ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟು ದಾಖಲೆ ಬರೆದ ಭಾರತ

Published : Feb 26, 2026, 08:53 PM ISTUpdated : Feb 26, 2026, 09:02 PM IST
hardik pandya and suryakumar yadav plays shot

ಸಾರಾಂಶ

ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟ ಭಾರತ, ಸೂಪರ್ 8 ಮೊದಲ ಪಂದ್ಯದ ಸೋಲಿನಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಜಿಂಬಾಬ್ವೆ ವಿರುದ್ದ ಭಾರತ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದೆ. 

ಚೆನ್ನೈ (ಫೆ.26) ಟಿ20 ವಿಶ್ವಕಪ್ 2026ರ ಇತಿಹಾಸದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ, ಜಿಂಬಾಬ್ವೆ ವಿರುದ್ದ 256 ರನ್ ಸಿಡಿಸಿದೆ. ಇದು ಈ ವಿಶ್ವಕಪ್ ಟೂರ್ನಿಯಲ್ಲಿ ಅತೀ ಗರಿಷ್ಠ ಸ್ಕೋರ್ ಸಿಡಿಸಿದ ದಾಖಲೆ ಬರೆದಿದೆ. ಸ್ಫೋಟಕ ಹಾರ್ದಿಕ್ ಪಾಂಡ್ಯ 23 ಎಸೆತದಲ್ಲಿ ಹಾಫ್ ಸೆಂಚುರಿ, ಅಭಿಷೇಕ್ ಶರ್ಮಾ 26 ಎಸೆತದಲ್ಲಿ ಹಾಫ್ ಸೆಂಚುರಿ ಸೇರಿದಂತೆ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ 4 ವಿಕೆಟ್ ನಷ್ಟಕ್ಕೆ 256 ರನ್ ಸಿಡಿಸಿದೆ. ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದು ಗರಿಷ್ಠ ಸ್ಕೋರ್ ಆಗಿದ್ದರೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಎರಡನೇ ಗರಿಷ್ಠ ಸ್ಕೋರ್ ಆಗಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್

  • ಶ್ರೀಲಂಕಾ 260/6 vs ಕೀನ್ಯಾ, 2007
  • ಭಾರತ 256/4 vs ಜಿಂಬಾಬ್ವೆ 2006
  • ವೆಸ್ಟ್ ಇಂಡೀಸ್ 254/6 vs ಜಿಂಬಾಬ್ವೆ 2026
  • ಐರ್ಲೆಂಡ್ 235 235/5 vs ಓಮನ್ 2026

ಅಬ್ಬರದ ಬ್ಯಾಟಿಂಗ್

ಭಾರತ ಟಾಸ್ ಸೋತು ಬ್ಯಾಟಿಂಗ್ ಇಳಿದಿತ್ತು. ಸೆಮಿಫೈನಲ್ ಆಸೆ ಜೀವಂತವಾಗಿಡಲು ಭಾರತಕ್ಕೆ ಈ ಪಂದ್ಯ ಭಾರಿ ಅಂತರದ ಗೆಲುವು ಅನಿವಾರ್ಯವಾಗಿದೆ. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭದ ಮೂಲಕ ಭಾರತ ಇನ್ನಿಂಗ್ಸ್ ಆರಂಭಗೊಂಡಿತು. ಆದರೆ ಸಂಜು ಸ್ಯಾಮ್ಸನ್ 24 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಕೇವಲ 26 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು.

ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಜೊತೆಯಾಟ ಟೀಂ ಇಂಡಿಯಾ ರನ್ ವೇಗ ಮತ್ತಷ್ಟು ಹೆಚ್ಚಿಸಿತು. ಆದರೆ ಇಶಾನ್ ಕಿಶನ್ 38 ರನ್ ಸಿಡಿಸಿ ಔಟಾದರು. ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡರೂ ರನ್ ರೇಟ್ ಉತ್ತಮವಾಗಿತ್ತು. ಇತ್ತ ಅಭಿಷೇಕ್ ಶರ್ಮಾ 55 ರನ್ ಸಿಡಿಸಿ ನಿರ್ಗಮಸಿದರು.

ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಟೀಂ ಇಂಡಿಯಾದ ರನ್ ಹೆಚ್ಚಿಸಿತು. ಆದರೆ ಸೂರ್ಯಕುಮಾರ್ ಯಾದವ್ 33 ರನ್ ಸಿಡಿಸಿ ಔಟಾದರು. ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಭಾರತಕ್ಕೆ ಬಿಗ್ ಸ್ಕೋರ್ ತಂದುಕೊಟ್ಟಿತು. ಹಾರ್ದಿಕ್ ಪಾಂಡ್ಯ ಕೇವಲ 23 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ತಿಲಕ್ ವರ್ಮಾ 16 ಎಸೆತದಲ್ಲಿ ಅಜೇಯ 44 ರನ್ ಸಿಡಿಸಿದರು.

ಭಾರತ 6 ಬ್ಯಾಟರ್ 150 ಪ್ಲಸ್ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂದ್ ಮಾಡಿದ್ದಾರೆ. ವಿಶೇಷ ಅಂದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ 6 ಬ್ಯಾಟರ್ 20 ಪ್ಲಸ್ ರನ್ ಜೊತೆಗೆ 150 ಪ್ಲಸ್ ಸ್ಟ್ರೈಕ್ ರೇಟ್ ಜೊತೆ ಅಬ್ಬರಿಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Dew Cure: ಚೆಪಾಕ್‌ನಲ್ಲಿ ಇಬ್ಬನಿ ನಿಯಂತ್ರಿಸಲು ಅಮೆರಿಕದಿಂದ ಆಮದು ಮಾಡಿಕೊಂಡ ಕೆಮಿಕಲ್‌ ಬಳಸಿದ TNCA!
ಅರ್ಜುನ್ ತೆಂಡೂಲ್ಕರ್ ಸಾನಿಯಾ ರೊಮ್ಯಾನ್ಸ್ ಶುರುವಾಗಿದ್ದು ಹೇಗೆ? ಅಕ್ಕ ಸಾರಾ ನೆರವು ಬಹಿರಂಗ