
ಬರ್ಮಿಂಗ್‌ಹ್ಯಾಮ್ (ಜುಲೈ 9): ಇಂಗ್ಲೆಂಡ್ (England) ವಿರುದ್ಧ ಮೊದಲ ಟಿ20ಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ (India), ಶನಿವಾರ 2ನೇ ಟಿ20 ಪಂದ್ಯದಲ್ಲಿ ಸೆಣಸಲಿದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ ಸಂಘಟಿತ ಪ್ರದರ್ಶನ ನೀಡಿ ಬಲಿಷ್ಠ ಇಂಗ್ಲೆಂಡ್‌ಗೆ ಹೆಡೆಮುರಿ ಕಟ್ಟಿದ ಟೀಂ ಇಂಡಿಯಾ (Team India), ತನ್ನ ಲಯ ಮುಂದುವರಿಸಲು ಎದುರು ನೋಡುತ್ತಿದೆ.
ವಿರಾಟ್ ಕೊಹ್ಲಿ (Virat Kohli), ರಿಷಭ್ ಪಂತ್, ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ತಂಡ ಕೂಡಿಕೊಂಡಿದ್ದು, ಭಾರತಕ್ಕೆ ಆಯ್ಕೆ ಗೊಂದಲ ಎದುರಾಗಲಿದೆ. 5 ತಿಂಗಳ ಬಳಿಕ ಭಾರತ ಪರ ಟಿ20 ಆಡಲು ಎದುರು ನೋಡುತ್ತಿರುವ ಕೊಹ್ಲಿ (Kohli) ಮೇಲೆ ಭಾರೀ ಒತ್ತಡವಿದೆ.
ಆಡುವ ಹನ್ನೊಂದರಲ್ಲಿ ಕೊಹ್ಲಿಗೆ ಸ್ಥಾನ ನೀಡಬೇಕಿದ್ದರೆ ಇಶಾನ್ ಕಿಶನ್‌ರನ್ನು (Ishan Kishan) ಹೊರಗಿಡಬೇಕಾಗಬಹುದು. ರೋಹಿತ್ ಜೊತೆ ಕೊಹ್ಲಿ ಇನ್ನಿಂಗ್‌್ಸ ಆರಂಭಿಸುವ ನಿರೀಕ್ಷೆ ಇದ್ದು, ಕಾರ್ತಿಕ್ ಬದಲು ಪಂತ್, ಅಕ್ಷರ್ ಬದಲು ಜಡೇಜಾ ಆಡುವುದು ಬಹುತೇಕ ಖಚಿತ. ಬೂಮ್ರಾ, ಭುವನೇಶ್ವರ್ ಬೌಲಿಂಗ್ ಪಡೆ ಮುನ್ನಡೆಸಲಿದ್ದಾರೆ. ಅಶ್‌ರ್‍ದೀಪ್ ಸಿಂಗ್ 2ನೇ, 3ನೇ ಟಿ20ಗೆ ಆಯ್ಕೆಯಾಗಿಲ್ಲ.
ಇನ್ನು ಜೋಸ್ ಬಟ್ಲರ್ ಪಡೆ ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಸುಧಾರಿತ ಪ್ರದರ್ಶನ ತೋರಲು ಕಾತರಿಸುತ್ತಿದೆ. ಬಹುಮುಖ್ಯವಾಗಿ ಆರಂಭಿಕ 10 ಓವರ್‌ಗಳಲ್ಲಿ ರನ್ ನಿಯಂತ್ರಿಸುವುದು ತಂಡಕ್ಕಿರುವ ಅತಿದೊಡ್ಡ ಸವಾಲು.
ರಡನೇ T20 ಅಂತರಾಷ್ಟ್ರೀಯ ಪಂದ್ಯ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಪಂದ್ಯದ ದಿನದಂದು ಹವಾಮಾನವು ಸ್ಪಷ್ಟವಾಗಿದ್ದು, ಟಿ20 ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ. ಹಗಲಿನಲ್ಲಿ ತಾಪಮಾನವು 11-23 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ವರದಿಯಾಗಿದೆ.
ಇಂಗ್ಲೆಂಡ್‌ನ ಕೋಟೆ' ಎಂದು ಕರೆಯಲ್ಪಡುವ ಎಡ್ಜ್‌ಬಾಸ್ಟನ್, ಬೌಲಿಂಗ್-ಸ್ನೇಹಿ ಮೈದಾನವಾಗಿದೆ. ಅಲ್ಲಿ ಬ್ಯಾಟರ್‌ಗಳು ಹೆಚ್ಚುವರಿ ಸ್ವಿಂಗ್‌ಗಳನ್ನು ಎಸೆತಗಳನ್ನು ಎದುರಿಸಬೇಕಾಗುತ್ತದೆ. ಮೊದಲ ಟಿ 20 ಭಾರತವು 198 ರನ್‌ಗಳ ಬೃಹತ್ ಮೊತ್ತವನ್ನು ಕಂಡರೆ, ಎರಡನೇ ಪಂದ್ಯವು ಕಡಿಮೆ ಸ್ಕೋರ್ ದಾಖಲಾಗುವ ಪಂದ್ಯವಾಗಬಹುದು. ಭಾರತದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಈಗಾಗಲೇ ಮೊದಲ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರನ್ನು ಎರಡನೇ ಪಂದ್ಯದಲ್ಲಿ ಸೇರಿಸಿಕೊಳ್ಳುವುದು ಹೆಚ್ಚುವರಿ ಬಲವನ್ನು ನೀಡುತ್ತದೆ. ಮತ್ತೊಂದೆಡೆ, ಜೋಸ್ ಬಟ್ಲರ್ ಅವರ ಕೈಯಲ್ಲಿ ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್ ಮತ್ತು ರೀಚ್ ಟೋಪ್ಲೆ ಸೇರಿದಂತೆ ಸಾಕಷ್ಟು ಆಯ್ಕೆಗಳಿವೆ. ಎರಡೂ ವಿಭಾಗಗಳಲ್ಲಿ ಕೆಲವು ಅನುಭವದ ಹೆಸರುಗಳನ್ನು ಪ್ರದರ್ಶಿಸಲಿರುವ ಅವರು ಭಾರತದ ಮುಂದೆ ಪ್ರಬಲ ಸವಾಲು ಒಡ್ಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಸತತ 13 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ನಾಯಕ ಎನಿಸಿಕೊಂಡ ರೋಹಿತ್ ಶರ್ಮ!
ದಾಖಲೆಯ ಸನಿಹ ಹಾರ್ದಿಕ್ ಪಾಂಡ್ಯ: ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಉರುಳಿಸಿ ಮಿಂಚಿರುವ ಹಾರ್ದಿಕ್ ಪಾಂಡ್ಯ, ಇನ್ನು ಮೂರು ವಿಕೆಟ್ ಉರುಳಿಸಿದರೆ, ಅಂತಾರಾಷ್ಟ್ರೀಯ ಟಿ20ಯಲ್ಲಿ 50 ವಿಕೆಟ್ ಸಾಧನೆ ಮಾಡಿದ ದಾಖಲೆ ಮಾಡಲಿದ್ದಾರೆ. ಇನ್ನೊಂದೆಡೆ ಎಜ್ ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ಆಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲೂ ಜಯ ಸಾಧಿಸಿದ ದಾಖಲೆ ಹೊಂದಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ, ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 50 ರನ್ ಗೆಲುವು
ಸಂಭವನೀಯ ಆಟಗಾರರ ಪಟ್ಟಿ:
ಭಾರತ: ರೋಹಿತ್(ನಾಯಕ), ಕೊಹ್ಲಿ, ಹೂಡಾ, ಸೂರ್ಯಕುಮಾರ್, ಪಂತ್, ಹಾರ್ದಿಕ್, ಜಡೇಜಾ, ಹರ್ಷಲ್/ಉಮ್ರಾನ್, ಭುವನೇಶ್ವರ್, ಬೂಮ್ರಾ, ಚಹಲ್.
ಇಂಗ್ಲೆಂಡ್: ರಾಯ್, ಬಟ್ಲರ್(ನಾಯಕ), ಮಲಾನ್, ಲಿವಿಂಗ್‌ಸ್ಟೋನ್, ಬ್ರೂಕ್, ಅಲಿ, ಸ್ಯಾಮ್ ಕರ್ರನ್, ಜೋರ್ಡನ್, ಮಿಲ್ಸ್, ರೀಸ್ ಟಾಪ್ಲೆ, ಪಾರ್ಕಿನ್‌ಸನ್.
ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.