Ind vs SL: 3ನೇ ಪಂದ್ಯದಲ್ಲಿ ಲಂಕಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

By Naveen KodaseFirst Published Jan 15, 2023, 1:08 PM IST
Highlights

3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಉಭಯ ತಂಡಗಳಲ್ಲಿ ತಲಾ 2 ಬದಲಾವಣೆ

ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲಿಕ್‌ಗೆ ರೆಸ್ಟ್

ತಿರುವನಂತಪುರಂ(ಜ.15): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ತಲಾ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, ಇದೀಗ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಕೊನೆಯ ಏಕದಿನ ಪಂದ್ಯಕ್ಕೆ ಇಲ್ಲಿನ ಗ್ರೀನ್‌ಫೀಲ್ಡ್‌ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.  ಭಾರತ ತಂಡದಲ್ಲಿ ವೇಗಿ ಉಮ್ರಾನ್ ಮಲಿಕ್ ಹಾಗೂ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ವಾಷಿಂಗ್ಟನ್ ಸುಂದರ್ ಹಾಗೂ ಸೂರ್ಯಕುಮಾರ್ ಯಾದವ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಶ್ರೀಲಂಕಾ ತಂಡದಲ್ಲಿ ಧನಂಜಯ್ ಡಿ ಸಿಲ್ವಾ ಬದಲಿಗೆ ಆಸೀನ್ ಬಂಡಾರ ಹಾಗೂ ವೆಲಲೆಗೆ ಬದಲಿಗೆ ಜೆಫ್ರಿ ವೆಂಡರ್ಸೆ ತಂಡಕೂಡಿಕೊಂಡಿದ್ದಾರೆ.

3RD ODI. India won the toss and elected to bat. https://t.co/muZgJH3f0i

— BCCI (@BCCI)

ಭಾರತ ತಂಡವು ಈ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದೆ. ಇದೀಗ ಹಾರ್ದಿಕ್ ಪಾಂಡ್ಯ ಬದಲಿಗೆ ಹೆಚ್ಚುವರಿಯಾಗಿ ಸೂರ್ಯಕುಮಾರ್ ಯಾದವ್ ತಂಡ ಕೂಡಿಕೊಂಡಿರುವುದು ಟೀಂ ಇಂಡಿಯಾ ಬ್ಯಾಟಿಂಗ್ ಪಡೆಯನ್ನು ಮತ್ತಷ್ಟು ಬಲಾಢ್ಯಗೊಳಿಸಿದೆ. ಇನ್ನು ವೇಗಿ ಉಮ್ರಾನ್ ಮಲಿಕ್‌ಗೆ ವಿಶ್ರಾಂತಿ ನೀಡಲಾಗಿದ್ದು, ಮತ್ತೋರ್ವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ. ಸುಂದರ್‌ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ. 

ಇನ್ನು ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಶ್ರೀಲಂಕಾ ತಂಡವು ಇದೀಗ ಭಾರತ ಪ್ರವಾಸದ ಕೊನೆಯ ಪಂದ್ಯವನ್ನು ಗೆದ್ದು, ಗೆಲುವಿನೊಂದಿಗೆ ತನ್ನ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ. ನಿಸ್ಸಾಂಕ, ಕುಸಾಲ್ ಮೆಂಡೀಸ್ ಸೇರಿದಂತೆ ಹಿರಿಯ ಆಟಗಾರರು ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಬೌಲರ್‌ಗಳು ಆರಂಭದಲ್ಲಿ ಸಿಗುವ ಯಶಸ್ಸನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿರುವುದು ತಂಡದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ.

Ind vs SL: ಲಂಕಾ ಎದುರು ರೋಹಿತ್ ಶರ್ಮಾ ಪಡೆಗೆ ಕ್ಲೀನ್‌ ಸ್ವೀಪ್‌ ಗುರಿ

ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯವು ದೊಡ್ಡ ಇನಿಂಗ್ಸ್‌ ಕಾದಾಟಕ್ಕೆ ಸಾಕ್ಷಿಯಾಗಿತ್ತು. ಇನ್ನು ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯವು ಮತ್ತೊಂದು ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. 

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಸೂರ್ಯಕುಮಾರ್ ಯಾದವ್, ಅಕ್ಷರ್‌ ಪಟೇಲ್, ವಾಷಿಂಗ್ಟನ್ ಸುಂದರ್ ಕುಲ್ದೀಪ್‌ ಯಾದವ್, ಅಶ್‌ರ್‍ದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್‌.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಆವಿಷ್ಕಾ ಫೆರ್ನಾಂಡೋ ಫರ್ನಾಂಡೋ, ಕುಸಾಲ್‌ ಮೆಂಡಿಸ್, ಚರಿತ್ ಅಸಲಂಕಾ, ಅಸೀನ್ ಬಂಡಾರ, ದಶುನ್ ಶಾನಕ(ನಾಯಕ), ವನಿಂದು ಹಸರಂಗ, ಜೆಫ್ರಿ ವೆಂಡರ್‌ಸೆ, ಚಮಿಕಾ ಕರುಣರತ್ನೆ, ಕಸುನ್ ರಜಿತ, ಲಹಿರು ಕುಮಾರ್.

ಪಂದ್ಯ: ಮಧ್ಯಾಹ್ನ 1.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

click me!