ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಸೆಮಿಫೈನಲ್ ಕನಸು ಇನ್ನೂ ಜೀವಂತವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಶಾರ್ಜಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು, ಆಸ್ಟ್ರೇಲಿಯಾ ಎದುರು 9 ರನ್ ರೋಚಕ ಸೋಲು ಅನುಭವಿಸಿದೆ. ಈ ಮೂಲಕ ಸೆಮೀಸ್‌ಗೇರುವ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. ಇದೀಗ ಟೀಂ ಇಂಡಿಯಾದ ಸೆಮೀಸ್ ಭವಿಷ್ಯ ಇಂದು ನಡೆಯಲಿರುವ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಅವಲಂಬಿತವಾಗಿದೆ.
ಭಾರತ ಎದುರು ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಸತತ 4 ಗೆಲುವುಗಳೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್ ಪ್ರವೇಶಿಸಿದರೆ, ಇನ್ನೊಂದು ಸ್ಥಾನಕ್ಕಾಗಿ ಇದೀಗ ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕಡಿಮೆ ಅಂತರದ ಸೋಲು ಭಾರತದ ಸೆಮೀಸ್ ಕನಸನ್ನು ಜೀವಂತವಾಗಿರಿಸುವಂತೆ ಮಾಡಿದೆ.
undefined
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಪರ್ತ್‌ನಲ್ಲಿ ಭಾರತ vs ಭಾರತ ಎ ನಡುವೆ ಅಭ್ಯಾಸ ಪಂದ್ಯ!
ಶಾರ್ಜಾ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಅಸ್ಟ್ರೇಲಿಯಾ 151 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಅಲೀಸಾ ಹೀಲಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಗ್ರೇಸ್ ಹ್ಯಾರಿಸ್ 40 ರನ್ ಬಾರಿಸಿದರೆ, ತಾಹಿಲಾ ಮೆಗ್ರಾಥ್ ಹಾಗೂ ಎಲೈಸಿ ಪೆರ್ರಿ ಅಮೂಲ್ಯ 32 ರನ್ ಬಾರಿಸಿದರು. ಭಾರತ ಪರ ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಭಾರತ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು. ಹರ್ಮನ್‌ಪ್ರೀತ್ ಕೌರ್ ಅಜೇಯ 54 ರನ್ ಸಿಡಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲ್ಲಲು 14 ರನ್ ಅಗತ್ಯವಿತ್ತು. ಆದರೆ ಒತ್ತಡವನ್ನು ಸರಿಯಾಗಿ ನಿಭಾಯಿಸಲು ವಿಫಲವಾದ ಭಾರತ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿಗೆ ಶರಣಾಯಿತು.
ಇನ್ನು ಆಸೀಸ್ ಎದುರಿನ ಸೋಲಿನ ಹೊರತಾಗಿಯೂ ಭಾರತ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ. ಈಗ ಟೀಂ ಇಂಡಿಯಾದ ಸೆಮೀಸ್ ಅವಕಾಶ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.
ಇಂದು ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಒಂದು ವೇಳೆ ಪಾಕಿಸ್ತಾನ ತಂಡವು ಮೊದಲು ಬ್ಯಾಟ್ ಮಾಡಿ 53ಕ್ಕೂ ಕಡಿಮೆ ರನ್ ಅಂತರದಲ್ಲಿ ಜಯಿಸಿದರೆ ಭಾರತ ಅನಾಯಾಸವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.
ಇನ್ನು ಒಂದು ವೇಳೆ ಪಾಕ್ ತಂಡವು ಚೇಸಿಂಗ್ ತೆಗೆದುಕೊಂಡರೇ 55 ಎಸೆತ ಬಾಕಿ ಇರದಂತೆ ಗೆಲುವು ಸಾಧಿಸಬೇಕು.
ಒಂದು ವೇಳೆ ನ್ಯೂಜಿಲೆಂಡ್ ಪಾಕಿಸ್ತಾನ ತಂಡವು 53ಕ್ಕಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದರೆ. ಅಥವಾ 9.1 ಓವರ್(55 ಎಸೆತ) ಬಾಕಿ ಇರುವಂತೆಯೇ ಗೆಲುವು ಸಾಧಿಸಿದರೆ, ಭಾರತ ಹಾಗೂ ನ್ಯೂಜಿಲೆಂಡ್ ತಂಡವನ್ನು ನೆಟ್ ರನ್‌ರೇಟ್‌ನಲ್ಲಿ ಹಿಂದಿಕ್ಕಿ ಪಾಕಿಸ್ತಾನ ತಂಡವು ಸೆಮೀಸ್ ಪ್ರವೇಶಿಸಲಿದೆ
ಇನ್ನು ಒಂದು ವೇಳೆ ಪಾಕಿಸ್ತಾನ ಎದುರು ನ್ಯೂಜಿಲೆಂಡ್ ತಂಡವು ಗೆಲುವು ಸಾಧಿಸಿದರೆ, ಭಾರತ ಹಾಗೂ ಪಾಕಿಸ್ತಾನ ತಂಡಗಳ ಸೆಮೀಸ್ ಕನಸು ಭಗ್ನವಾಗಲಿದ್ದು, 'ಎ' ಗುಂಪಿನಲ್ಲಿ ಎರಡನೇ ತಂಡವಾಗಿ ಕಿವೀಸ್ ಪಡೆ ಸೆಮಿಫೈನಲ್ ಪ್ರವೇಶಿಸಲಿದೆ.