
ಕೊಲಂಬೊ(ಫೆ.16) ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ, ಯಾವುದೇ ಕ್ರೀಡೆಯಾಗಿದ್ದದರೂ ಸರಿ ಅದು ರೋಚಕತೆ ಹೆಚ್ಚಿಸುತ್ತದೆ. ಆಟಗಾರರ ಸ್ಲೆಡ್ಜಿಂಗ್, ತಳ್ಳಾಟ, ನೂಕೂಟ ಇದ್ದೇ ಇರುತ್ತೆ. ಮಾತಿನ ಚಕಮಕಿ, ಸವಾಲು,ತಿರುಗೇಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಆದರೆ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಡೋ ಪಾಕ್ ಪಂದ್ಯದಲ್ಲಿ ಸ್ಲೆಡ್ಜಿಂಗ್ ಇರಲೇ ಇಲ್ಲ. ಪಾಕಿಸ್ತಾನ ಬ್ಯಾಟಿಂಗ್ ಮಾಡದೇ ಮಕಾಡೆ ಮಲಗಿತ್ತು. ಕನಿಷ್ಠ ಭಾರತ ಬ್ಯಾಟಿಂಗ್ ಮಾಡುವಾಗಲೂ ಶಾಂತವಾಗಿ ಪಂದ್ಯ ನಡೆದಿತ್ತು. ಇದರ ಹಿಂದೆ ಸೂರ್ಯಕುಮಾರ್ ಯಾದವ್ ಮಾಡಿದ ಪ್ಲಾನ್ ಇತ್ತು. ಈ ಕುರಿತ ವಿಡಿಯೋವನ್ನು ಬಿಸಿಸಿಐ ಬಹಿರಂಗಪಡಿಸಿದೆ.
ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಹ ಆಟಗಾರರಿಗೆ ಮಹತ್ವದ ಸೂಚನೆ ನೀಡಿದ್ದರು. ನಮ್ಮ ಉತ್ತರ ಏನಿದ್ದರು ಅದು ಆಟದ ಮೂಲಕವೇ ಇರಬೇಕು. ಮಾತಿನ ಚಕಮಕಿ, ತಳ್ಳಾಟ ನೂಕಾಟ, ಸವಾಲುಗಳು ಬೇಡ ಎಂದು ಖಡಕ್ ಸೂಚನೆ ನೀಡಿದ್ದರು. ನಾವು ಪಾಕಿಸ್ತಾನವನ್ನು ಸ್ಲೆಡ್ಜಿಂಗ್‌ನಿಂದ ಎದುರಿಸುವ ಅವಶ್ಯಕತೆ, ಅನಿವಾರ್ಯತೆ ನಮಗಿಲ್ಲ. ನಮ್ಮ ಪರ್ಫಾಮೆನ್ಸ್ ಅದಕ್ಕಿಂತ ಸಾವಿರ ಪಟ್ಟು ಮೇಲಿದೆ. ನಮ್ಮ ಉತ್ತರ ಏನಿದ್ದರೂ ನಮ್ಮ ಗೇಮ್ ಮೂಲಕವೇ ಇರಬೇಕು, ಕೆಣಕಿದರೂ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಸೂರ್ಯಕುಮಾರ್ ಯಾದವ್ ಖಡಕ್ ಸೂಚನೆಯನ್ನು ಟೀಂ ಇಂಡಿಯಾ ಆಟಗಾರರಿಗೆ ನೀಡಿದ್ದರು.
ಪಂದ್ಯದ ದೃಶ್ಯ, ಸೂರ್ಯಕುಮಾರ್ ಯಾದವ್ ಪೆಪ್ ಟಾಕ್ ಸೇರಿದಂತೆ ಇಂಡೋ ಪಾಕ್ ಪಂದ್ಯದ ಕೆಲ ತುಣುಕುಗಳನ್ನು ಬಿಸಿಸಿಐ ಪೋಸ್ಟ್ ಮಾಡಿದೆ. ಈ ಪೈಕಿ ಸೂರ್ಯಕುಮಾರ್ ಪೆಪ್ ಟಾಕ್ ಭಾರಿ ಮಹತ್ವ ಪಡೆದುಕೊಂಡಿದೆ. ಓವರ್‌ಗಳ ಮಧ್ಯೆ ಬೇಗ ಫೀಲ್ಡಿಂಗ್ ಪೊಸಿಷನ್‌ಗೆ ಹೋಗಿ. ಯಾರ ಜೊತೆನೂ ಮಾತಾಡೋಕೆ ನಿಲ್ಬೇಡಿ. ನಾವು ಒಳ್ಳೆ ಕ್ರಿಕೆಟ್ ಆಡಬೇಕು. ನಮ್ಮ ಆಟದಿಂದ, ಈ ಮ್ಯಾಚ್ ಗೆಲ್ಲೋಣ.'' ಎಂದು ಸೂರ್ಯ ಹೇಳಿದ್ದಾರೆ. ಈ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ತಂಡವು ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು ಮತ್ತು ಭಾರತದ 'ನೋ ಹ್ಯಾಂಡ್‌ಶೇಕ್ ಪಾಲಿಸಿ' ಕೂಡ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ, ಮೈದಾನದಲ್ಲಿ ಯಾವುದೇ ಅನಗತ್ಯ ಗಲಾಟೆಗಳು ಆಗಬಾರದು ಎಂಬುದು ಸೂರ್ಯಕುಮಾರ್ ಯಾದವ್ ನಿಲುವಾಗಿತ್ತು.
ಇದೇ ವೇಳೆ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಪಾಕ್ ಆಟಗಾರ ಬಾಬರ್ ಅಜಮ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2022ರ ವಿಶ್ವಕಪ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಆಡಿದ್ದ ಐತಿಹಾಸಿಕ ಇನ್ನಿಂಗ್ಸ್ ಅನ್ನು ಪಠಾಣ್ ಉಲ್ಲೇಖಿಸಿದರು. ''ಅಷ್ಟು ದೊಡ್ಡ ಒತ್ತಡದಲ್ಲಿ ಬಾಬರ್ ಎಂದಾದರೂ ಇಂಥದ್ದೊಂದು ಇನ್ನಿಂಗ್ಸ್ ಆಡಿದ್ದಾರಾ? ಎಷ್ಟು ಬಾರಿ ಅವರು ಒತ್ತಡವನ್ನು ಮೀರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ?'' ಎಂದು ಪಠಾಣ್ ಪ್ರಶ್ನಿಸಿದ್ದಾರೆ.ವಿಕೆಟ್‌ಗಳು ಸತತವಾಗಿ ಬೀಳುತ್ತಿದ್ದಾಗ, ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದುಕೊಂಡು ಆಟವನ್ನು 15ನೇ ಓವರ್‌ವರೆಗೆ ಕೊಂಡೊಯ್ಯಬೇಕಿತ್ತು. ದೊಡ್ಡ ಹೊಡೆತಕ್ಕೆ ಯತ್ನಿಸುವ ಬದಲು, ಬಾಬರ್ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಬೇಕಿತ್ತು. ಸ್ಪಿನ್ನರ್‌ಗಳ ವಿರುದ್ಧ ಸ್ಟ್ರೈಕ್ ರೊಟೇಟ್ ಮಾಡಲು ಬಾಬರ್ ಕಷ್ಟಪಡುತ್ತಿದ್ದಾರೆ. ಭಾರತ 175 ರನ್ ಗಳಿಸಿದಾಗಲೇ ಪಂದ್ಯ ಪಾಕಿಸ್ತಾನದ ಕೈಯಿಂದ ಜಾರಿಹೋಗಿತ್ತು. ಪಾಕಿಸ್ತಾನದ ಬ್ಯಾಟಿಂಗ್ ಲೈನ್-ಅಪ್‌ಗೆ ಅಷ್ಟು ದೊಡ್ಡ ಗುರಿಯನ್ನು ಬೆನ್ನಟ್ಟುವ ಶಕ್ತಿ ಇಲ್ಲ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.