Virat Kohli 100 Test: ಸ್ಟೇಡಿಯಂಗೆ ಪ್ರೇಕ್ಷಕರ ಪ್ರವೇಶಕ್ಕೆ ಸಿಕ್ತು ಅನುಮತಿ..!

Suvarna News   | Asianet News
Published : Mar 02, 2022, 09:20 AM ISTUpdated : Mar 02, 2022, 09:48 AM IST
Virat Kohli 100 Test: ಸ್ಟೇಡಿಯಂಗೆ ಪ್ರೇಕ್ಷಕರ ಪ್ರವೇಶಕ್ಕೆ ಸಿಕ್ತು ಅನುಮತಿ..!

ಸಾರಾಂಶ

* ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಬಿಸಿಸಿಐ * ಮೊಹಾಲಿಯಲ್ಲಿ ನಡೆಯಲಿರುವ ಲಂಕಾ ಎದುರಿನ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ * ಮೊಹಾಲಿ ಟೆಸ್ಟ್ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ ನೂರನೇ ಟೆಸ್ಟ್ ಪಂದ್ಯ ಎನಿಸಲಿದೆ

ನವದೆಹಲಿ(ಮಾ.02): ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾದ ಬೆನ್ನಲ್ಲೇ ಮಾರ್ಚ್‌ 4ರಿಂದ ಮೊಹಾಲಿಯಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್‌ಗೆ ಶೇ.50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿ ನೀಡಲು ಬಿಸಿಸಿಐ (BCCI) ನಿರ್ಧರಿಸಿದೆ. ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಖಜಾಂಚಿ ಆರ್‌.ಪಿ.ಸಿಂಗ್ಲಾ ಮಂಗಳವಾರ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ಪಂದ್ಯವು ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರ 100ನೇ ಟೆಸ್ಟ್‌ ಸಹ ಆಗಲಿದೆ. ಕೋವಿಡ್‌ (COVID 19) ಕಾರಣ ನೀಡಿ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಿದ್ದ ಬಿಸಿಸಿಐ ವಿರುದ್ಧ ಟ್ವೀಟರ್‌ ಸೇರಿದಂತೆ ವಿವಿಧ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದರು. 

ನಾಯಕತ್ವ ವಿಚಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಹಾಗೂ ಕೊಹ್ಲಿ ನಡುವೆ ಮನಸ್ತಾಪ ಏರ್ಪಟ್ಟಿದೆ ಎನ್ನುವ ಗುಸುಗುಸು ಇನ್ನೂ ಕಡಿಮೆಯಾಗದ ಬೆನ್ನಲ್ಲೇ ಕೊಹ್ಲಿ ವಿರುದ್ಧ ಬಿಸಿಸಿಐ ಷಡ್ಯಂತ್ರ ನಡೆಸುತ್ತಿದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಎಚ್ಚೆತ್ತುಕೊಂಡಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಪಂದ್ಯದ ಟಿಕೆಟ್‌ಗಳ ಮಾರಾಟ ಬುಧವಾರ (ಮಾ.2ರಿಂದ) ಆನ್‌ಲೈನ್‌ನಲ್ಲಿ ಆರಂಭಿಸಲು ಪಿಸಿಎಗೆ ಸೂಚಿಸಿರುವ ಬಿಸಿಸಿಐ, ಬಾಕ್ಸ್‌ ಆಫೀಸ್‌ನಲ್ಲೂ ಟಿಕೆಟ್‌ ವಿತರಿಸಲು ತುರ್ತಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದೆ. ಜೊತೆಗೆ ಪ್ರೇಕ್ಷಕರು ಪಂದ್ಯಕ್ಕೆ ಆಗಮಿಸಿದಾಗ ನೀಡಬೇಕಿರುವ ಸೌಲಭ್ಯ, ಭದ್ರತೆ ಸೇರಿ ಇತರ ವ್ಯವಸ್ಥೆಗಳ ಕಡೆ ಗಮನ ಹರಿಸುವಂತೆ ಪಿಸಿಎ ಅಧಿಕಾರಿಗಳಿಗೆ ಬಿಸಿಸಿಐ ಸೂಚನೆ ನೀಡಿದೆ. 25,000 ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣಕ್ಕೆ ನಿತ್ಯ 12,500 ಮಂದಿಗೆ ಪ್ರವೇಶ ಸಿಗಲಿದೆ.

ಈ ಮೊದಲು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಸೇರಿದಂತೆ ಹಲವು ಕ್ರಿಕೆಟ್‌ ಪಂಡಿತರು, ವಿರಾಟ್ ಕೊಹ್ಲಿಯವರ ನೂರನೇ ಟೆಸ್ಟ್ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸುವ ಬಿಸಿಸಿಐ ತೀರ್ಮಾನಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಯಾವುದೇ ಪಂದ್ಯವನ್ನು ಆಡುವಾಗಲು, ಅದನ್ನು ನೋಡಲು ಮೈದಾನದಲ್ಲಿ ಪ್ರೇಕ್ಷಕರಿರಬೇಕು. ಇತ್ತೀಚೆಗಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡವು (Indian Cricket Team) ಪ್ರೇಕ್ಷಕರಿಲ್ಲದೇ ಕ್ರಿಕೆಟ್ ಆಡುತ್ತಿದೆ. ಓರ್ವ ನಟನೇ ಆಗಿರಲಿ ಅಥವಾ ಕ್ರಿಕೆಟಿಗನೇ ಆಗಿರಲಿ, ಆತ ತನ್ನ ಜನರ ಮುಂದೆ ಪ್ರದರ್ಶನ ತೋರಲು ಬಯಸುತ್ತಾನೆ. 100ನೇ ಟೆಸ್ಟ್ ಪಂದ್ಯವನ್ನಾಡುವುದು ತುಂಬಾ ವಿಶೇಷವಾದದ್ದು. ವಿರಾಟ್ ಕೊಹ್ಲಿಯವರ ನೂರನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿರುವುದಿಲ್ಲ ಎನ್ನುವ ವಿಚಾರ ತಿಳಿದು ಬೇಸರವಾಯಿತು. ಆದರೆ ಮಹತ್ವದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನಿಸುತ್ತಿದೆ. ಯಾಕೆಂದರೆ ಮೊಹಾಲಿಯಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ತಿಳಿಸಿದ್ದರು.

Ind vs SL ವಿರಾಟ್ ಕೊಹ್ಲಿ 100ನೇ ಟೆಸ್ಟ್‌ಗಿಲ್ಲ ಪ್ರೇಕ್ಷಕರು; ಅಭಿಮಾನಿಗಳ ಆಕ್ರೋಶ..!

ಈ ವರೆಗೂ 99 ಟೆಸ್ಟ್‌ ಆಡಿರುವ ವಿರಾಟ್‌ ಕೊಹ್ಲಿ, 7,962 ರನ್‌ ಕಲೆಹಾಕಿದ್ದಾರೆ. ಮಾರ್ಚ್‌ 12ರಿಂದ ಬೆಂಗಳೂರಲ್ಲಿ ಭಾರತ-ಶ್ರೀಲಂಕಾ 2ನೇ ಟೆಸ್ಟ್‌ ನಡೆಯಲಿದೆ. ಆ ಪಂದ್ಯಕ್ಕೂ ಶೇ.50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣದೊಳಕ್ಕೆ ಪ್ರವೇಶ ಸಿಗಲಿದೆ.

ಕಿಂಗ್ ಕೊಹ್ಲಿ ನೂರನೇ ಶತಕದ ನಿರೀಕ್ಷೆಯಲ್ಲಿ ವಿರಾಟ್ ಅಭಿಮಾನಿಗಳು:

ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಲು ಪದೇ ಪದೇ ವಿಫಲರಾಗುತ್ತಿದ್ದಾರೆ. 2019ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಲು ವಿಫಲರಾಗುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ನೂರನೇ ಟೆಸ್ಟ್ ಪಂದ್ಯದಲ್ಲಾದರೂ ಶತಕ ಬಾರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲು ಪಂಜಾಬ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ನಾನು ಸಂಸ್ಥೆಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕೊಹ್ಲಿಯ ಐತಿಹಾಸಿಕ 100ನೇ ಟೆಸ್ಟ್‌ ಪಂದ್ಯದ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ. ಚಾಂಪಿಯನ್‌ ಕೊಹ್ಲಿಗೆ ಶುಭ ಹಾರೈಕೆಗಳು.- ಜಯ್‌ ಶಾ ಬಿಸಿಸಿಐ ಕಾರದರ್ಶಿ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌