ಸಂಜು, ಶರ್ಮಾ, ಇಶಾನ್ ಸಿಕ್ಸರ್‌‌ಗೆ ನ್ಯೂಜಿಲೆಂಡ್ ಕಂಗಾಲು, ಟಿ20 ವಿಶ್ವಕಪ್ ಫೈನಲ್‌ನಲ್ಲಿ 256 ರನ್ ಸವಾಲು

Published : Mar 08, 2026, 08:46 PM IST
Abhishek Sharma

ಸಾರಾಂಶ

ಸಂಜು, ಶರ್ಮಾ, ಇಶಾನ್ ಸಿಕ್ಸರ್‌‌ಗೆ ನ್ಯೂಜಿಲೆಂಡ್ ಕಂಗಾಲು, ಟಿ20 ವಿಶ್ವಕಪ್ ಫೈನಲ್‌ನಲ್ಲಿ 256 ರನ್ ಸವಾಲು, ಅಬ್ಬರದ ಇನ್ನಿಂಗ್ಸ್ 200 ರನ್ ಗಡಿದಾಟಿದ ಬೆನ್ನಲ್ಲೇ ಕುಸಿತ ಕಂಡಿತ್ತು. ಆದರೂ ನ್ಯೂಜಿಲೆಂಡ್ ತಂಡಕ್ಕೆ 256 ರನ್ ಗುರಿ ನೀಡಲಾಗಿದೆ.

ಅಹಮ್ಮದಾಬಾದ್ (ಮಾ.08) ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರನ್ ಸಿಡಿಸಿದೆ. 15 ಓವರ್‌ಗೆ 200 ರನ್ ಗಡಿದಾಟಿದ್ದ ಟೀಂ ಇಂಡಿಯಾ ಬಳಿಕ ವಿಕೆಟ್ ಪತನಗೊಂಡಿತು. ಒಬ್ಬರ ಹಿಂದೆ ಮತ್ತೊಬ್ಬರಂತೆ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ನಿರೀಕ್ಷಿತ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಆದರೆ ಟಾಪ್ 3 ಬ್ಯಾಟರ್ ಹೊಡಿಬಡಿ ಆಟದಿಂದ ಭಾರತ ತಂಡ ನ್ಯೂಜಿಲೆಂಡ್‌ಗೆ 256 ರನ್ ಟಾರ್ಗೆಟ್ ನೀಡಿದೆ.

ಭಾರತ ಟಾಸ್ ಸೋತಾಗ ಆತಂಕ ಕಾಡಿತ್ತು. ಆದರೆ ವಿನ್ನಿಂಗ್ ಕಾಂಬಿನೇಷನ್ ಉಳಿಸಿಕೊಂಡ ಸೂರ್ಯಕುಮಾರ್ ಯಾದವ್ ಅದೃಷ್ಠದ ಸೂಚನೆ ನೀಡಿದ್ದರು. ಮೊದಲ ನಾಲ್ಕು ಎಸೆತದಲ್ಲಿ ರನ್ ಬರಲಿಲ್ಲ. ಆದರೆ ಸಂಜು ಸ್ಯಾಮ್ಸನ್ ಸಿಕ್ಸರ್ ಮೂಲಕ ಅಬ್ಬರ ಆರಂಭಗೊಂಡಿತು. ಎರಡನೇ ಓವರ್‌ನಿಂದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಆರಂಭಗೊಂಡಿತು. ಅಭಿಷೇಕ್ ಶರ್ಮಾ ಸತತ ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದರು. ಆದರೆ ಫೈನಲ್ ಪಂದ್ಯದಲ್ಲಿ 18 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಭಿಷೇಕ್ 52 ರನ್ ಸಿಡಿಸಿ ಔಟಾದರು.

ಸಂಜು ಸಿಕ್ಸರ್‌ಗೆ ನಲುಗಿದ ಕಿವೀಸ್

ಸಂಜು ಸ್ಯಾಮ್ಸನ್ ಸಿಕ್ಸರ್ ಮೂಲಕ ಅಬ್ಬರಿಸಿದರು. ಇಶಾನ್ ಕಿಶನ್ ಜೊತೆ ಸೇರಿ ಸ್ಫೋಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಂಜು ಸ್ಯಾಮ್ಸನ್ ಹ್ಯಾಟ್ರಿಕ್ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಸತತ ಹಾಫ್ ಸೆಂಚುರಿ ಸಿಡಿಸಿದ ದಿಗ್ಗಜರ ಸಾಲಿಗೆ ಸೇರಿಕೊಂಡರು. ಸಂಜು ಸ್ಯಾಮನ್ಸ್ 46 ಎಸೆತದಲ್ಲಿ 89 ರನ್ ಸಿಡಿಸಿ ಔಟಾದರು. ಸೆಮಿಫೈನಲ್ ಪಂದ್ಯದಲ್ಲೂ ಫೈನಲ್ ಪಂದ್ಯದಲ್ಲೂ ಶತಕ ಮಿಸ್ ಮಾಡಿಕೊಂಡರು.

ಇತ್ತ ಇಶಾನ್ ಕಿಶನ್ ಕೇವಲ 25 ಎಸೆತದಲ್ಲಿ 4 ಬೌಂಡರಿ ನಾಲ್ಕು ಸಿಕ್ಸರ್ ಮೂಲಕ 54 ರನ್ ಸಿಡಿಸಿ ಔಟಾದರು. ಭಾರತ 15 ಓವರ್‌ಗೆ 200 ರನ್ ಗಡಿ ದಾಟಿತ್ತು. ಆದರೆ ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಭಾರತ ಸತತ ವಿಕೆಟ್ ಕಳೆದುಕೊಂಡಿತು. 300 ರನ್ ಸಮೀಪದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡರು. ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು. ಹಾರ್ದಿಕ್ ಪಾಂಡ್ಯ 18 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ಅಬ್ಬರಿಸುವ ಮೂಲಕ ಭಾರತ 250ರ ಗಡಿ ದಾಟಿತು. ದುಬೆ ಅಜೆಯ 26 ರನ್ ಸಿಡಿಸುವ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಸಿಡಿಸಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPLನಲ್ಲಿ ಮುಂಬೈ ಇಂಡಿಯನ್ಸ್ ಮೈಲಿಗಲ್ಲು, ಪಾಕ್ ದಾಖಲೆ ಮುರಿಯಲು ಇನ್ನು 3 ಹೆಜ್ಜೆ
ಹಿಟ್‌ಮ್ಯಾನ್‌ ಕಮ್‌ಬ್ಯಾಕ್! ಡೇವಿಡ್ ವಾರ್ನರ್ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಬೇಕು ಕೇವಲ 11 ರನ್