ಭಾರತದ ಹ್ಯಾಟ್ರಿಕ್ ಗೆಲುವಿನ ಕನಸಿಗೆ ದಕ್ಷಿಣ ಆಫ್ರಿಕಾ ಶಾಕ್: ರಿಚಾ ಹೋರಾಟ ವ್ಯರ್ಥ!

Published : Oct 10, 2025, 09:43 AM IST
Richa Ghosh, India Women

ಸಾರಾಂಶ

ಮಹಿಳಾ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ಸೋಲು ಎದುರಾಗಿದೆ. ರಿಚಾ ಘೋಷ್ ಅವರ 94 ರನ್‌ಗಳ ಹೋರಾಟದ ಹೊರತಾಗಿಯೂ, ಭಾರತ ತಂಡವು ಸೋಲನುಭವಿಸಿತು, ಆದರೆ ಸ್ಮೃತಿ ಮಂಧನಾ ಮತ್ತು ರಿಚಾ ಘೋಷ್ ಹೊಸ ದಾಖಲೆಗಳನ್ನು ಬರೆದರು.

ವಿಶಾಖಪಟ್ಟಣಂ: ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಆಘಾತ ಎದುರಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ವಿಕೆಟ್‌ಗಳಿಂದ ಪರಾಭವಗೊಂಡಿತು. ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿದ್ದ ಭಾರತವನ್ನು ರಿಚಾ ಘೋಷ್ ತಮ್ಮ ಹೋರಾಟದ ಮೂಲಕ ಮೇಲೆತ್ತಿದರೂ, ತಂಡಕ್ಕೆ ಗೆಲುವು ಸಿಗಲಿಲ್ಲ. ಆಫ್ರಿಕಾ 3 ಪಂದ್ಯಗಳಲ್ಲಿ 2ನೇ ಜಯಗಳಿಸಿತು.

ಮೊದಲು ಬ್ಯಾಟ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 251 ರನ್‌ಗೆ ಆಲೌಟಾಯಿತು. 10 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿದ್ದ ತಂಡ 26 ಓವರಲ್ಲಿ 102 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ರಿಚಾ ಘೋಷ್, ಅವರು 77 ಎಸೆತಕ್ಕೆ 94 ರನ್ ಸಿಡಿಸಿದರು. ಸ್ನೇಹ ರಾಣಾ 33, ಪ್ರತಿಕಾ ರಾವಲ್ 37, ಸ್ಮೃತಿ ಮಂಧನಾ 23 ರನ್ ಕೊಡುಗೆ ನೀಡಿದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದ.ಆಫ್ರಿಕಾ 48.5 ಓವರ್‌ಗಳಲ್ಲಿ ಜಯಗಳಿಸಿತು. 81 ರನ್ ಗೆ 5 ವಿಕೆಟ್ ಕಳೆದುಕೊಂಡರೂ ನಾಯಕಿ ಲಾರಾ ವೊಲ್ವಾರ್ಟ್(70), ನ್ಯಾಡಿನ್ ಡಿ ಕ್ಲರ್ಕ್(ಔಟಾಗದೆ 84), ಕ್ಲೋ ಟ್ರಿಯಾನ್ (49) ಹೋರಾಟ ಗೆಲುವು ತಂದುಕೊಟ್ಟಿತು.

ಸ್ಕೋರ್: ಭಾರತ 49.5 ಓವರಲ್ಲಿ 251/10 (ರಿಚಾ 94, ಪ್ರತಿಕಾ 37, ಸ್ನೇಹ 33, ಸ್ಮೃತಿ 23, 3, 3-32), ದ.ಆಫ್ರಿಕಾ 48.5 ಓವರಲ್ಲಿ 252/7 (ಕ್ಲರ್ಕ್ 84, ವೊಲ್ವಾರ್ಟ್ 70, ಸ್ನೇಹ 2-47) ಪಂದ್ಯಶ್ರೇಷ್ಠ: ನ್ಯಾಡಿನ್ ಡೆ ಕ್ಲರ್ಕ್

ಈ ವರ್ಷ 982 ರನ್: ಸ್ಮೃತಿ ಹೊಸ ದಾಖಲೆ

ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾರತದ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ. ಈ ಮೂಲಕ 28 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದ್ದಾರೆ. ಗುರುವಾರದ ಪಂದ್ಯದಲ್ಲಿ 23 ರನ್ ಗಳಿಸಿದ ಅವರು, ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಸ್ಕೋರ್ ಅನ್ನು 982ಕ್ಕೆ ಹೆಚ್ಚಿಸಿದರು. ಅವರು ಕೇವಲ 17 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ 4 ಶತಕ. 3 ಅರ್ಧಶತಕಗಳೂ ಒಳಗೊಂಡಿವೆ. 1997ರಲ್ಲಿ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ 970 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ರಿಚಾ 1000+ ರನ್: ಭಾರತ ಪರ ದಾಖಲೆ

ಗುರುವಾರದ ಪಂದ್ಯದಲ್ಲಿ ರಿಚಾ ಘೋಷ್ ಹೊಸ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಎಸೆತಗಳಲ್ಲಿ 94 ರನ್ ಸಿಡಿಸಿ ತಂಡಕ್ಕೆ ಆಸರೆಯಾದ ರಿಚಾ ಈ ಮೂಲಕ ಏಕದಿನದ ರನ್ ಗಳಿಕೆಯನ್ನು 1041ಕ್ಕೆ ಹೆಚ್ಚಿಸಿದರು. ಇದು ಎಸೆತಗಳ ಆಧಾರದಲ್ಲಿ ಭಾರತದ ಪರ ಅತಿ ವೇಗದ ಸಾವಿರ ರನ್. ಅವರು 1010 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶ್ವದಲ್ಲೇ ಇದು 3ನೇ ವೇಗದ ಸಾವಿರ ರನ್, ಆಸ್ಟ್ರೇಲಿಯಾದ ಆಫ್ ಗಾರ್ಡರ್ 917, ಇಂಗ್ಲೆಂಡ್‌ನ ಸ್ಟೀವರ್ ಬ್ರಂಟ್ 943 ಎಸೆತಗಳಲ್ಲೇ ಈ ಮೈಲುಗಲ್ಲು ತಲುಪಿದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ