ ಮತ್ತೆ ಟ್ರೋಫಿ ಗೆದ್ದುಕೊಂಡಿದ್ದು ಇದೇ ಮೊದಲು. ಇದೇ ಮೊದಲ ಬಾರಿಗೆ ಸತತ 2ಬಾರಿ ಟ್ರೋಫಿ ಗೆದ್ದ ಸಾಧನೆಯನ್ನು ಟೀಂ ಇಂಡಿಯಾ ಮಾಡಿದೆ. ಇನ್ನು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿದ ದೇಶ ಟ್ರೋಫಿ ಗೆದ್ದಿದೆ.

ಟೀಂ ಇಂಡಿಯಾ ಅದ್ಭುತ ಬೌಲಿಂಗ್ ದಾಳಿ

ನ್ಯೂಜಿಲೆಂಡ್ ಗೆಲುವಿಗೆ 256 ರನ್ ಬೃಹತ್ ಟಾರ್ಗೆಟ್ ನೀಡಲಾಗಿತ್ತು. ಆದರೆ ಯಾವ ಹಂತದಲ್ಲೂ ನ್ಯೂಜಿಲೆಂಡ್ ತಂಡ ಸವಾಲು ಒಡ್ಡಲು ಟೀಂ ಇಂಡಿಯಾ ಬೌಲರ್ ಅವಕಾಶ ನೀಡಲೇ ಇಲ್ಲ. ಆರಂಭದಲ್ಲಿ ಅಕ್ಸರ್ ಪಟೇಲ್ ಹಾಗೂ ಜಸ್ಪ್ರೀತ್ ಬಮ್ರಾ ಸವಾರಿ ಮಾಡಿದರು. ಅಬ್ಬರಿಸುವ ಮೊದಲೇ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಂಡಿತು. ಸಂಕಷ್ಟೆ ಹೆಚ್ಚಾಯಿತು. ಅಕ್ಸರ್ ಹಾಗೂ ಬುಮ್ರಾಗೆ ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಸಾಥ್ ನೀಡಿದರು. ಇದರ ಪರಿಣಾಮ ನ್ಯೂಜಿಲೆಂಡ್ ಸತತ ವಿಕೆಟ್ ಕಳದುಕೊಂಡು ಸೋಲಿನ ಸುಳಿಗೆ ಸಿಲುಕಿತು.

ನ್ಯೂಜಿಲೆಂಡ್‌ಗೆ ಆರಂಭಿಕ ಟಿಮ್ ಸೈಫರ್ಟ್ ಕೆಲ ಹೊತ್ತು ಆಸರೆಯಾಗಿದ್ದರು. 52 ರನ್ ಸಿಡಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿ ಅಬ್ಬರಿಸಿದ್ದ ಫಿನ್ ಅಲೆನ್ ಸೇರಿದಂತೆ ನ್ಯೂಜಿಲೆಂಡ್ ಘಟಾನುಘಟಿ ಬ್ಯಾಟರ್ ನಿರಾಸೆ ಮೂಡಿಸಿದರು. ಕೊನೆಗೆ ಎಲ್ಲಾ ಜವಾಬ್ದಾರಿ ನಾಯಕ ಮಿಚೆಲ್ ಸ್ಯಾಂಟ್ನರ್ ಹೆಗಲಿಗೆ ಬಿದ್ದಿತ್ತು. ಮಿಚೆಲ್ ಸ್ಯಾಂಟ್ನರ್ ದಿಟ್ಟ ಹೋರಾಟ ನೀಡಿದರು. ಆದರೆ ಇತರರು ಸಾಥ್ ನೀಡಲಿಲ್ಲ. ಇದಕ್ಕೆ ಭಾರತ ಅವಕಾಶವನ್ನೂ ನೀಡಲಿಲ್ಲ. ನ್ಯೂಜಿಲೆಂಡ್ 19 ಓವರ್‌ನಲ್ಲಿ 159 ರನ್‌ಗೆ ಆಲೌಟ್ ಆಗಿದೆ. ಭಾರತ 96 ರನ್ ಭರ್ಜರಿ ಗೆಲುವು ದಾಖಲಿಸಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPLನಲ್ಲಿ ಮುಂಬೈ ಇಂಡಿಯನ್ಸ್ ಮೈಲಿಗಲ್ಲು, ಪಾಕ್ ದಾಖಲೆ ಮುರಿಯಲು ಇನ್ನು 3 ಹೆಜ್ಜೆ
ಹಿಟ್‌ಮ್ಯಾನ್‌ ಕಮ್‌ಬ್ಯಾಕ್! ಡೇವಿಡ್ ವಾರ್ನರ್ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಬೇಕು ಕೇವಲ 11 ರನ್