ICC Test Rankings: ಅಗ್ರಸ್ಥಾನಕ್ಕೇರಿದ ಭಾರತ : 2ನೇ ಸ್ಥಾನಕ್ಕೆ ಕುಸಿದ ವಿಶ್ವ ಚಾಂಪಿಯನ್‌ ನ್ಯೂಜಿಲೆಂಡ್‌!

By Kannadaprabha News  |  First Published Dec 7, 2021, 9:22 AM IST

*ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ 372 ರನ್‌ಗಳ ಬೃಹತ್‌ ಜಯ
*ಎರಡನೇ ಸ್ಥಾನಕ್ಕೆ ಕುಸಿದ ವಿಶ್ವ ಚಾಂಪಿಯನ್‌ ನ್ಯೂಜಿಲೆಂಡ್‌
*ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: 3ನೇ ಸ್ಥಾನ ಕಾಯ್ದುಕೊಂಡ ಭಾರತ


ದುಬೈ (ಡಿ. 07): ನ್ಯೂಜಿಲೆಂಡ್‌ ವಿರುದ್ಧ ಬೃಹತ್‌ ಗೆಲುವಿನ ಬಳಿಕ ಭಾರತ (Ind vs NZ  test) ತಂಡ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Rankings) ಮತ್ತೆ ಅಗ್ರಸ್ಥಾನಕ್ಕೇರಿದೆ. ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಮಹತ್ವದ ಅಂಕಗಳನ್ನು ಸಂಪಾದಿಸಿತು. ಈ ವರ್ಷ ಜೂನ್‌ನಲ್ಲಿ ಭಾರತವನ್ನು ಹಿಂದಿಕ್ಕಿ ನ್ಯೂಜಿಲೆಂಡ್‌ (New Zealand) ಅಗ್ರಸ್ಥಾನಕ್ಕೇರಿತ್ತು. ವಿರಾಟ್‌ ಕೊಹ್ಲಿ (Virat kohli) ನಾಯಕತ್ವದ ಟೀಂ ಇಂಡಿಯಾ  (Team India) ಒಟ್ಟು 124 ರೇಟಿಂಗ್‌ ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ಕುಸಿದಿರುವ ನ್ಯೂಜಿಲೆಂಡ್‌ 121 ಅಂಕ ಹೊಂದಿದೆ. 

ಆಸ್ಪ್ರೇಲಿಯಾ(108), ಇಂಗ್ಲೆಂಡ್‌(107) ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನ ಪಡೆದಿವೆ. ಇನ್ನು ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಕ್ರಮವಾಗಿ 5 ಹಾಗೂ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆರ್‌.ಅಶ್ವಿನ್‌ 2ನೇ ಸ್ಥಾನ ಕಾಯ್ದುಕೊಂಡರೆ, ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 2ನೇ ಹಾಗೂ ಆರ್‌.ಅಶ್ವಿನ್‌ 3ನೇ ಸ್ಥಾನದಲ್ಲಿದ್ದಾರೆ.

Tap to resize

Latest Videos

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: 3ನೇ ಸ್ಥಾನ ಕಾಯ್ದುಕೊಂಡ ಭಾರತ

ನ್ಯೂಜಿಲೆಂಡ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 12 ಅಂಕ ಸಂಪಾದಿಸಿರುವ ಭಾರತ, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (test world championship) ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. 2021-23ರ ಅವಧಿಯಲ್ಲಿ ತಂಡ 6 ಪಂದ್ಯಗಳನ್ನು ಆಡಿದ್ದು ಒಟ್ಟು 72 ಅಂಕಗಳಿಗೆ ಸ್ಪರ್ಧಿಸಿದೆ. ಇದರಲ್ಲಿ 3 ಗೆಲುವು, 1 ಸೋಲು, 2 ಡ್ರಾನೊಂದಿಗೆ ಒಟ್ಟು 42 ಅಂಕ ಗಳಿಸಿದ್ದು, ತಂಡದ ಗೆಲುವಿನ ಪ್ರತಿಶತ ಶೇ.58.33 ಇದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದು ನ್ಯೂಜಿಲೆಂಡ್‌ 6ನೇ ಸ್ಥಾನಕ್ಕೆ ಕುಸಿದಿದೆ.

Ind Vs NZ Mumbai Test: ತವರಲ್ಲಿ ಭಾರತಕ್ಕೆ ಸತತ 14ನೇ ಸರಣಿ ಜಯ : ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾದ ಪಂದ್ಯ!

2013ರಿಂದ ತವರಿನಲ್ಲಿ ಸರಣಿ ಸೋಲದ ಭಾರತ

ಕಿವೀಸ್‌ ವಿರುದ್ಧ 1-0ಯಲ್ಲಿ ಗೆಲ್ಲುವ ಮೂಲಕ ಭಾರತ ತವರಿನಲ್ಲಿ ಸತತ 14ನೇ ಸರಣಿ ಗೆಲುವು ಸಂಪಾದಿಸಿದೆ. 2013ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಸರಣಿ ಗೆಲ್ಲುವ ಮೂಲಕ ಆರಂಭಗೊಂಡ ಗೆಲುವಿನ ಓಟ ಇನ್ನೂ ಮುಂದುವರಿಯುತ್ತಲ್ಲೇ ಇದ್ದು, ಭಾರತದಲ್ಲಿ ಸರಣಿ ಗೆಲ್ಲಲು ಬಲಿಷ್ಠ ತಂಡಗಳಿಗೂ ಸಾಧ್ಯವಾಗುತ್ತಿಲ್ಲ. ಕಳೆದ 8 ವರ್ಷದಲ್ಲಿ ಆಸ್ಪ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದ.ಆಫ್ರಿಕಾ, ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ ವಿರುದ್ಧ ತಲಾ 2, ಅಷ್ಘಾನಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ತಲಾ 1 ಸರಣಿ ಗೆಲುವು ಕಂಡಿದೆ.

ಟೆಸ್ಟ್‌ನಲ್ಲಿ ಭಾರತಕ್ಕೆ ರನ್‌ ಆಧಾರದಲ್ಲಿ ಅತಿದೊಡ್ಡ ಜಯ

ಟೆಸ್ಟ್‌ ಕ್ರಿಕೆಟ್‌ನಲ್ಲಿ ರನ್‌ ಆಧಾರದಲ್ಲಿ ಇದು ಭಾರತದ ಅತಿದೊಡ್ಡ ಗೆಲುವು ಎನಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ 2015ರಲ್ಲಿ ಗಳಿಸಿದ್ದ 337 ರನ್‌ಗಳ ಗೆಲುವಿನ ದಾಖಲೆಯನ್ನು ಭಾರತ ಉತ್ತಮಗೊಳಿಸಿಕೊಂಡಿದೆ. ಇನ್ನು 2016ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಸಾಧಿಸಿದ್ದ 321 ರನ್‌ಗಳ ಜಯ 3ನೇ ಅತಿದೊಡ್ಡ ಗೆಲುವು ಎನಿಸಿದೆ. ವಿಶೇಷ ಎಂದರೆ ಈ ಮೂರೂ ಪಂದ್ಯಗಳು ಸರಣಿಯ ಕೊನೆ ಪಂದ್ಯಗಳಾಗಿದ್ದವು. ಮೂರೂ ಪಂದ್ಯಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಶ್ವಿನ್‌ಗೆ 4 ವಿಕೆಟ್‌ ಕಿತ್ತಿದ್ದರು. ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. ಇದೇ ವೇಳೆ ರನ್‌ ಆಧಾರದಲ್ಲಿ ನ್ಯೂಜಿಲೆಂಡ್‌ಗಿದು ಅತಿದೊಡ್ಡ ಸೋಲು. 2007ರಲ್ಲಿ ದ.ಆಫ್ರಿಕಾ ವಿರುದ್ಧ 358 ರನ್‌ಗಳಿಂದ ಸೋತಿದ್ದು ಈ ವರೆಗಿನ ದಾಖಲೆಯಾಗಿತ್ತು.

click me!