Ireland vs India 2nd T20I: ಸಂಜು, ರುತುರಾಜ್‌, ರಿಂಕು ಶೈನ್‌, ಐರ್ಲೆಂಡ್‌ ವಿರುದ್ಧ ಭಾರತ ಸರಣಿ ವಿನ್‌!

By Santosh NaikFirst Published Aug 20, 2023, 11:56 PM IST
Highlights


ಆತಿಥೇಯ ಐರ್ಲೆಂಡ್‌ ತಂಡವನ್ನು 2ನೇ ಟಿ20 ಪಂದ್ಯದಲ್ಲಿ 33 ರನ್‌ಗಳಿಂದ ಮಣಿಸಿದ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆಲುವು ಕಂಡಿದೆ.

ಡುಬ್ಲಿನ್‌ (ಆ.20): ಬ್ಯಾಟಿಂಗ್‌ ವೇಳೆ ರುತುರಾಜ್‌ ಗಾಯಕ್ವಾಡ್‌ ಆಕರ್ಷಕ ಅರ್ಧಶತಕ ಸಿಡಿಸಿದರೆ, ಕೊನೆಯ ಹಂತದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ರಿಂಕು ಸಿಂಗ್‌ ಅವರ ಸ್ಪೋಟಕ ಬ್ಯಾಟಿಂಗ್‌ನಿಂದ ಟೀಮ್‌ ಇಂಡಿಯಾ ಆತಿಥೇಯ ಐರ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 5 ವಿಕೆಟ್‌ಗೆ 185ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಬಳಿಕ ಐರ್ಲೆಂಡ್‌ ತಂಡವನ್ನು 8 ವಿಕೆಟ್‌ಗೆ 152 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಭಾರತ ತಂಡ  33 ರನ್‌ಗಳ ಗೆಲುವು ಕಂಡಿದೆ. ಅದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಸಾರಥ್ಯದ ಟೀಮ್‌ ಇಂಡಿಯಾ 2-0 ಮುನ್ನಡೆ ಕಂಡುಕೊಂಡಿದೆ. ಆರಂಭಿಕ ಆಟಗಾರ ಆಂಡಿ ಬರ್ಬಿರ್ನಿ 51 ಎಸೆತಗಳಲ್ಲಿ 72 ರನ್‌ ಬಾರಿಸುವ ಮೂಲಕ ಐರ್ಲೆಂಡ್‌ ಪರವಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಆದರೆ, ಜಸ್‌ಪ್ರೀತ್‌ ಬುಮ್ರಾ ನೇತೃತ್ವದಲ್ಲಿ ಭಾರತ ತಂಡ ನಡೆಸಿದ ಭರ್ಜರಿ ಬೌಲಿಂಗ್‌ ದಾಳಿಯ ಮುಂದೆ ತಂಡ ಮಂಕಾಯಿತು. ಕನ್ನಡಿಗ ಪ್ರಸಿದ್ಧ ಕೃಷ್ಣ ಐರ್ಲೆಂಡ್‌ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಡಬಲ್‌ಸ್ಟ್ರೈಕ್‌ ಆಘಾತ ನೀಡಿದ್ದರು. ಆ ಬಳಿಕ ರವಿ ಬಿಷ್ಣೋಯ್‌ ಹಾಗೂ ಆರ್ಶ್‌ದೀಪ್‌ ಸಿಂಗ್‌ ವಿಕೆಟ್‌ ಸಾಧನೆ ಮಾಡಿದರು.

ಭಾನುವಾರ ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪರವಾಗಿ ಬ್ಯಾಟಿಂಗ್‌ನಲ್ಲಿ ಗಮನಸೆಳೆದ ರುತುರಾಜ್‌ ಗಾಯಕ್ವಾಡ್‌ 43 ಎಸೆತಗಳಲ್ಲಿ 58 ರನ್‌ಗಳ ಇನ್ನಿಂಗ್ಸ್‌ ಆಡಿದ್ದಲ್ಲದೆ, ಸಂಜು ಸ್ಯಾಮ್ಸನ್‌ ಜೊತೆ 71 ರನ್‌ಗಳ ಪ್ರಮುಖ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಸಂಜು ಸ್ಯಾಮ್ಸನ್‌ 26 ಎಸೆತಗಳಲ್ಲಿ 40 ರನ್‌ ಸಿಡಿಸಿ ಮಿಂಚಿದರು. ಭಾರತ ತಂಡ ಕೊನೆಯಲ್ಲಿ ಲಯ ಕಳೆದುಕೊಂಡ ರೀತಿ ಕಾಣಿಸಿದರೂ, ರಿಂಕು ಸಿಂಗ್‌ 21 ಎಸೆತಗಳಲ್ಲಿ 38 ರನ್‌ಗಳ ಆಕರ್ಷಕ ಇನ್ನಿಂಗ್ಸ್‌ ಆಡಿ ಮಿಂಚಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಶಿವಂದುಬೆ ಅಜೇಯ 22 ರನ್‌ ಬಾರಿಸಿದರು. ಕೊನೆಯ 12 ಎಸೆತಗಳಲ್ಲಿ ಈ ಜೋಡಿ 42 ರನ್ ಚಚ್ಚುವ ಮೂಲಕ ಭಾರತ ತಂಡದ ಮೊತ್ತ 180ರ ಗಡಿ ಮುಟ್ಟುವಂತೆ ಮಾಡಿದರು. ಮೊದಲು ಬ್ಯಾಟಿಂಗ್‌ಗೆ ಮಾಡಿದ ಭಾರತಕ್ಕೆ ಎರಡನೇ ಓವರ್‌ನಿಂದ ರನ್‌ ಬರಲು ಆರಂಭಿಸಿದವು. 

ಟೀಮ್‌ ಇಂಡಿಯಾ ಪರವಾಗಿ ಟಿ20ಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ರಿಂಕು ಸಿಂಗ್‌ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್‌ ಮಾಡಿದರು. ಬೌಂಡರಿ ಸಿಕ್ಸರ್‌ಗಳ ಅಬ್ಬರದೊಂದಿಗೆ ಬ್ಯಾಟಿಂಗ್‌ ಮುಂದುವರಿಸಿದರೆ, ಇವರಿಗೆ ರಿಂಕು ಸಿಂಗ್‌ ಉತ್ತಮ ಸಾಥ್‌ ನೀಡಿದರು. 

India vs Ireland: ಬುಮ್ರಾ ನೇತೃತ್ವದ ಭಾರತಕ್ಕೆ ಟಿ20 ಸರಣಿ ಜಯದ ಗುರಿ..!

ಇನ್ನು ಐರ್ಲೆಂಡ್‌ ತಂಡದ ಬ್ಯಾಟಿಂಗ್‌ಗೆ ಆರಂಭದಲ್ಲಿಯೇ ಪ್ರಸಿದ್ಧಕೃಷ್ಣ ಪೆಟ್ಟು ನೀಡಿದರು. ಆರ್ಶ್‌ದೀಪ್‌ ಸಿಂಗ್‌ ಅವರ 2ನೇ ಓವರ್‌ನಲ್ಲಿ ಬರ್ಬಿರ್ನಿ ಎರಡು ಬೌಂಡರಿಗಳನ್ನು ಸಿಡಿಸಿದರೆ, ಮರು ಓವರ್‌ನಲ್ಲಿಯೇ ಪ್ರಸಿದ್ಧ ಕೃಷ್ಣ ಪೌಲ್‌ ಸ್ಟಿರ್ಲಿಂಗ್‌ ಹಾಗೂ ಲೋರ್ಕನ್‌ ಟಕ್ಕರ್‌ ಅವರ ವಿಕೆಟ್ ಉರುಳಿಸಿದರು. ಇನ್ನು ಪವರ್‌ ಪ್ಲೇ ಅವಧಿಯಲ್ಲಿಯೇ ರವಿ ಬಿಷ್ಣೋಯಿ ಇನ್ನೊಂದು ವಿಕೆಟ್‌ ಉರುಳಿಸಿ ಐರ್ಲೆಂಡ್‌ಗೆ ಆಘಾತ ನೀಡಿದ್ದರು.

ಐರ್ಲೆಂಡ್ ಎದುರಿನ ಎರಡನೇ T20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್..?

click me!