IPL 2022ರಿಂದ ಭಾರತಕ್ಕೆ ಸಿಕ್ಕಿದ್ದಾರೆ ವೆರೈಟಿ ಫಾಸ್ಟ್ ಬೌಲರ್ಸ್..!

By Suvarna NewsFirst Published May 28, 2022, 1:25 PM IST
Highlights

IPL 2022: ಈ ಬಾರಿಯ ಐಪಿಎಲ್‌ನಿಂದ ಹೊಸ ಪ್ರತಿಭೆಗಳು ಭಾರತ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಕಾಶ್ಮೀರ ಎಕ್ಸ್‌ಪ್ರೆಸ್‌ ಉಮ್ರಾನ್‌ ಮಲ್ಲಿಕ್‌, ಆವೇಶ್‌ ಖಾನ್‌ ಮತ್ತು ಮೊಹಮ್ಮದ್‌ ಮೊಹ್ಸಿನ್‌ ಭರವಸೆಯ ಫಾಸ್ಟ್‌ ಬೌಲರ್‌ಗಳಾಗಿ ಕಾಣುತ್ತಿದ್ದಾರೆ. 

ಮುಂಬೈ : ಈ ಸಲದ IPL ದುನಿಯಾದಲ್ಲಿ ಭಾರತಕ್ಕೆ ಬ್ಯಾಟರ್​ಗಳಿಗಿಂತ ಬೌಲರ್​​ಗಳು ಸಿಕ್ಕಿದ್ದಾರೆ. ಅವರು ಅಂತಿಥ ಬೌಲರ್ಸ್ ಅಲ್ಲ. ಧೂಳೆಬ್ಬಿಸೋ ಬೌಲರ್​ಗಳು. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡೋ ಬೌಲರ್ಸ್​. ವೇಗ.. ಸ್ವಿಂಗ್.. ಬೌನ್ಸ್.. ವಿಕೆಟ್ ಪಡೆಯಲು.. ಕೊನೆಗೆ ಎಕನಾಮಿ ಬೌಲಿಂಗ್​​ಗೂ ಸೈ ಇವರು. ಹೀಗಾಗಿಯೇ ಅವರನ್ನ ವೆರೈಟಿ ಬೌಲರ್ಸ್ ಅಂದಿದ್ದು.

ಈ ತ್ರಿವಳಿ ಬೌಲರ್ಸ್ ಅವಶ್ಯಕತೆ ಟೀಂ ಇಂಡಿಯಾಗಿದೆ. ಮುನಾಫ್ ಪಟೇಲ್ ಮತ್ತು ಜಹೀರ್ ಖಾನ್ ಅವರ ಸ್ಥಾನ ತುಂಬಲು ಬಂದಿದ್ದಾರೆ. ಇನ್ನೊಬ್ಬ ಮೊಹಮ್ಮದ್ ಶಮಿ ಪ್ಲೇಸ್ ಅನ್ನ ಆಕ್ರಮಿಸಿಕೊಳ್ಳಲು ರೆಡಿಯಾಗಿದ್ದಾನೆ. IPL​ನಲ್ಲಿ ಮಿಂಚಿದ್ದರಿಂದ ಇಬ್ಬರು ಸೌತ್ ಆಫ್ರಿಕಾ ಟಿ20 ಸರಣಿಗೆ ಸೆಲೆಕ್ಟ್ ಆದ್ರೆ, ಇನ್ನೊಬ್ಬ ನಿರಾಸೆ ಅನುಭವಿಸಿದ್ದಾನೆ. ಹಾಗಂದ ಮಾತ್ರಕ್ಕೆ ಆತ ಕಳಪೆ ಬೌಲರ್ ಏನೂ ಅಲ್ಲ. ಈ IPL​ನಲ್ಲಿ ಕಡಿಮೆ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಸಾಧನೆ ಮಾಡಿದ್ದಾನೆ.

ಮುನಾಫ್​ 150 ಕಿಲೋ ಮೀಟರ್​.. ಉಮ್ರಾನ್ 150 ಕಿಲೋ ಮೀಟರ್​:
ಟೀಂ ಇಂಡಿಯಾ ಪರ 150 ಕಿಲೋ ಮೀಟರ್​ಗೂ ವೇಗವಾಗಿ ಬೌಲಿಂಗ್ ಮಾಡಿದ ಬೌಲರ್ ಅಂದ್ರೆ ಅದು ಮುನಾಫ್ ಪಟೇಲ್. ಮುನಾಫ್​ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್​ ಅಂತಹದ್ದೇ ಬೌಲರ್ ಹುಡುಕಾಟದಲ್ಲಿತ್ತು. IPL ಮೂಲ್ಕ ಅಂತಹ ಬೌಲರ್ ಸಿಕ್ಕಿದ್ದಾನೆ. ಆತನೇ ಜಮ್ಮು & ಕಾಶ್ಮೀರದ ಉಮ್ರಾನ್ ಮಲ್ಲಿಕ್.

ಸನ್ ರೈಸರ್ಸ್ ಪರ ಈ ಸೀಸನ್​ನಲ್ಲಿ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿರೋ ಉಮ್ರಾನ್ ಮಲ್ಲಿಕ್, ಎಲ್ಲಾ ಮ್ಯಾಚ್​ನಲ್ಲೂ ಒಂದಲ್ಲ ಒಂದು ಅವಾರ್ಡ್​ ಪಡೆದ ಸಾಧನೆ ಮಾಡಿದ್ದಾರೆ. 154 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ, ಈ ಸೀಸನ್​ನಲ್ಲಿ ಅತಿವೇಗವಾಗಿ ಬಾಲ್ ಎಸೆದ ದಾಖಲೆ ಮಾಡಿದ್ದಾರೆ. 150 ಕಿಲೋ ಮೀಟರ್​ಗೂ ಅಧಿಕ ಬಾಲ್​ಗಳನ್ನ ಸಾಕಷ್ಟು ಎಸೆದಿದ್ದಾರೆ. ಸ್ವಲ್ಪ ದುಬಾರಿ ರನ್ ನೀಡುತ್ತಾರೆ ಅನ್ನೋದು ಬಿಟ್ಟರೆ ಉಮ್ರಾನ್ ಅದ್ಭುತ ಬೌಲರ್. ಹಾಗಾಗಿಯೇ ಆಫ್ರಿಕಾ ಟಿ20 ಸರಣಿಗೆ ಆಯ್ಕೆಯಾಗಿರೋದು.

ಶಮಿ ಸ್ಥಾನ ಆಕ್ರಮಿಸಿಕೊಳ್ತಾನಾ ಅವೇಶ್ ಖಾನ್:
ಮೊದಮ್ಮದ್ ಶಮಿ ಈ ಐಪಿಎಲ್​ನಲ್ಲಿ 15 ಪಂದ್ಯಗಳಿಂದ 19 ವಿಕೆಟ್ ಪಡೆದಿರಬಹುದು. ಆದ್ರೆ ಅವರಿಗೆ ಟಿ20 ಟೀಮ್​ನಲ್ಲಿ ಸ್ಥಾನ ಖಚಿತವಿಲ್ಲ. ಟಿ20 ವರ್ಲ್ಡ್​ಕಪ್ ನಂತರ ಅವರನ್ನ ಟಿ20 ತಂಡದಿಂದ ಡ್ರಾಪ್ ಮಾಡಲಾಗಿದೆ. ಆಫ್ರಿಕಾ ಸರಣಿಗೆ ಶಮಿ ಬದಲಿಗೆ ಅವೇಶ್ ಖಾನ್ ಅವರನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: IPL 2022 ಟೂರ್ನಿಯಲ್ಲಿ ದಾಖಲೆ ಸರಿಗಟ್ಟಿದ ಜೋಸ್ ಬಟ್ಲರ್, ಆದ್ರೂ ಕೊಹ್ಲಿ ರೆಕಾರ್ಡ್‌ ಸೇಫ್‌..?

ಲಕ್ನೋ ಪರ ಆಡಿದ ಅವೇಶ್ ಖಾನ್, 13 ಮ್ಯಾಚ್​ನಿಂದ 18 ವಿಕೆಟ್ ಪಡೆದಿದ್ದಾರೆ. ಅವರ ವೇಗ ಮತ್ತು ಸ್ವಿಂಗ್ ಬೌಲಿಂಗ್​ ಅದ್ಭುತವಾಗಿದ್ದು, ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸಲಿದೆ. ಶಮಿಗೆ ಆಗ್ಲೇ 32 ವರ್ಷ. ಅವರು ಟೆಸ್ಟ್​ ಟೀಮ್​ಗೆ ಸೀಮಿತವಾಗ್ತಿದ್ದಾರೆ. ಹಾಗಾಗಿ ಶಾರ್ಟ್​ ಫಾಮ್ಯಾಟ್​ನಲ್ಲಿ ಶಮಿ ಸ್ಥಾನ ತುಂಬಲು ಅವೇಶ್ ಸಿದ್ದರಾಗಿದ್ದಾರೆ.

ಲೆಫ್ಟಿ ಜಹೀರ್ ಸ್ಥಾನಕ್ಕೆ ಮತ್ತೊಬ್ಬ ಲೆಫ್ಟಿ ಮೋಸಿನ್:
ಈ ಐಪಿಎಲ್​ಗೂ ಮುನ್ನ ಈ ಹೆಸರನ್ನ ಯಾರೂ ಹೆಚ್ಚಾಗಿ ಕೇಳಿರೋದಕ್ಕೆ ಇಲ್ಲ ಬಿಡಿ. ಅವೇಶ್ ಖಾನ್ ಜೊತೆಗೆ ಲಕ್ನೋ ಪರ ಆಡಿದ ಮೋಸಿನ್ ಖಾನ್, 9 ಮ್ಯಾಚ್​ನಿಂದ 14 ವಿಕೆಟ್ ಪಡೆದಿದ್ದಾರೆ. ವಿಕೆಟ್ ಗಳಿಕೆಯಲ್ಲಿ ಕಡಿಮೆ ಇರಬಹುದು. ಆದ್ರೆ ಅವರ ಎಕಾನಮಿ ಜಸ್ಟ್​ 5.96. ಈ ಸೀಸನ್​ನಲ್ಲಿ 6ಕ್ಕೂ ಕಮ್ಮಿ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ 2ನೇ ಬೌಲರ್​ ಮೋಸಿನ್ ಖಾನ್​.

ಇದನ್ನೂ ಓದಿ: VIRAT KOHLI ಪ್ಲೇ ಆಫ್‌ನಲ್ಲಿ ಮತ್ತೆ ಮತ್ತೆ ಫೇಲ್‌ ಆಗ್ತಿರೋದು ಯಾಕೆ?

ಜಹೀರ್ ಖಾನ್ ನಂತರ ಭಾರತೀಯ ಕ್ರಿಕೆಟ್ ಎಡಗೈ ಬೌಲರ್ ಹುಡುಕಾಟದಲ್ಲಿತ್ತು. ಒಂದಿಬ್ಬರು ಟೀಮ್​ಗೆ ಬಂದರಾದ್ರೂ ಹೆಚ್ಚು ಕಾಲ ಬಾಳಲಿಲ್ಲ. IPL​ನಲ್ಲಿ ಮೋಸಿನ್ ಖಾನ್ ಭರವಸೆ ಹುಟ್ಟಿಸಿದ್ದಾನೆ. ಡೊಮೆಸ್ಟಿಕ್ ಮತ್ತು ಮುಂದಿನ IPL​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಖಂಡಿತ ಟೀಂ ಇಂಡಿಯಾಗೆ ಎಂಟ್ರಿಕೊಡುತ್ತಾನೆ.

click me!