ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ. ತಿಲಕ್ ವರ್ಮಾ ಸಿಡಿಸಿದ 51 ರನ್ ನೆರವಿನಿಂದ ಭಾರತ 7 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿದೆ.
ಗಯಾನ(ಆ.06) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ ರೋಚಕ ಘಟ್ಟ ತಲುಪಿದೆ. ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಭಾರತ ವಿಫಲಗೊಂಡಿದೆ. ತಿಲಕ್ ವರ್ಮಾ ಸಿಡಿಸಿದ ಅರ್ಧಶಕ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿದೆ. ಇಶಾನ್ ಕಿಶನ್ 27 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಸಿಡಿಸಿದ 24 ರನ್ ಹೊರತುಪಡಿಸಿದರೆ, ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು. ಆದರೆ ಶುಭಮನ್ ಗಿಲ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಗಿಲ್ ಕೇವಲ 7 ರನ್ ಸಿಡಿಸಿದರೆ, ಸೂರ್ಯಕುಮಾರ್ ಯಾದವ್ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಇಶಾನ್ ಕಿಶನ್ ಹೋರಾಟ 27ರನ್‌ಗಳಿಗೆ ಅಂತ್ಯಗೊಂಡಿತು. ಸಂಜು ಸ್ಯಾಮ್ಸನ್ 7 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.
ತಿಲಕ್ ವರ್ಮಾ ದಿಟ್ಟ ಹೋರಾಟ ನೀಡಿದರೆ, ಇತರರಿಂದ ಯಾವುದೇ ಸಾಥ್ ಸಿಗಲಿಲ್ಲ. ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ತಿಲಕ್ ವರ್ಮಾ 51 ರನ್ ಸಿಡಿಸಿ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಹೋರಾಟ ಸಾಕಾಗಲಿಲ್ಲ. ಹಾರ್ದಿಕ್ 24 ರನ್ ಸಿಡಿಸಿ ಔಟಾದರು.ರವಿ ಬಿಶ್ನೋಯ್ ಅಜೇಯ 8 ರನ್ ಹಾಗೂ ಅರ್ಶದೀಪ್ ಸಿಂಗ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಕ್ಕೆ 152 ರನ್ ಸಿಡಿಸಿತು.