Ind vs SL: ಲಂಕಾ ಎದುರು ರೋಹಿತ್ ಶರ್ಮಾ ಪಡೆಗೆ ಕ್ಲೀನ್‌ ಸ್ವೀಪ್‌ ಗುರಿ

Published : Jan 15, 2023, 09:40 AM IST
Ind vs SL: ಲಂಕಾ ಎದುರು ರೋಹಿತ್ ಶರ್ಮಾ ಪಡೆಗೆ ಕ್ಲೀನ್‌ ಸ್ವೀಪ್‌ ಗುರಿ

ಸಾರಾಂಶ

ಭಾರತ-ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ತಿರುವನಂತಪುರಂ ಆತಿಥ್ಯ ಈಗಾಗಲೇ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ಭಾರತ ಸರಣಿ ಕ್ಲೀನ್‌ ಸ್ವೀಪ್‌ ಮಾಡಲು ಹಾತೊರೆಯುತ್ತಿರುವ ರೋಹಿತ್ ಶರ್ಮಾ ಪಡೆ

ತಿರುವನಂತಪುರಂ(ಜ.15): ಎಲ್ಲಾ ಮಾದರಿ ಸೇರಿ ಒಟ್ಟು 26 ಯತ್ನಗಳಲ್ಲಿ ಭಾರತದಲ್ಲಿ ದ್ವಿಪಕ್ಷೀಯ ಸರಣಿ ಗೆಲ್ಲಲು ಶ್ರೀಲಂಕಾಕ್ಕೆ ಸಾಧ್ಯವಾಗಿಲ್ಲ. ಈಗಾಗಲೇ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದಿರುವ ಕಾರಣ, ಭಾನುವಾರ ಇಲ್ಲಿನ ಗ್ರೀನ್‌ ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವು ಹೆಚ್ಚು ಮಹತ್ವ ಪಡೆದಿಲ್ಲ. ಆದರೂ ವಿಶ್ವಕಪ್‌ ವರ್ಷವಾಗಿರುವ ಕಾರಣ ಪ್ರತಿ ತಂಡವೂ ಸಿಗುವ ಪ್ರತಿಯೊಂದು ಅವಕಾಶವನ್ನೂ ಸದ್ಬಳಕೆ ಮಾಡಿಕೊಳ್ಳಲು ಇಚ್ಛಿಸಲಿವೆ.

ಟೀಂ ಇಂಡಿಯಾ ತನ್ನ ರಣತಂತ್ರ ಹಾಗೂ ಆಡುವ ಹನ್ನೊಂದರ ಬಳಗವನ್ನು ‘ಫೈನ್‌ ಟ್ಯೂನ್‌’ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿದಂತೆ ತನ್ನ ಅಗ್ರ 3 ಆಟಗಾರರು ಆಕ್ರಮಣಕಾರಿ ಆಟ ಮುಂದುವರಿಸಬೇಕಾ? ಮಣಿಕಟ್ಟು ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ನಡುವೆ ತಂಡದ ಮೊದಲ ಆಯ್ಕೆ ಯಾರು? ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ಉಮ್ರಾನ್‌ ಮಲಿಕ್‌ ಸಿದ್ಧರಿದ್ದಾರಾ? ಹೀಗೆ ಕೆಲ ಪ್ರಶ್ನೆಗಳಿಗೆ ಭಾರತ ಉತ್ತರ ಹುಡುಕಿಕೊಳ್ಳುವ ಯತ್ನ ಮುಂದುವರಿಸಲಿದೆ.

ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮದ್‌ ಶಮಿ ತಂಡದ ಬೌಲಿಂಗ್‌ ಪಡೆಯನ್ನು ಮುನ್ನಡೆಸುತ್ತಿದ್ದರೂ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ಮೊಹಮದ್‌ ಸಿರಾಜ್‌. 12ರ ಸರಾಸರಿಯಲ್ಲಿ 5 ವಿಕೆಟ್‌ ಕಿತ್ತಿರುವ ಸಿರಾಜ್‌, ಕೇವಲ 4.73ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ. ಮುಂಬರುವ ಆಸ್ಪ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್‌ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಶಮಿಗೆ ವಿಶ್ರಾಂತಿ ನೀಡಬಹುದು.

ಕಿವೀಸ್ ಎದುರಿನ ಟಿ20 ಸರಣಿಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿಲ್ಲ ಸ್ಥಾನ..!

ಅನಂತಪದ್ಮನಾಭನ ದರ್ಶನ ಪಡೆದ ಟೀಂ ಇಂಡಿಯಾ: ಶನಿವಾರ ಭಾರತ ಕ್ರಿಕೆಟ್‌ ತಂಡದ ಹಲವು ಆಟಗಾರರು ತಿರುವನಂತಪುರಂನ ಅನಂತಪದ್ಮನಾಭ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

3 ಮಾದರಿಯಲ್ಲೂ ಭಾರತಕ್ಕೆ ನಂ.1 ಸ್ಥಾನಕ್ಕೇರುವ ಅವಕಾಶ..!

ಭಾರತ ತಂಡವು ಸದ್ಯದಲ್ಲಿಯೇ ಎಲ್ಲಾ ಮೂರು ಮಾದರಿಯಲ್ಲಿ ವಿಶ್ವ ನಂ.1 ಸ್ಥಾನಕ್ಕೇರುವ ಸಾಧ್ಯತೆಯಿದೆ. ಈಗಾಗಲೇ ಟಿ20 ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಭಾರತ, ಮುಂಬರುವ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದರೂ ಸಹಾ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ. ಇನ್ನು ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ರೋಹಿತ್ ಶರ್ಮಾ ಪಡೆ ಸದ್ಯ 4ನೇ ಸ್ಥಾನದಲ್ಲಿದ್ದು, ಲಂಕಾ ಎದುರಿನ ಕೊನೆಯ ಪಂದ್ಯವನ್ನು ಗೆದ್ದು, ಆ ಬಳಿಕ ತವರಿನಲ್ಲೇ ನಡೆಯಲಿರುವ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದರೇ, ಟೀಂ ಇಂಡಿಯಾ ಏಕದಿನ ಶ್ರೇಯಾಂಕದಲ್ಲೂ ನಂ.1 ಸ್ಥಾನಕ್ಕೇರಲಿದೆ. ಇನ್ನು ನ್ಯೂಜಿಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯ ಬಳಿಕ ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಆಡಲಿದ್ದು, ಆ ಸರಣಿಯನ್ನು 4-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಅಥವಾ 3-1 ಅಂತರದಲ್ಲಿ ಜಯಿಸಿದರೇ, ಭಾರತಕ್ಕೆ ಟೆಸ್ಟ್ ಶ್ರೇಯಾಂಕದಲ್ಲೂ ನಂ.1 ಸ್ಥಾನಕ್ಕೇರಲು ಅವಕಾಶವಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಅಶ್‌ರ್‍ದೀಪ್‌ ಸಿಂಗ್, ಉಮ್ರಾನ್‌ ಮಲಿಕ್, ಮೊಹಮ್ಮದ್ ಸಿರಾಜ್‌.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಆವಿಷ್ಕಾ ಫೆರ್ನಾಂಡೋ ಫರ್ನಾಂಡೋ, ಕುಸಾಲ್‌ ಮೆಂಡಿಸ್, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಶುನ್ ಶಾನಕ(ನಾಯಕ), ವನಿಂದು ಹಸರಂಗ, ವೆಲ್ಲಾಲಗೆ, ಚಮಿಕಾ ಕರುಣರತ್ನೆ, ರಜಿತ, ಲಹಿರು.

ಪಂದ್ಯ: ಮಧ್ಯಾಹ್ನ 1.30ಕ್ಕೆ,

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?