* ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
* ಎರಡನೇ ಏಕದಿನ ಪಂದ್ಯಕ್ಕೆ ತಂಡ ಕೂಡಿಕೊಂಡ ಕೆ.ಎಲ್. ರಾಹುಲ್. ಮಯಾಂಕ್ ಅಗರ್‌ವಾಲ್
* ಈಗಾಗಲೇ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ
ಅಹಮದಾಬಾದ್(ಫೆ.08): ಕ್ವಾರಂಟೈನ್ ಮುಕ್ತಾಯಗೊಳಿಸಿದ ಭಾರತದ ಉಪನಾಯಕ ಕೆ.ಎಲ್.ರಾಹುಲ್ (KL Rahul), ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್ (Mayank Agarwal) ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಕಠಿಣ ಅಭ್ಯಾಸ ನಡೆಸಿದರು. ವೆಸ್ಟ್‌ಇಂಡೀಸ್ ವಿರುದ್ಧ ಬುಧವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಈ ಇಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ. ಮಯಾಂಕ್, ನಾಯಕ ರೋಹಿತ್ ಶರ್ಮಾ (Rohit Sharma) ಜೊತೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದ್ದು, ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.
ವೈಯಕ್ತಿಕ ಕಾರಣದಿಂದ ರಾಹುಲ್ ಮೊದಲ ಪಂದ್ಯಕ್ಕೆ ಗೈರಾಗಿದ್ದರು. ತಂಡದಲ್ಲಿ ಹಲವರಿಗೆ ಕೋವಿಡ್ ತಗುಲಿದ ಕಾರಣ, ಮಯಾಂಕ್ ಅಗರ್‌ವಾಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಇಬ್ಬರೂ 3 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೇ ವೇಳೆ ವೇಗಿ ನವ್‌ದೀಪ್ ಸೈನಿ ಸಹ ಸೋಮವಾರ ಅಭ್ಯಾಸ ನಡೆಸಿದರು. ಮೂವರು ನೆಟ್ಸ್‌ನಲ್ಲಿ ಬೆವರಿಳಿಸುವ ಫೋಟೋಗಳನ್ನು ಬಿಸಿಸಿಐ ಟ್ವೀಟ್ ಮಾಡಿದೆ.
undefined
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಘಟಿತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (Team India) 1-0 ಮುನ್ನಡೆ ಸಾಧಿಸಿದೆ. ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 176 ರನ್‌ಗಳಿಗೆ ಕಟ್ಟಿಹಾಕಿದ ಭಾರತ ತಂಡವು ಆ ಬಳಿಕ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. 4 ವಿಕೆಟ್ ಕಬಳಿಸಿ ಮಿಂಚಿದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Look who are here! 🙌
The trio has joined the squad and sweated it out in the practice session today. 💪 | | pic.twitter.com/Nb9Gmkx98f
‘19 ಪ್ಲಸ್’ ವಿಭಾಗ ಆರಂಭಕ್ಕೆ ಬಿಸಿಸಿಐ-ಎನ್‌ಸಿಎ ಚಿಂತನೆ
ನವದೆಹಲಿ: ಕಳೆದ ಒಂದು, ಒಂದೂವರೆ ದಶಕದಲ್ಲಿ ಅಂಡರ್-19 ವಿಶ್ವಕಪ್ (ICC U-19 World Cup) ಇಲ್ಲವೇ ಏಷ್ಯಾಕಪ್ ತಂಡಗಳಲ್ಲಿ ಆಡಿ ಮಿಂಚಿದ ಅನೇಕ ಆಟಗಾರರು ಆ ಬಳಿಕ ಕಣ್ಮರೆಯಾದ ಉದಾಹರಣೆಗಳಿವೆ. ಅಂಡರ್-19 ಹಂತ ದಾಟಿದ ಬಳಿಕ ಕ್ರಿಕೆಟ್‌ನಲ್ಲೇ ಬದುಕು ಕಟ್ಟಿಕೊಟ್ಟಲು ಆಟಗಾರರಿಗೆ ಅನುಕೂಲ ಮಾಡಿಕೊಡಲು ಮುಂದಾಗಿರುವ ಬಿಸಿಸಿಐ (BCCI) ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ), ‘19 ಪ್ಲಸ್’ ಎನ್ನುವ ವಿಭಾಗ ಆರಂಭಿಸಲು ಚಿಂತನೆ ನಡೆಸುತ್ತಿದೆ.
ICC U-19 World Cup: ಅಂಡರ್ 19 ವಿಶ್ವಕಪ್ ಚಾಂಪಿಯನ್ ಭಾರತಕ್ಕೆ ಬಿಸಿಸಿಐ ಬಂಪರ್ ಬಹುಮಾನ..!
ಸದ್ಯ ಅಂಡರ್-19 ಬಳಿಕ ರಾಜ್ಯ ಸಂಸ್ಥೆಗಳು ಅಂಡರ್-25 ತಂಡಗಳಿವೆ. ಆದರೆ ಎಲ್ಲಾ ಆಟಗಾರರಿಗೆ ಈ ತಂಡದಲ್ಲಿ ತಕ್ಷಣಕ್ಕೆ ಸ್ಥಾನ ಸಿಗುವುದಿಲ್ಲ. ಹೀಗಾಗಿ, ‘19 ಪ್ಲಸ್’ ವಿಭಾಗ ಆರಂಭಿಸಿ, ಪ್ರತಿಭೆಗಳನ್ನು ಪೋಷಿಸಿ, ಅವರನ್ನು ರಾಜ್ಯ ತಂಡಗಳಿಗೆ ಆಯ್ಕೆ ಆಗುವಂತೆ ಮಾಡಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ.
ಶೀಘ್ರ ಮಹಿಳಾ ಐಪಿಎಲ್: ಜಯ್ ಶಾ
ನವದೆಹಲಿ: ಬಹುಬೇಡಿಕೆಯ ಪೂರ್ಣಪ್ರಮಾಣದ ಮಹಿಳಾ ಐಪಿಎಲ್ ಟೂರ್ನಿಯನ್ನು ಶೀಘ್ರದಲ್ಲೇ ಆರಂಭಿಸಲಿದ್ದೇವೆ ಎಂದು ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ (Jay Shah) ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮವೊಂದರ ಪ್ರಶ್ನೆಗೆ ಇ-ಮೇಲ್ ಮೂಲಕ ಉತ್ತರಿಸಿರುವ ಶಾ, ‘ಬಿಸಿಸಿಐ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಮಹಿಳಾ ಟಿ20 ಲೀಗ್‌ಗೆ ಅತ್ಯುತ್ತಮ ಜನಬೆಂಬಲವಿದ್ದು, ಸದ್ಯದಲ್ಲೇ ಟೂರ್ನಿಗೆ ಚಾಲನೆ ಸಿಗಲಿದೆ’ ಎಂದಿದ್ದಾರೆ.
ಆಸ್ಪ್ರೇಲಿಯಾದ ಬಿಗ್‌ಬ್ಯಾಶ್, ಇಂಗ್ಲೆಂಡ್‌ನ ದಿ ಹಂಡ್ರೆಡ್ ರೀತಿ ಮಹಿಳಾ ಐಪಿಎಲ್‌ಗೆ ಭಾರತೀಯ ಆಟಗಾರ್ತಿಯರು ಸೇರಿದಂತೆ ಹಲವರಿಂದ ಬೇಡಿಕೆ ಇದೆ. 2023ರಲ್ಲಿ ಟೂರ್ನಿ ಶುರುವಾಗಬಹುದು ಎನ್ನಲಾಗಿದೆ.